ಬೈಬಲಿನಲ್ಲಿರುವ ರತ್ನಗಳು | ಎಸ್ತೇರಳು 1–5
ಎಸ್ತೇರಳು ದೇವಜನರ ಪರವಾಗಿ ನಿಂತಳು
ಎಸ್ತೇರಳು ದೇವಜನರ ಪರವಾಗಿ ಹೋರಾಡುವಾಗ ಬಲವಾದ ನಂಬಿಕೆ ಮತ್ತು ಧೈರ್ಯ ತೋರಿಸಿದಳು
ಅರಸನು ಕರೆಸಿದರೆ ಹೊರತು ಅವನಿರುವ ಒಳಗಣ ಪ್ರಾಕಾರಕ್ಕೆ ಹೋಗುವವರು ಮರಣದಂಡನೆಗೆ ಪಾತ್ರರಾಗುವ ಸಾಧ್ಯತೆ ಇತ್ತು. 30 ದಿನಗಳಿಂದ ಅರಸನು ಎಸ್ತೇರಳನ್ನು ಕರೆದಿರಲಿಲ್ಲ
ಒಂದನೇ ಸರ್ಕ್ಸೀಸ್ ಎಂದು ಸಹ ಕರೆಯಲಾಗಿದ್ದ ಅಹಷ್ವೇರೋಷನು ತುಂಬ ಕೋಪಿಷ್ಠನಾಗಿದ್ದನು. ಒಮ್ಮೆ ಆತನು ಇತರರಿಗೆ ಎಚ್ಚರಿಕೆ ಕೊಡಲಿಕ್ಕಾಗಿ ಒಬ್ಬ ಮನುಷ್ಯನನ್ನು ಎರಡು ತುಂಡುಗಳಾಗಿ ಕತ್ತರಿಸುವಂತೆ ಆಜ್ಞಾಪಿಸಿದನು. ವಷ್ಟಿರಾಣಿ ತನ್ನ ಮಾತನ್ನು ಕೇಳದೇ ಇದ್ದಾಗ ಅವಳನ್ನು ರಾಣಿಯ ಸ್ಥಾನದಿಂದ ತಳ್ಳಿಬಿಟ್ಟನು
ಎಸ್ತೇರಳು ತಾನೊಬ್ಬ ಯೆಹೂದ್ಯಳೆಂದು ಹೇಳಬೇಕಿತ್ತು ಮತ್ತು ಅರಸನು ಭರವಸೆ ಇಟ್ಟ ಸಲಹೆಗಾರನೇ ಅವನಿಗೆ ಮೋಸ ಮಾಡುತ್ತಿದ್ದಾನೆಂದು ಸ್ಪಷ್ಟಪಡಿಸಬೇಕಿತ್ತು