ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 79-86
ನಿಮ್ಮ ಜೀವನದಲ್ಲಿ ಅತೀ ಪ್ರಾಮುಖ್ಯವಾದ ವ್ಯಕ್ತಿ ಯಾರು?
ಕೀರ್ತನೆ 83 ನ್ನು ಬರೆದವನು ಲೇವಿಯನಾದ ಆಸಾಫನ ವಂಶದವನಾಗಿದ್ದಿರಬೇಕು. ಇವನು ದಾವೀದ ರಾಜನ ಸಮಯದಲ್ಲಿ ಜೀವಿಸಿದ್ದಿರಬೇಕು. ಯೆಹೋವನ ಜನರಿಗೆ ವಿರೋಧಿ ದೇಶಗಳಿಂದ ಅಪಾಯವಿದ್ದ ಸಮಯದಲ್ಲಿ ಈ ಕೀರ್ತನೆಯನ್ನು ಬರೆದನು.
ಕೀರ್ತನೆಗಾರನು ತನ್ನ ಪ್ರಾರ್ಥನೆಯಲ್ಲಿ ಸ್ವಂತ ರಕ್ಷಣೆಗಿಂತ ದೇವರ ಹೆಸರು ಮತ್ತು ಆತನ ಪರಮಾಧಿಕಾರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟನು
ಈ ದಿವಸಗಳಲ್ಲಿ ಸಹ ದೇವರ ಸೇವಕರು ಒಂದರ ಮೇಲೆ ಒಂದರಂತೆ ಆಕ್ರಮಣಗಳನ್ನು ಎದುರಿಸುತ್ತಿದ್ದಾರೆ. ನಾವು ನಂಬಿಗಸ್ತರಾಗಿ ತಾಳ್ಮೆಯಿಂದ ಇದ್ದರೆ ಯೆಹೋವನಿಗೆ ಮಹಿಮೆ ತರುತ್ತೇವೆ
ತನ್ನ ಹೆಸರನ್ನು ನಾವು ತಿಳಿದುಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ
ಯೆಹೋವನೇ ನಮ್ಮ ಜೀವನದಲ್ಲಿ ಅತೀ ಪ್ರಾಮುಖ್ಯ ವ್ಯಕ್ತಿ ಎಂದು ನಾವು ನಮ್ಮ ಕ್ರಿಯೆಗಳ ಮೂಲಕ ತೋರಿಸಬೇಕು