ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 27-31
ಗುಣವತಿಯಾದ ಪತ್ನಿಯಲ್ಲಿರಬೇಕಾದ ಗುಣಗಳು
ರಾಜ ಲೆಮೂವೇಲನಿಗೆ ಅವನ ತಾಯಿ ಕೊಟ್ಟ ಅಮೂಲ್ಯ ಸಲಹೆಗಳು ಜ್ಞಾನೋಕ್ತಿ 31ನೇ ಅಧ್ಯಾಯದಲ್ಲಿವೆ. ಇದರಿಂದ ಅವನು, ಒಬ್ಬ ಗುಣವತಿಯಾದ ಪತ್ನಿಯನ್ನು ಆರಿಸಿಕೊಳ್ಳುವಾಗ ಅವಳಲ್ಲಿ ಯಾವ ಗುಣಗಳನ್ನು ನೋಡಬೇಕು ಎಂದು ಕಲಿತನು.
ಗುಣವತಿಯಾದ ಪತ್ನಿ ಭರವಸಾರ್ಹಳಾಗಿ ಇರುತ್ತಾಳೆ
ಅವಳು ಅಧೀನಳಾಗಿದ್ದು, ಕುಟುಂಬಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಮಾಡುವಾಗ ಉತ್ತಮ ಸಲಹೆಗಳನ್ನು ಕೊಡುತ್ತಾಳೆ
ಆಕೆ ಒಳ್ಳೆಯ ನಿರ್ಣಯ ಮಾಡುತ್ತಾಳೆಂದು ಗಂಡ ಭರವಸೆ ಇಡುತ್ತಾನೆ. ಹಾಗಾಗಿ ಎಲ್ಲದಕ್ಕೂ ಆಕೆ ತನ್ನ ಒಪ್ಪಿಗೆ ಪಡೆಯಬೇಕೆಂದು ಅವನು ಒತ್ತಾಯಿಸುವುದಿಲ್ಲ
ಗುಣವತಿಯಾದ ಪತ್ನಿ ಕಷ್ಟಪಟ್ಟು ಕೆಲಸ ಮಾಡುತ್ತಾಳೆ
ಅವಳು ವಿವೇಚನೆಯಿಂದ ಖರ್ಚು ಮಾಡುತ್ತಾಳೆ, ಕುಟುಂಬಕ್ಕೆ ಆಹಾರವನ್ನು ಕೊಡುತ್ತಾಳೆ ಮತ್ತು ಬಟ್ಟೆ-ಬರೆ ಇತ್ಯಾದಿ ವಿಷಯಗಳಲ್ಲಿ ತನ್ನ ಕುಟುಂಬ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತಾಳೆ
ಅವಳು ಹಗಲೂ ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ, ಮನೆಯವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ
ಗುಣವತಿಯಾದ ಪತ್ನಿ ಆಧ್ಯಾತ್ಮಿಕ ವ್ಯಕ್ತಿಯಾಗಿರುತ್ತಾಳೆ
ದೇವರಿಗೆ ಭಯಪಡುತ್ತಾಳೆ ಮತ್ತು ಆತನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳುತ್ತಾಳೆ