ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 5
  • ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕವನ್ನು ಉಪಯೋಗಿಸುವ ವಿಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕವನ್ನು ಉಪಯೋಗಿಸುವ ವಿಧ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸುವಾಗ ಮಹಾ ಬೋಧಕನನ್ನು ಅನುಸರಿಸಿರಿ
    2007 ನಮ್ಮ ರಾಜ್ಯದ ಸೇವೆ
  • ಬೈಬಲ್‌ ಬೋಧನೆಗೆ ವಿಧೇಯರಾಗುವಂತೆ ಇತರರಿಗೆ ಸಹಾಯ ನೀಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಬೈಬಲ್‌ ಬೋಧಿಸುತ್ತದೆ ಪುಸ್ತಕ—ನಮ್ಮ ಬೈಬಲ್‌ ಅಧ್ಯಯನದ ಮುಖ್ಯ ಸಹಾಯಕ
    2006 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ಚೌಕ
    2008 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 5

ನಮ್ಮ ಕ್ರೈಸ್ತ ಜೀವನ

ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕವನ್ನು ಉಪಯೋಗಿಸುವ ವಿಧ

ಬೈಬಲ ನಮಗೆ ಏನು ಕಲಿಸುತ್ತದೆ?

ಬೈಬಲ್‌ ಕಲಿಸುತ್ತದೆ ಮತ್ತು ಬೈಬಲ್‌ ಬೋಧಿಸುತ್ತದೆ ಇವರೆಡು ಒಂದೇ ರೀತಿಯ ಪುಸ್ತಕಗಳು. ಈ ಎರಡು ಬೋಧನಾ ಸಲಕರಣೆಗಳು ಕಲಿಸುವ ಸತ್ಯ ಒಂದೇ. ಅಲ್ಲದೆ, ಅದನ್ನು ಒಂದೇ ಕ್ರಮದಲ್ಲಿ ಕಲಿಸುತ್ತದೆ. ಆದರೆ, ಬೈಬಲ್‌ ಕಲಿಸುತ್ತದೆ ಪುಸ್ತಕದಲ್ಲಿ ಸುಲಭ ಪದಗಳನ್ನು ಮತ್ತು ತರ್ಕಗಳನ್ನು ಉಪಯೋಗಿಸಲಾಗಿದೆ. ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಅರ್ಥಮಾಡಿಕೊಳ್ಳಲು ಯಾರಿಗೆ ಕಷ್ಟವಾಗುತ್ತದೋ ಅವರಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ. ಬೈಬಲ್‌ ಕಲಿಸುತ್ತದೆ ಪುಸ್ತಕದಲ್ಲಿ ಪರಿಶಿಷ್ಟಗಳ ಬದಲು ಟಿಪ್ಪಣಿಗಳಿವೆ. ಇದರಲ್ಲಿ ಅಧ್ಯಾಯದಲ್ಲಿರುವ ಪದಗಳನ್ನು ಮತ್ತು ವಿಷಯಗಳನ್ನು ಸುಲಭವಾಗಿ ವಿವರಿಸಲಾಗಿದೆ. ಅಧ್ಯಾಯದ ಆರಂಭದಲ್ಲಿ ಪ್ರಶ್ನೆಗಳು ಮತ್ತು ಕೊನೆಯಲ್ಲಿ ಪುನರವಲೋಕನ ಚೌಕ ಇಲ್ಲ. ಅದರ ಬದಲು ಅಧ್ಯಾಯದ ಕೊನೆಯಲ್ಲಿ, ವಿಷಯಗಳನ್ನು ಸಾರಾಂಶಿಸುವ ‘ನಾನೇನು ಕಲಿತೆ’ ಎಂಬ ವೈಶಿಷ್ಟ್ಯವಿದೆ. ಬೈಬಲ್‌ ಬೋಧಿಸುತ್ತದೆ ಪುಸ್ತಕದಂತೆಯೇ ಬೈಬಲ್‌ ಕಲಿಸುತ್ತದೆ ಪುಸ್ತಕವನ್ನು ಯಾವಾಗ ಬೇಕಾದರೂ ನೀಡಬಹುದು. ಅದು ತಿಂಗಳ ನೀಡುವಿಕೆ ಅಲ್ಲದಿದ್ದಾಗಲೂ ನೀಡಬಹುದು. ಬೈಬಲ್‌ ಕಲಿಸುತ್ತದೆ ಪುಸ್ತಕದಿಂದ ಬೈಬಲ್‌ ಅಧ್ಯಯನ ಮಾಡುವಾಗ ಇದರಲ್ಲಿರುವ ಅಪೂರ್ವ ವೈಶಿಷ್ಟ್ಯಗಳನ್ನು ಹೇಗೆ ಉಪಯೋಗಿಸಬಹುದು?

ಬೈಬಲ್‌ ಕಲಿಸುತ್ತದೆ ಪುಸಕ್ತದಲ್ಲಿರುವ ‘ನಾನೇನು ಕಲಿತೆ’ ಭಾಗ

ನಾನೇನು ಕಲಿತೆ: ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ನಾವು ಬೈಬಲ್‌ ಅಧ್ಯಯನ ನಡೆಸುವಾಗ ಸಾಮಾನ್ಯವಾಗಿ ಪ್ಯಾರ ಓದಿ ಪ್ರಶ್ನೆಗಳನ್ನು ಕೇಳುತ್ತೇವೆ. ಒಂದುವೇಳೆ ವಿದ್ಯಾರ್ಥಿಗೆ ಭಾಷೆ ಸರಿಯಾಗಿ ಗೊತ್ತಿಲ್ಲದಿದ್ದರೆ ಅಥವಾ ಸರಿಯಾಗಿ ಓದಲು ಬರದಿದ್ದರೆ ಬೈಬಲ್‌ ಕಲಿಸುತ್ತದೆ ಪುಸ್ತಕವನ್ನು ಉಪಯೋಗಿಸಬಹುದು. ಅವರಿಗೆ ‘ನಾನೇನು ಕಲಿತೆ’ ಎಂಬ ಭಾಗದಿಂದ ಅಧ್ಯಯನ ಮಾಡಿ, ಸ್ವಂತ ಸಮಯದಲ್ಲಿ ಅಧ್ಯಾಯವನ್ನು ಓದುವಂತೆ ಉತ್ತೇಜಿಸಬಹುದು. ಅವರೊಂದಿಗೆ, ‘ನಾನೇನು ಕಲಿತೆ’ ಎಂಬ ಭಾಗದಲ್ಲಿರುವ ಒಂದು ಅಂಶವನ್ನು ಚರ್ಚಿಸಬಹುದು. ಇದಕ್ಕೆ 15 ನಿಮಿಷ ಹಿಡಿಯುತ್ತೆ ಅಷ್ಟೆ. ಆದರೆ ಮುಖ್ಯ ಪಾಠದಲ್ಲಿರುವ ಎಲ್ಲ ವಿಷಯಗಳು ಈ ಭಾಗದಲ್ಲಿ ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಯ ಅಗತ್ಯವನ್ನು ಮನಸ್ಸಿನಲ್ಲಿಟ್ಟು ಶಿಕ್ಷಕನು ಒಳ್ಳೇ ತಯಾರಿ ಮಾಡಬೇಕು. ಒಂದುವೇಳೆ ಶಿಕ್ಷಕನು ಅಧ್ಯಾಯದಿಂದ ನೇರವಾಗಿ ಅಧ್ಯಯನ ನಡೆಸಲು ನಿರ್ಣಯಿಸಿದರೆ ‘ನಾನೇನು ಕಲಿತೆ’ ಎಂಬ ಭಾಗವನ್ನು ಪುನರವಲೋಕಿಸಬಹುದು.

ಬೈಬಲ್‌ ಕಲಿಸುತ್ತದೆ ಪುಸ್ತಕದಲ್ಲಿರುವ ಟಿಪ್ಪಣಿಗಳು

ಟಿಪ್ಪಣಿಗಳು: ಟಿಪ್ಪಣಿಗಳಲ್ಲಿರುವ ಪದಗಳು ಮತ್ತು ವಿಷಯಗಳನ್ನು ಅವು ಅಧ್ಯಾಯಗಳಲ್ಲಿ ಬರುವ ಕ್ರಮದಲ್ಲೇ ಕೊಡಲಾಗಿದೆ. ಅಧ್ಯಯನ ನಡೆಸುವಾಗ ಬೈಬಲ್‌ ಕಲಿಸುತ್ತದೆ ಪುಸಕ್ತದಲ್ಲಿರುವ ಟಿಪ್ಪಣಿಗಳನ್ನು ಚರ್ಚಿಸಬೇಕಾ ಬೇಡವಾ ಎಂದು ಶಿಕ್ಷಕನೇ ನಿರ್ಣಯಿಸಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ