ಬೈಬಲಿನಲ್ಲಿರುವ ರತ್ನಗಳು | ಯೆಶಾಯ 34-37
ಹಿಜ್ಕೀಯನ ನಂಬಿಕೆಗೆ ಫಲ ಸಿಕ್ಕಿತು
ಯೆರೂಸಲೇಮ್ ಪಟ್ಟಣ ತನಗೆ ಶರಣಾಗತ ಆಗಬೇಕೆಂದು ತಿಳಿಸಲು ರಾಜ ಸನ್ಹೇರೀಬನು ರಬ್ಷಾಕೆಯನ್ನು ಯೆರೂಸಲೇಮಿಗೆ ಕಳುಹಿಸಿದನು. ಯೆಹೂದ್ಯರು ಯುದ್ಧಮಾಡದೆ ಶರಣಾಗುವಂತೆ ಮಾಡಲು ಈ ಅಶ್ಶೂರ್ಯರು ಅನೇಕ ರೀತಿಯಲ್ಲಿ ಮಾತಾಡಿದರು.
ನಮಗ್ಯಾರೂ ಇಲ್ಲ ಎಂಬ ಭಾವನೆ. ಐಗುಪ್ತದಿಂದ ನಿಮಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ.—ಯೆಶಾ 36:6
ಸಂಶಯ. ಯೆಹೋವನಿಗೆ ನಿಮ್ಮ ಬಗ್ಗೆ ಬೇಸರವಾಗಿದೆ, ಆದ್ದರಿಂದ ಆತನು ನಿಮಗೋಸ್ಕರ ಹೋರಾಡುವುದಿಲ್ಲ.—ಯೆಶಾ 36:7, 10
ಭಯ. ಬಲಿಷ್ಠ ಅಶ್ಶೂರ್ಯ ಸೈನ್ಯದ ಎದುರು ನಿಲ್ಲಲು ನಿಮ್ಮಿಂದ ಸಾಧ್ಯವಿಲ್ಲ. —ಯೆಶಾ 36:8, 9
ಆಸೆ. ಅಶ್ಶೂರ್ಯರಿಗೆ ಶರಣಾಗತರಾದರೆ ನಿಮ್ಮ ಜೀವನ ಉತ್ತಮವಾಗುತ್ತದೆ. —ಯೆಶಾ 36:16, 17
ಹಿಜ್ಕೀಯನು ಯೆಹೋವನಲ್ಲಿ ದೃಢ ನಂಬಿಕೆ ಇಟ್ಟನು
ಮುತ್ತಿಗೆ ಹಾಕಿದರೆ ಅದನ್ನು ಎದುರಿಸಲು ತನ್ನಿಂದಾದ ಎಲ್ಲಾ ತಯಾರಿಗಳನ್ನು ಮಾಡಿದನು
ತಮ್ಮನ್ನು ಸಂರಕ್ಷಿಸುವಂತೆ ಯೆಹೋವನಿಗೆ ಪ್ರಾರ್ಥಿಸಿದನು ಮತ್ತು ಜನರಿಗೂ ಹಾಗೇ ಮಾಡುವಂತೆ ಉತ್ತೇಜನ ನೀಡಿದನು
ಯೆಹೋವನು ತನ್ನ ದೇವದೂತನನ್ನು ಕಳುಹಿಸಿ ಒಂದೇ ರಾತ್ರಿಯಲ್ಲಿ ಅಶ್ಶೂರ್ಯರ 1ಲಕ್ಷ 85ಸಾವಿರ ಸೈನಿಕರನ್ನು ಸಾಯಿಸಿದಾಗ ಹಿಜ್ಕೀಯನ ನಂಬಿಕೆಗೆ ಫಲ ಸಿಕ್ಕಿತು