ಬೈಬಲಿನಲ್ಲಿರುವ ರತ್ನಗಳು | ಯೆಶಾಯ 38-42
ಯೆಹೋವನು ದಣಿದವರಿಗೆ ಶಕ್ತಿ ಕೊಡುತ್ತಾನೆ
ಹದ್ದು, ಮೇಲಕ್ಕೇರುವ ಶಾಖಾನಿಲವೆಂದು ಕರೆಯಲ್ಪಡುವ ಬಿಸಿಗಾಳಿಯನ್ನು ಸದುಪಯೋಗಿಸಿಕೊಂಡು ಅನೇಕ ತಾಸುಗಳವರೆಗೆ ಹಾರಾಡುತ್ತಾ ಇರಬಲ್ಲದು. ಅದು ಶಾಖಾನಿಲದೊಳಗೆ ಸುತ್ತಾಡುವಾಗ ಹೆಚ್ಚೆಚ್ಚು ಎತ್ತರಕ್ಕೆ ಕೊಂಡೊಯ್ಯಲ್ಪಡುತ್ತದೆ. ಒಂದು ನಿರ್ದಿಷ್ಟ ಎತ್ತರವನ್ನು ತಲಪಿದಾಗ ಅದು ಮುಂದಿನ ಶಾಖಾನಿಲಕ್ಕೆ ಹೋಗಿ ಇದೇ ರೀತಿ ಮಾಡುತ್ತದೆ
ಹೆಚ್ಚು ಆಯಾಸ ಮಾಡಿಕೊಳ್ಳದೆ ಹಾರುವ ಹದ್ದಿನ ಉಪಾಯವು ನಾವು ಯೆಹೋವನು ಕೊಡುವ ಶಕ್ತಿಯಿಂದ ಹೇಗೆ ಆತನ ಆರಾಧನೆಯನ್ನು ಮಾಡಲು ಸಾಧ್ಯವೆಂದು ತೋರಿಸಿಕೊಡುತ್ತದೆ