ಹದ್ದುಗಳೋ, ರಣಹದ್ದುಗಳೋ?
ಆ ಸೂಚನೆ
“ಹೆಣ ಬಿದ್ದಲ್ಲಿ ಹದ್ದುಗಳು ಕೂಡುವವವು.” (ಮತ್ತಾಯ 24:48) ಈ ದೃಷ್ಟಾಂತದಿಂದ ಪಾಠ ಕಲಿಯುವ ಬದಲಿಗೆ ಕೆಲವರು ತಪ್ಪು ಹಾಕುತ್ತಾರೆ. ಹದ್ದುಗಳು ಒಂಟಿಯಾಗಿ ಬೇಟೆ ಮಾಡುತ್ತದೆಂದೂ ಹೆಣಗಳನ್ನಲ್ಲ, ಜೀವಿತ ಪ್ರಾಣಿಗಳನ್ನು ತಿನ್ನುತ್ತವೆಂದೂ ಅವರ ಹೇಳಿಕೆ. ಆದುದರಿಂದ ಕೆಲವು ಬೈಬಲುಗಳು “ರಣಹದ್ದುಗಳು” ಎಂಬುದನ್ನು ಇಲ್ಲಿ ಉಪಯೋಗಿಸುತ್ತೇವೆ. ಆದರೆ ಇಲ್ಲಿ ಗ್ರೀಕ್ ಪದವಾದ ಅ-ಈ-ಟೋಸ್ ಎಂಬುದನ್ನು “ಹದ್ದು” ಎಂದು ಸರಿಯಾಗಿಯೇ ಭಾಷಾಂತರಿಸಲಾಗಿದೆ.
ಇಸ್ರಾಯೇಲಿನಲ್ಲಿ ಕಂಡು ಬರುವ ಒಂದು ಜಾತಿ ಕಂದು ಬಣ್ಣದ ಹದ್ದು. ಜಾನ್ ಸಂಕ್ಲೇರ್ ಮತ್ತು ಮೆಂಡಲ್‌ಸನ್ ಹೇಳುವುದು: “ಅನೇಕ ಹಿಂಸ್ರ ಪಕ್ಷಿಗಳಂತೆ ಕಂದು ಹದ್ದು ಹೆಣವನ್ನು ಹೇವರಿಸದೆ ಅನೇಕ ಸಲ ಹೊಸದಾಗಿ ಕೊಲ್ಲಲ್ಪಟ್ಟ ಪ್ರಾಣಿ ಇರುವ ಸ್ಥಳದಲ್ಲಿ ಪ್ರಥಮವಾಗಿ ಆಗಮಿಸುವ ಪಕ್ಷಿಗಳಲ್ಲಿ ಒಂದಾಗಿದೆ. ಇನ್ನೊಬ್ಬ ಪ್ರೇಕ್ಷಕನು ಆಫ್ರಿಕದ ಕಾಲಹಾರಿ ಮರುಭೂಮಿಯಲ್ಲಿ 60 ಬ್ಯಾಟಿಲೂರ್ ಮತ್ತು ಕಂದು ಹದ್ದುಗಳನ್ನು ನೋಡಿದನು. ಅವನು ಹೇಳಿದ್ದು: “ಕಂದು ಹದ್ದು ಹೆಣವಿರುವಲ್ಲಿ ಪ್ರಧಾನ ಸ್ಥಾನದಲ್ಲಿರುತ್ತದೆ. ಅನೇಕಾವರ್ತಿ, ಜೊತೆಯಾಗಿರಬಹುದಾದ ಎರಡು ಹದ್ದುಗಳು ಒಂದು ಹೆಣದಲ್ಲಿ ಪಾಲಿಗರಾಗಿರುವುದನ್ನು ನೋಡಲಾಗಿದೆ.”
ಭುಮಧ್ಯ ಸಮುದ್ರ ದೇಶಗಳಲ್ಲಿ ಕಡಲ ಹದ್ದು ಸಹ ಸಾಮಾನ್ಯ, ಗತಶತಕಗಳಲ್ಲಿ ಕಡಲ ಹದ್ದು ಮತ್ತು ನೆಲ ಹದ್ದುಗಳು ಯುದ್ಧದಲ್ಲಿ ಸತ್ತ ಕುದುರೆಗಳ ಶವಗಳನ್ನು ತಿಂದಿವೆ. ಮೆಕ್ಲಿಂಟಕ್ ಆ್ಯಂಡ್ ಸ್ಟ್ರಾಂಗ್ಸ್ ಸೈಕ್ಲೋಪೀಡಿಯ ಹೇಳುವುದು: “ಈ ಉದ್ದೇಶದಿಂದ ಅವು ಸೈನ್ಯಗಳನ್ನು ಹಿಂಬಾಲಿಸುವುದು. . . . ಸುಪರಿಚಿತ ವಿಷಯ.”
ವೇಗಿಗಳೂ ದೂರದೃಷ್ಟಿಯವುಗಳೂ ಆಗಿರುವುದರಿಂದ ಕೆಲವು ಸಲ ಹದ್ದುಗಳು ಹೊಸ ಶವ ಬಿದ್ದಿರುವಲ್ಲಿ ಬಂದು ಮುಟ್ಟುವ ಪಕ್ಷಿಗಳಲ್ಲಿ ಮೊದಲನೆಯವು. ಯೆಹೋವ ದೇವರು ಯೋಬನನ್ನು ತಗ್ಗಿಸಲಿಕ್ಕಾಗಿ ಕೇಳಿದ ಈ ಪ್ರಶ್ನೆಯಲ್ಲಿದ್ದ ವರ್ಣನೆ ಯೇಸುವಿಗೆ ಸುಪರಿಚಿತವಾಗಿತ್ತು: “ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ ಗೂಡುಮಾಡುವದು ನಿನ್ನ ಅಪ್ಪಣೆಯಿಂದಲೋ? . . . . ಅದು ಶಿಲಾಶಿಖರದಲ್ಲಿಯೂ ದುರ್ಗದಲ್ಲಿಯೂ ತಂಗುವದು. ಅಲ್ಲಿಂದಲೇ ಬೇಟೆಯನ್ನು ನೋಡುತ್ತಾ ದೂರದಿಂದಲೇ ಅದನ್ನು ಕಂಡು ಹಿಡಿಯುವದು. . . . ಹತರಿದ್ದಲ್ಲಿ ಹದ್ದು.”—ಯೋಬ 39:27-30.
ಹೀಗೆ ಯೇಸು, ಸಾಂಕೇತಿಕ ಹದ್ದಿನ ಕಣ್ಣುಳ್ಳವರು ಮಾತ್ರ ಆ ಸೂಚನೆಯನ್ನು ನೋಡುವರೆಂಬುದನ್ನು ಉತ್ತಮವಾಗಿ ಚಿತ್ರಿಸಿದನು.