ನಮ್ಮ ಕ್ರೈಸ್ತ ಜೀವನ
ದೈವಿಕ ಗುಣಗಳನ್ನು ಬೆಳೆಸಿಕೊಳ್ಳಿ—ದೀನತೆ
ಏಕೆ ಪ್ರಾಮುಖ್ಯ:
ದೀನತೆಯಿದ್ದರೆ ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಲು ಸಾಧ್ಯವಾಗುತ್ತದೆ.—ಕೀರ್ತ 138:6
ದೀನತೆ ಇದ್ದರೆ ಇತರರೊಂದಿಗಿನ ಸಂಬಂಧ ಚೆನ್ನಾಗಿರುತ್ತದೆ.—ಫಿಲಿ 2:3, 4
ಅಹಂಕಾರ ಎಲ್ಲವನ್ನೂ ಹಾಳುಮಾಡುತ್ತದೆ.—ಜ್ಞಾನೋ 16:18; ಯೆಹೆ 28:17
ಹೇಗೆ ಬೆಳೆಸಿಕೊಳ್ಳುವುದು:
ಸಲಹೆಯನ್ನು ಕೇಳಿ, ಅನ್ವಯಿಸಿ.—ಕೀರ್ತ 141:5; ಜ್ಞಾನೋ 19:20
ಜನರು ಕೀಳಾದದ್ದೆಂದು ಭಾವಿಸುವ ಕೆಲಸವನ್ನು ಇತರರಿಗಾಗಿ ಸಿದ್ಧಮನಸ್ಸಿನಿಂದ ಮಾಡಿ.—ಮತ್ತಾ 20:25-27
ನಿಮ್ಮ ಸಾಮರ್ಥ್ಯ ಅಥವಾ ಸುಯೋಗಗಳಿಂದಾಗಿ ನಿಮ್ಮಲ್ಲಿ ಅಹಂಕಾರ ಹುಟ್ಟದಂತೆ ನೋಡಿಕೊಳ್ಳಿ.—ರೋಮ 12:3
ನಾನು ಇನ್ನೂ ಹೆಚ್ಚು ದೀನತೆಯನ್ನು ಹೇಗೆಲ್ಲಾ ತೋರಿಸಬಹುದು?
ನಿಷ್ಠೆಯನ್ನು ಕೆಡಿಸುವ ವಿಷಯಗಳಿಂದ ದೂರವಿರಿ—ಅಹಂಕಾರ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:
ಸಲಹೆಗಳಿಗೆ ನಾವು ಪ್ರತಿಕ್ರಿಯಿಸುವ ರೀತಿ ನಮ್ಮ ಮನೋಭಾವದ ಬಗ್ಗೆ ಏನನ್ನು ತೋರಿಸಿಕೊಡುತ್ತದೆ?
ದೀನತೆಯನ್ನು ಬೆಳೆಸಿಕೊಳ್ಳಲು ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತದೆ?
ದೀನತೆಯನ್ನು ತೋರಿಸುವ ಕೆಲವು ವಿಧಗಳು ಯಾವುವು?