ಬೈಬಲಿನಲ್ಲಿರುವ ರತ್ನಗಳು | ಯೋವೇಲ 1-3
‘ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು’
ಅಭಿಷಿಕ್ತ ಕ್ರೈಸ್ತರು ಪ್ರವಾದಿಸುವ ಕೆಲಸದಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದಾರೆ. ಅವರು ‘ದೇವರ ಮಹೋನ್ನತ ಕಾರ್ಯಗಳ’ ಬಗ್ಗೆ ಮಾತಾಡುತ್ತಾರೆ ಮತ್ತು ‘ರಾಜ್ಯದ ಸುವಾರ್ತೆಯನ್ನು’ ಸಾರುತ್ತಾರೆ. (ಅಕಾ 2:11, 17-21; ಮತ್ತಾ 24:14) ಬೇರೆ ಕುರಿಗಳು ಈ ಕೆಲಸದಲ್ಲಿ ಭಾಗವಹಿಸುವ ಮೂಲಕ ಅವರನ್ನು ಬೆಂಬಲಿಸುತ್ತಾರೆ
‘ಯೆಹೋವನ ನಾಮದಲ್ಲಿ ಬೇಡಿಕೊಳ್ಳುವುದು’ ಅಂದರೇನು?
ಹೆಸರನ್ನು ತಿಳಿಯುವುದು
ಹೆಸರನ್ನು ಗೌರವಿಸುವುದು
ಆ ಹೆಸರನ್ನು ಹೊಂದಿರುವವನನ್ನು ಅವಲಂಬಿಸುವುದು ಮತ್ತು ಅವನ ಮೇಲೆ ಭರವಸೆಯಿಡುವುದು
ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಪ್ರವಾದಿಸುವ ಕೆಲಸದಲ್ಲಿ ನಾನು ಅಭಿಷಿಕ್ತರನ್ನು ಹೇಗೆ ಬೆಂಬಲಿಸಬಹುದು?’