ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರ್ರಿ!
ಬ್ರಾಜಿಲ್ ದೇಶದ ದಂಪತಿಗಳೊಬ್ಬರು ರಾತ್ರಿಯಲ್ಲಿ ಮಲಗಿದ್ದಾಗ ಮನೆಯೊಳಗೆ ಕಳ್ಳರು ಹೊಗ್ಗುವ ಸದ್ದು ಅವರಿಗೆ ಕೇಳಿಸಿತು. ಗಾಬರಿಗೊಂಡ ಆ ದಂಪತಿಗಳು ಮಲಗುವ ಕೋಣೆಯ ಕಿಟಿಕಿಯ ಮೂಲಕ ತಪ್ಪಿಸಿಕೊಳ್ಳಶಕ್ತರಾದರು ಮತ್ತು ಪೊಲೀಸರನ್ನು ಕರೆದರು. ಆದರೆ ಆ ಅನುಭವದ ನಂತರ ಪತ್ನಿಯು ಎಷ್ಟು ಮನಕೆಡಿಸಿಕೊಂಡಳೆಂದರೆ ಆ ಮನೆಯಲ್ಲಿ ಅವಳಿಗೆ ಮಲಗಲಿಕ್ಕಾಗಲಿಲ್ಲ, ಅವಳ ತಾಯಿಯ ಮನೆಗೆ ಹೋಗಬೇಕಾಯಿತು.
ಯಾರ ಮನೆಯಲ್ಲಿ ಕಳ್ಳತನವಾಗಿದೆಯೇ ಅವರು ಅಥವಾ ಬೇರೆ ಯಾವುದೇ ರೀತಿಯಲ್ಲಿ ಕಳ್ಳತನಕ್ಕೆ ಗುರಿಯಾದ ಇತರರು ಅವಳೊಂದಿಗೆ ಸಹಾನುಭೂತಿ ತೋರಿಸುವರು. ಅಂಥಾ ಒಂದು ಅನುಭವವು ಸ್ಥೈರ್ಯಗೆಡಿಸುವಂಥಾದ್ದು, ಮತ್ತು ಖೇಧಕರವಾಗಿ ಅಧಿಕಾಧಿಕ ಜನರು ಈ ರೀತಿಯಲ್ಲಿ ಕಷ್ಟಾನುಭವಕ್ಕೆ ಗುರಿಯಾಗುತ್ತಾರೆ. ಆದರೂ ಇದಕ್ಕಿಂತ ಹೆಚ್ಚು ಗಂಭೀರ ಅಂತ್ಯಫಲವನ್ನು ತರುವ ಒಂದು ರೀತಿಯ ಕಳ್ಳತನ ಅಲ್ಲಿದೆ.
ಈ ಅಧಿಕ ಗಂಭೀರ ತರದ ಕಳ್ಳತನ ಯಾವುದು, ಮತ್ತು ಆ ಕಳ್ಳರು ಯಾರು? ನಮ್ಮ ದಿನಗಳ ಕುರಿತು ಮಾತಾಡುವಾಗ, ಅದರ ಕುರಿತು ಯೇಸು ನಮಗೆ ತುಸು ಮಾಹಿತಿಯನ್ನು ಕೊಟ್ಟಿರುತ್ತಾನೆ, ಆತನಂದದ್ದು: “ಬಹು ಮಂದಿ ಸುಳ್ಳು ಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು.” (ಮತ್ತಾಯ 24:11) ಸುಳ್ಳು ಪ್ರವಾದಿಗಳು ಕಳ್ಳರು. ಯಾವ ರೀತಿಯಲ್ಲಿ? ಅವರು ಏನನ್ನು ಕದಿಯುತ್ತಿದ್ದಾರೆ? ಅವರ ಕಳ್ಳತನವು ಅವರು ಪ್ರವಾದಿಸುವುದರೊಂದಿಗೆ ಜತೆಗೂಡಿದೆ. ಹೀಗೆ ವಿಷಯವನ್ನು ಪೂರ್ಣವಾಗಿ ತಿಳಿಯಲಿಕ್ಕಾಗಿ, ಬೈಬಲಿಗನುಸಾರವಾಗಿ ಪ್ರವಾದಿಸುವುದು ಎಂದರೇನೆಂದು ನಾವು ಮೊದಲಾಗಿ ತಿಳಿಯುವ ಅಗತ್ಯವಿದೆ.
ಪ್ರವಾದಿಸುವುದು ಅಂದರೇನು?
ಪ್ರವಾದಿಸುವುದರ ಕುರಿತು ನಾವು ಆಲೋಚಿಸುವಾಗ ಪ್ರಾಯಶಃ ಮೊದಲಾಗಿ ನಿಮ್ಮ ಮನಸ್ಸಿಗೆ ಬರುವಂಥಾದ್ದು, ಭವಿಷ್ಯದ ಕುರಿತು ಮುಂತಿಳಿಸುವುದೇ. ಇದು ದೇವರ ಪುರಾತನ ಪ್ರವಾದಿಗಳ ಕಾರ್ಯದ ಒಂದು ಮುಖವಾಗಿತ್ತು ನಿಶ್ಚಯ, ಆದರೆ ಅದು ಅವರ ಮುಖ್ಯ ಕೆಲಸವಾಗಿರಲಿಲ್ಲ. ದೃಷ್ಟಾಂತಕ್ಕಾಗಿ, ಒಂದು ದರ್ಶನದಲ್ಲಿ ಪ್ರವಾದಿಯಾದ ಯೆಹೆಜ್ಕೇಲನಿಗೆ, “ಗಾಳಿಗೆ ಪ್ರವಾದಿಸು” ವಂತೆ ಅಪ್ಪಣೆ ಕೊಡಲಾಗಿ ಅವನು ಕೇವಲ ದೇವರಿಂದ ಬಂದ ಆ ಅಪ್ಪಣೆಯನ್ನು ಮರುನುಡಿಯಬೇಕಾಗಿತ್ತು. (ಯೆಹೆಜ್ಕೇಲ 37:9, 10, NW) ಯೇಸು ಮಹಾಯಾಜಕರ ಮುಂದೆ ವಿಚಾರಣೆಗೆ ಗುರಿಯಾಗಿದ್ದಾಗ, ಹಿಂಸಕರು ಅವನ ಮೇಲೆ ಉಗುಳಿ, ಅವನ ಕೆನ್ನೆಗೆ ಹೊಡೆದು ಪರಿಹಾಸ್ಯ ಮಾಡುತ್ತಾ ಅಂದದ್ದು: “ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು.” ಯೇಸು ಭವಿಷ್ಯತ್ತನ್ನು ಮುಂತಿಳಿಸುವಂತೆ ಅವರು ಹೇಳುತ್ತಿದದ್ದಲ್ಲ. ಅವನಿಗೆ ಹೊಡೆದವರು ಯಾರೆಂದು ದೇವರ ಶಕಿಯ್ತಿಂದ ಗುರುತಿಸುವಂತೆ ಅವರು ಆತನನ್ನು ಪಂಥಾಹ್ವಾನಕ್ಕೆ ಕರೆದಿದ್ದರು.—ಮತ್ತಾಯ 26:67, 68.
ವಾಸ್ತವದಲ್ಲಿ, “ಪ್ರವಾದಿಸು” ಅಥವಾ “ಪ್ರವಾದನೆ” ಎಂದು ಭಾಷಾಂತರಿಸಲ್ಪಟ್ಟ ಮೂಲ ಬೈಬಲ್ ಭಾಷಾ ಪದಗಳಿಂದ ಅಭಿಪ್ರಯಿಸಲ್ಪಟ್ಟಿದ್ದ ಮುಖ್ಯ ವಿಚಾರವು ಒಂದು ವಿಷಯದ ಮೇಲೆ ದೇವರ ಸಂಕಲ್ಪವನ್ನು ತಿಳಿಸುವುದು ಅಥವಾ, ಅಪೊಸ್ತಲರ ಕೃತ್ಯಗಳು ತಿಳಿಸುವ ಪ್ರಕಾರ, “ದೇವರ ಮಹತ್ತುಗಳ ಕುರಿತು” ಹೇಳುವುದಾಗಿದೆ. (ಅಪೊಸ್ತಲರ ಕೃತ್ಯಗಳು 2:11) ಈ ಅರ್ಥದಲ್ಲಿ ಅನೇಕ ಜನರು ಸುಳ್ಳು ಪ್ರವಾದಿಗಳಿಂದ ದೋಚಲ್ಪಡುತ್ತಿದ್ದಾರೆ.
ಈ ಸುಳ್ಳು ಪ್ರವಾದಿಗಳಾದರೂ ಯಾರು, ಮತ್ತು ಅವರು ಕದಿಯುವುದು ಏನನ್ನು? ಈ ಪ್ರಶ್ನೆಯನ್ನು ಉತ್ತರಿಸಲು, ಇಸ್ರಾಯೇಲ್ ಜನಾಂಗದ ಇತಿಹಾಸದಲ್ಲಿ ಯೆರೆಮೀಯನ ಸಮಯಕ್ಕೆ ನಾವು ಹಿಂತೆರಳೋಣ. (w92 2/1)