ಬೈಬಲಿನಲ್ಲಿರುವ ರತ್ನಗಳು | ಚೆಫನ್ಯ 1–ಹಗ್ಗಾಯ 2
ಯೆಹೋವನ ಸಿಟ್ಟಿನ ದಿನ ಬರುವ ಮೊದಲೇ ಆತನನ್ನು ಆಶ್ರಯಿಸಿ
ಯೆಹೋವನು ನಮ್ಮನ್ನು ತನ್ನ ಸಿಟ್ಟಿನ ದಿನದಲ್ಲಿ ಮರೆಮಾಡಬೇಕಾದರೆ ನಮ್ಮನ್ನು ಆತನಿಗೆ ಸಮರ್ಪಿಸಿಕೊಂಡರೆ ಮಾತ್ರ ಸಾಕಾಗುವುದಿಲ್ಲ. ಚೆಫನ್ಯನು ಇಸ್ರಾಯೇಲ್ಯರಿಗೆ ಕೊಟ್ಟ ಈ ನಿರ್ದೇಶನಗಳನ್ನು ನಾವು ಪಾಲಿಸಬೇಕು.
ಯೆಹೋವನನ್ನು ಆಶ್ರಯಿಸಿರಿ: ಯೆಹೋವನ ಸಂಘಟನೆಯ ಸಹಾಯದಿಂದ ಆತನೊಟ್ಟಿಗೆ ಪ್ರೀತಿಯ ವೈಯಕ್ತಿಕ ಸಂಬಂಧವನ್ನು ಕಾಪಾಡಿಕೊಳ್ಳಿ
ಸದ್ಧರ್ಮವನ್ನು ಅಭ್ಯಾಸಿಸಿರಿ: ಯೆಹೋವನ ನೀತಿಯ ಮಟ್ಟಗಳನ್ನು ಪಾಲಿಸಿರಿ
ದೈನ್ಯವನ್ನು ಹೊಂದಿಕೊಳ್ಳಿರಿ: ದೇವರ ಚಿತ್ತಕ್ಕೆ ದೀನತೆಯಿಂದ ಅಧೀನರಾಗಿರಿ ಮತ್ತು ಆತನು ಕೊಡುವ ಶಿಸ್ತನ್ನು ಸ್ವೀಕರಿಸಿ
ಯೆಹೋವನನ್ನು ಆಶ್ರಯಿಸಿಕೊಳ್ಳುವುದು, ಸದ್ಧರ್ಮವನ್ನು ಅಭ್ಯಾಸಿಸುವುದು, ದೈನ್ಯವನ್ನು ಹೊಂದಿಕೊಳ್ಳುವುದು, ಇವೆಲ್ಲವನ್ನೂ ನಾನು ಹೇಗೆ ಇನ್ನೂ ಹೆಚ್ಚಾಗಿ ಮಾಡಬಹುದು?