ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 25
“ಸದಾ ಎಚ್ಚರವಾಗಿರಿ”
ಯೇಸು ಹತ್ತು ಕನ್ಯೆಯರ ಕುರಿತ ದೃಷ್ಟಾಂತವನ್ನು ತನ್ನ ಅಭಿಷಿಕ್ತ ಹಿಂಬಾಲಕರನ್ನು ಮನಸ್ಸಿನಲ್ಲಿಟ್ಟು ಹೇಳಿದನಾದರೂ ಅದರಲ್ಲಿರುವ ಸಂದೇಶ ಎಲ್ಲಾ ಕ್ರೈಸ್ತರಿಗೆ ಅನ್ವಯವಾಗುತ್ತದೆ. (w15 3/15 ಪುಟ 12-16) “ಆದುದರಿಂದ ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ.” (ಮತ್ತಾ 25:13) ಯೇಸು ಕೊಟ್ಟ ದೃಷ್ಟಾಂತವನ್ನು ನೀವು ವಿವರಿಸಬಲ್ಲಿರಾ?
ಮದುಮಗ (ವಚನ 1)—ಯೇಸು
ಸಿದ್ಧವಾಗಿದ್ದ ಬುದ್ಧಿವಂತೆಯರಾದ ಕನ್ಯೆಯರು (ವಚನ 2)—ತಮ್ಮ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಲು ಸಿದ್ಧವಾಗಿರುವ ಮತ್ತು ಕೊನೆಯ ತನಕ ಬೆಳಕು ಕೊಡುವ ವ್ಯಕ್ತಿಗಳಾಗಿ ಹೊಳೆಯುವ ಅಭಿಷಿಕ್ತ ಕ್ರೈಸ್ತರು (ಫಿಲಿ 2:15)
“ಮದುಮಗನು ಬರುತ್ತಿದ್ದಾನೆ!” ಎಂಬ ಕೂಗು (ವಚನ 6) —ಯೇಸುವಿನ ಸಾನ್ನಿಧ್ಯದ ಪುರಾವೆ
ಬುದ್ಧಿಹೀನೆಯರಾದ ಕನ್ಯೆಯರು (ವಚನ 8)—ಮದುಮಗನನ್ನು ಬರಮಾಡಿಕೊಳ್ಳಲು ಹೋದವರು, ಆದರೆ ಎಚ್ಚರವಾಗಿರಲು ತಪ್ಪಿಹೋದ ಮತ್ತು ಸಮಗ್ರತೆ ಕಾಪಾಡಿಕೊಳ್ಳದೆ ಹೋದ ಅಭಿಷಿಕ್ತ ಕ್ರೈಸ್ತರು
ಬುದ್ಧಿವಂತೆಯರಾದ ಕನ್ಯೆಯರು ತಮ್ಮ ಎಣ್ಣೆಯನ್ನು ಕೊಡುವುದಿಲ್ಲ (ವಚನ 9)—ಕೊನೆಯ ಮುದ್ರೆ ಒತ್ತಿಯಾದ ಮೇಲೆ ನಂಬಿಗಸ್ತ ಅಭಿಷಿಕ್ತರು ಅಪನಂಬಿಗಸ್ತರಾದವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ
“ಮದುಮಗನು ಬಂದನು” (ವಚನ 10)—ಮಹಾ ಸಂಕಟ ಅಂತ್ಯಗೊಳ್ಳುವಾಗ ಯೇಸು ನ್ಯಾಯತೀರಿಸಲು ಬರುವನು
ಬುದ್ಧಿವಂತೆಯರಾದ ಕನ್ಯೆಯರು ಮದುಮಗನೊಂದಿಗೆ ಮದುವೆಯ ಔತಣಕ್ಕೆ ಹೋಗುತ್ತಾರೆ ಮತ್ತು ಬಾಗಿಲನ್ನು ಮುಚ್ಚಲಾಗುತ್ತದೆ (ವಚನ 10)—ಯೇಸು ತನ್ನ ನಂಬಿಗಸ್ತ ಅಭಿಷಿಕ್ತರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಾನೆ, ಆದರೆ ಅಪನಂಬಿಗಸ್ತರು ತಮ್ಮ ಸ್ವರ್ಗೀಯ ಬಹುಮಾನವನ್ನು ಕಳಕೊಳ್ಳುತ್ತಾರೆ