ನಮ್ಮ ಕ್ರೈಸ್ತ ಜೀವನ
ನಮ್ಮ ಮುಖ್ಯ ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಉಪಯೋಗಿಸಿ
ಶಿಷ್ಯರನ್ನಾಗಿ ಮಾಡುವುದನ್ನು ಕಟ್ಟಡ ಕಟ್ಟುವುದಕ್ಕೆ ಹೋಲಿಸಬಹುದು. ಇದನ್ನು ಚೆನ್ನಾಗಿ ಮಾಡಬೇಕಾದರೆ ನಮ್ಮಲ್ಲಿರುವ ಸಲಕರಣೆಗಳನ್ನು ಚೆನ್ನಾಗಿ ಬಳಸಲು ಕಲಿಯಬೇಕು. ಮುಖ್ಯವಾಗಿ ಬೈಬಲನ್ನು ಚೆನ್ನಾಗಿ ಬಳಸಲು ಕಲಿಯಬೇಕು, ಏಕೆಂದರೆ ಇದೇ ನಮ್ಮ ಪ್ರಮುಖ ಸಲಕರಣೆ. (2ತಿಮೊ 2:15) ಬೋಧನಾ ಸಲಕರಣೆಗಳ ಭಾಗವಾಗಿರುವ ಬೇರೆ ಪ್ರಕಾಶನಗಳನ್ನು, ವಿಡಿಯೋಗಳನ್ನು ಸಹ ಚೆನ್ನಾಗಿ ಬಳಸಬೇಕು. ಶಿಷ್ಯರನ್ನಾಗಿ ಮಾಡುವ ಗುರಿಯೊಂದಿಗೆ ಇದೆಲ್ಲವನ್ನು ಬಳಸಬೇಕು.a
ಈ ಸಲಕರಣೆಗಳನ್ನು ನಾವು ಹೇಗೆ ಚೆನ್ನಾಗಿ ಬಳಸಬಹುದು? (1) ನಿಮ್ಮ ಕ್ಷೇತ್ರ ಸೇವಾ ಗುಂಪಿನ ಮೇಲ್ವಿಚಾರಕನ ಸಹಾಯ ಪಡೆಯಿರಿ, (2) ಒಬ್ಬ ಅನುಭವಸ್ಥ ಪ್ರಚಾರಕ ಅಥವಾ ಪಯನೀಯರರೊಂದಿಗೆ ಸೇವೆ ಮಾಡಿ ಮತ್ತು (3) ಸತತ ಅಭ್ಯಾಸ ಮಾಡಿ. ಈ ಪ್ರಕಾಶನಗಳನ್ನು, ವಿಡಿಯೋಗಳನ್ನು ಚೆನ್ನಾಗಿ ಬಳಸಲು ಕಲಿತರೆ ಈಗ ನಡೆಯುತ್ತಿರುವ ಆಧ್ಯಾತ್ಮಿಕ ನಿರ್ಮಾಣ ಕೆಲಸದಲ್ಲಿ ಸಂತೋಷ ಪಡೆಯುವಿರಿ.
ಪತ್ರಿಕೆಗಳು
ಕಿರುಹೊತ್ತಗೆಗಳು
ಪುಸ್ತಕಗಳು
ಕರಪತ್ರಗಳು
ವಿಡಿಯೋಗಳು
ಆಮಂತ್ರಣ ಪತ್ರಗಳು
ಕಾಂಟ್ಯಾಕ್ಟ್ ಕಾರ್ಡ್‌ಗಳು
a ನಮ್ಮ ಮುಖ್ಯ ಬೋಧನಾ ಸಲಕರಣೆಗಳನ್ನು ಬಿಟ್ಟು ಬೇರೆ ಕೆಲವು ಪ್ರಕಾಶನಗಳನ್ನು ನಿರ್ದಿಷ್ಟ ಓದುಗರನ್ನು ಮನಸ್ಸಲ್ಲಿಟ್ಟು ಬರೆಯಲಾಗಿದೆ. ಅಗತ್ಯವಿದ್ದಾಗ ಇವನ್ನು ಸಹ ಉಪಯೋಗಿಸಬಹುದು.