ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಆಗಸ್ಟ್‌ ಪು. 8
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—JW.ORG ಉಪಯೋಗಿಸುವ ವಿಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—JW.ORG ಉಪಯೋಗಿಸುವ ವಿಧ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ವಿವೇಕಕ್ಕಾಗಿ JW.ORGನಲ್ಲಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
    ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
  • ಇದನ್ನೂ ನೋಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ನೀವು ಎಂದಾದರೂ ಯೋಚಿಸಿದ್ದೀರೋ?
    ಎಚ್ಚರ!—2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಆಗಸ್ಟ್‌ ಪು. 8
ಒಬ್ಬ ಸಹೋದರ ವ್ಯಕ್ತಿಯೊಬ್ಬನಿಗೆ jw.org ವೆಬ್‌ಸೈಟ್‌ ಪರಿಚಯಿಸಲು ಕಾಂಟ್ಯಾಕ್ಟ್‌ ಕಾರ್ಡನ್ನು ಬಳಸುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು​—JW.ORG ಉಪಯೋಗಿಸುವ ವಿಧ

ಯಾಕೆ ಪ್ರಾಮುಖ್ಯ: ನಮ್ಮ ಬೋಧನಾ ಸಲಕರಣೆಗಳ ಭಾಗವಾಗಿರುವ ಪ್ರತಿಯೊಂದು ಪ್ರಕಾಶನ jw.org ಅನ್ನು ಪರಿಚಯಿಸುತ್ತದೆ. ನಮ್ಮ ಕಾಂಟ್ಯಾಕ್ಟ್‌ ಕಾರ್ಡ್‌ ಮತ್ತು ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? ಕರಪತ್ರದ ಮುಖ್ಯ ಉದ್ದೇಶ ನಮ್ಮ ವೆಬ್‌ಸೈಟಿನ ಕಡೆಗೆ ಜನರ ಗಮನ ಸೆಳೆಯುವುದೇ ಆಗಿದೆ. ಇ-ಮೇಲ್‌ ಅಥವಾ ಒಂದು ಲಿಂಕ್‌ ಮೂಲಕ ನಮ್ಮ ಬೋಧನಾ ಸಲಕರಣೆಗಳ ಭಾಗವಾಗಿರುವ ಒಂದು ಪ್ರಕಾಶನದ ಇಲೆಕ್ಟ್ರಾನಿಕ್‌ ಪ್ರತಿಯನ್ನು ಇನ್ನೊಬ್ಬರಿಗೆ ಕಳುಹಿಸಲು jw.org ಉಪಯೋಗಿಸಬಹುದು. ಬೇರೆ ಭಾಷೆಯ ಜನರಿಗೆ ಸಾರುವಾಗ ಇದು ತುಂಬ ಸಹಾಯಕರ. ಕೆಲವೊಮ್ಮೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ನಮ್ಮ ಬೋಧನಾ ಸಲಕರಣೆಗಳಲ್ಲಿ ಇರುವುದಿಲ್ಲ. ಆದರೆ ವೆಬ್‌ಸೈಟಿನಲ್ಲಿರುವ ಬೇರೆ ಸಾಹಿತ್ಯದಲ್ಲಿ ಇರುತ್ತದೆ. ಆಗ ಜನರಿಗೆ ನಮ್ಮ ವೆಬ್‌ಸೈಟಿನಿಂದ ಉತ್ತರ ತೋರಿಸಬೇಕಾಗುತ್ತದೆ. jw.org ಉಪಯೋಗಿಸಲು ಕಲಿತರೆ ನಾವು ಸೇವೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡುತ್ತೇವೆ.

ಉಪಯೋಗಿಸುವುದು ಹೇಗೆ:

  • ಒಬ್ಬ ವ್ಯಕ್ತಿ jw.org ವೆಬ್‌ಸೈಟ್‌ಗೆ ಹೋಗಲು ಕಾಂಟ್ಯಾಕ್ಟ್‌ ಕಾರ್ಡನ್ನು ಬಳಸುತ್ತಿದ್ದಾನೆ

    “ಬೈಬಲ್‌ ಬೋಧನೆಗಳು” ವಿಭಾಗ ಬಳಸಿ. ಮಕ್ಕಳನ್ನು ಹೇಗೆ ಬೆಳೆಸುವುದು ಎನ್ನುವ ಮಾಹಿತಿ ಪಡೆಯಲು ಬಯಸುವ ಹೆತ್ತವರು ಸಿಕ್ಕಿದರೆ ಬೈಬಲ್‌ ಬೋಧನೆಗಳು > ವಿವಾಹ ಮತ್ತು ಕುಟುಂಬ ತೋರಿಸಿ.

  • “ಪ್ರಕಾಶನಗಳು” ವಿಭಾಗ ಬಳಸಿ. ಶಾಲೆಯಲ್ಲಿ ನಿಮ್ಮ ಸಹಪಾಠಿಯ ಹತ್ತಿರ ಮಾತಾಡುವಾಗ ಯುವಜನರ 10 ಪ್ರಶ್ನೆಗಳಿಗೆ ಉತ್ತರ ಎಂಬ ಕಿರುಹೊತ್ತಗೆಯನ್ನು ತೋರಿಸಲು ಪ್ರಕಾಶನಗಳು > ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ನೋಡಿ.

  • “ನಮ್ಮ ಬಗ್ಗೆ” ವಿಭಾಗ ಬಳಸಿ. ನಿಮ್ಮ ಜೊತೆ ಕೆಲಸಮಾಡುವ ವ್ಯಕ್ತಿಯೊಬ್ಬರು ಯೆಹೋವನ ಸಾಕ್ಷಿಗಳು ನಂಬುವ ವಿಷಯಗಳ ಬಗ್ಗೆ ಓದಲು ಬಯಸುವುದಾದರೆ ನಮ್ಮ ಬಗ್ಗೆ > ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ನೋಡಿ.

JW.ORG ಉಪಯೋಗಿಸುವ ವಿಧ ಎಂಬ ವಿಡಿಯೋ ನೋಡಿದ ಮೇಲೆ, ಕೆಳಗಿನ ಸನ್ನಿವೇಶಗಳಲ್ಲಿ ನಮ್ಮ ವೆಬ್‌ಸೈಟಿನ ಯಾವ ಭಾಗಕ್ಕೆ ಹೋಗುತ್ತೀರಿ ಎಂದು ವಿವರಿಸಿ:

  • ಒಬ್ಬ ನಾಸ್ತಿಕನ ಹತ್ತಿರ ಮಾತಾಡುವಾಗ

  • ಇತ್ತೀಚೆಗೆ ದೊಡ್ಡ ದುರಂತವನ್ನು ಎದುರಿಸಿದ ವ್ಯಕ್ತಿಯ ಹತ್ತಿರ ಮಾತಾಡುವಾಗ

  • ಒಬ್ಬ ನಿಷ್ಕ್ರಿಯ ಸಹೋದರ ಅಥವಾ ಸಹೋದರಿಗೆ ಸಹಾಯ ಮಾಡುವಾಗ

  • ಪುನರ್ಭೇಟಿಯ ಸಮಯದಲ್ಲಿ ಮನೆಯವರಿಗೆ ನಮ್ಮ ಲೋಕವ್ಯಾಪಕ ಕೆಲಸಕ್ಕೆ ಹಣ ಎಲ್ಲಿಂದ ಬರುತ್ತದೆ ಎಂಬ ಕುತೂಹಲ ಮೂಡಿದಾಗ

  • ಬೇರೆ ದೇಶದಿಂದ ಬಂದಿರುವ ಒಬ್ಬ ವ್ಯಕ್ತಿ ತನ್ನ ದೇಶದಲ್ಲಿ ಸಭಾಕೂಟಕ್ಕೆ ಹೋಗಲು ಬಯಸುವಾಗ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ