ಬೈಬಲಿನಲ್ಲಿರುವ ರತ್ನಗಳು | ಯೋಹಾನ 5-6
ಸರಿಯಾದ ಉದ್ದೇಶದಿಂದ ಯೇಸುವನ್ನು ಹಿಂಬಾಲಿಸಿ
ಯೇಸು ಕೊಟ್ಟ ಒಂದು ದೃಷ್ಟಾಂತವನ್ನು ಅರ್ಥಮಾಡಿಕೊಳ್ಳಲು ಶಿಷ್ಯರಿಗೆ ಕಷ್ಟವಾಯಿತು. ಕೆಲವರು ತಪ್ಪಾಗಿ ಅರ್ಥಮಾಡಿಕೊಂಡು ಆತನನ್ನು ಹಿಂಬಾಲಿಸುವುದನ್ನೇ ಬಿಟ್ಟುಬಿಟ್ಟರು. ಹಿಂದಿನ ದಿನವಷ್ಟೇ ಯೇಸು ಅವರಿಗೆ ಅದ್ಭುತವಾಗಿ ಊಟ ಕೊಟ್ಟನು ಮತ್ತು ಅದು ದೇವರ ಶಕ್ತಿಯಿಂದಲೇ ಆಯಿತೆಂದು ಹೇಳಿದನು. ಮತ್ಯಾಕೆ ಜನರು ಯೇಸುವನ್ನು ತಪ್ಪಾಗಿ ಅರ್ಥಮಾಡಿಕೊಂಡರು? ಅವರು ಯೇಸುವನ್ನು ಹಿಂಬಾಲಿಸಿದ್ದರಲ್ಲಿ ಸ್ವಾರ್ಥ ಇತ್ತು. ಭೌತಿಕ ಲಾಭಕ್ಕಾಗಿ ಆತನನ್ನು ಹಿಂಬಾಲಿಸಿದರು.
ನಮ್ಮಲ್ಲಿ ಒಬ್ಬೊಬ್ಬರೂ ಹೀಗೆ ಕೇಳಿಕೊಳ್ಳಬೇಕು: ‘ನಾನು ಯಾಕೆ ಯೇಸುವನ್ನು ಹಿಂಬಾಲಿಸುತ್ತಿದ್ದೇನೆ? ಈಗ ಮತ್ತು ಮುಂದೆ ಸಿಗಲಿರುವ ಆಶೀರ್ವಾದಕ್ಕಾಗಿ ಹಿಂಬಾಲಿಸುತ್ತಿದ್ದೇನಾ? ಅಥವಾ ಯೆಹೋವನ ಮೇಲೆ ಪ್ರೀತಿ ಮತ್ತು ಆತನನ್ನು ಮೆಚ್ಚಿಸಬೇಕೆಂಬ ಬಯಕೆ ಇರುವುದರಿಂದಲಾ?’
ಕೆಳಗೆ ಕೊಡಲಾಗಿರುವ ಕಾರಣಗಳಿಗಾಗಿ ಮಾತ್ರ ನಾವು ಯೆಹೋವನ ಸೇವೆ ಮಾಡಿದರೆ ಯಾಕೆ ತಪ್ಪಾಗುತ್ತದೆ?
ಯೆಹೋವನ ಜನರ ಜೊತೆ ಇರುವುದು ಚೆನ್ನಾಗಿದೆ
ಪರದೈಸಿನಲ್ಲಿ ನಿತ್ಯಜೀವ ಸಿಗುತ್ತೆ