ಬೈಬಲಿನಲ್ಲಿರುವ ರತ್ನಗಳು | ಯೋಹಾನ 7-8
ಯೇಸು ತನ್ನ ತಂದೆಯನ್ನು ಮಹಿಮೆಪಡಿಸಿದನು
ಯೇಸು ತನ್ನೆಲ್ಲ ನಡೆ-ನುಡಿಗಳಲ್ಲಿ ತನ್ನ ಸ್ವರ್ಗೀಯ ತಂದೆಯನ್ನು ಮಹಿಮೆಪಡಿಸಿದನು. ತನ್ನ ಸಂದೇಶ ದೇವರಿಂದ ಬಂದಿರುವುದೆಂದು ಜನರು ತಿಳುಕೊಳ್ಳಬೇಕೆಂದು ಬಯಸಿದನು. ಹಾಗಾಗಿ ಆತನ ಬೋಧನೆಗಳು ದೇವರ ವಾಕ್ಯದ ಮೇಲೆ ಆಧರಿತವಾಗಿದ್ದವು ಮತ್ತು ಆಗಾಗ ಅದರಿಂದ ಉಲ್ಲೇಖಿಸುತ್ತಿದ್ದನು. ಜನರು ಹೊಗಳಿದಾಗೆಲ್ಲ ಆ ಮಹಿಮೆ ಯೆಹೋವನಿಗೆ ಸೇರುವಂತೆ ನೋಡಿಕೊಂಡನೇ ಹೊರತು ತನಗೆ ಸೇರುವಂತೆ ಬಿಡಲಿಲ್ಲ. ಯೆಹೋವನು ಕೊಟ್ಟ ಕೆಲಸವನ್ನು ಮಾಡಿ ಮುಗಿಸುವುದೇ ಯೇಸುವಿನ ಮುಖ್ಯ ಗುರಿಯಾಗಿತ್ತು.—ಯೋಹಾ 17:4.
ನಾವು ಈ ಸಂದರ್ಭಗಳಲ್ಲಿ ಯೇಸುವನ್ನು ಹೇಗೆ ಅನುಕರಿಸಬಹುದು?
ಬೈಬಲ್ ಅಧ್ಯಯನ ನಡೆಸುವಾಗ ಅಥವಾ ವೇದಿಕೆಯಿಂದ ಬೋಧಿಸುವಾಗ . . .
ಬೇರೆಯವರು ಹೊಗಳಿದಾಗ . . .
ನಮ್ಮ ಸಮಯವನ್ನು ಹೇಗೆ ಬಳಸಬೇಕೆಂದು ನಿರ್ಧರಿಸುವಾಗ . . .