ನಮ್ಮ ಕ್ರೈಸ್ತ ಜೀವನ
ಹೊಗಳಿಕೆ ಸಿಕ್ಕಿದಾಗ ದೀನತೆ ತೋರಿಸಿ
ಜನ್ರು ಆಗಾಗ ನಮ್ಮನ್ನ ಹೊಗಳಬಹುದು ಅಥವಾ ಶ್ಲಾಘಿಸಬಹುದು. ನಾವು ಮಾಡೋ ಒಳ್ಳೇ ಕೆಲ್ಸನಾ ಮೆಚ್ಚಿ ಮನಸಾರೆ ಹೊಗಳಿದಾಗ ನಮಗೆ ತುಂಬ ಪ್ರೋತ್ಸಾಹ ಸಿಗುತ್ತೆ ನಿಜ. (ಜ್ಞಾನೋ 15:23; 31:10, 28) ಆದ್ರೆ ಇದ್ರಿಂದ ನಮ್ಮಲ್ಲಿ ಅಹಂಕಾರ, “ನಾನೇ ಶ್ರೇಷ್ಠ” ಎಂಬಂಥ ಗುಣಗಳು ಬೆಳೆಯೋ ಸಾಧ್ಯತೆ ಇದೆ. ಹಾಗಾಗಿ ಜಾಗ್ರತೆ ವಹಿಸಬೇಕು.
ಯೇಸುವಿನಂತೆ ನಿಷ್ಠೆ ತೋರಿಸಿ—ಹೊಗಳಿಕೆ ಸಿಕ್ಕಿದಾಗ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಜನ್ರು ಯಾವೆಲ್ಲ ವಿಷಯಗಳಿಗೆ ನಮ್ಮನ್ನ ಹೊಗಳಬಹುದು?
ಸಹೋದರ ಸರ್ಗೆ ಅವರನ್ನ ಬೇರೆ ಸಹೋದರರು ಹೇಗೆಲ್ಲಾ ಹೊಗಳಿದ್ರು?
ಸಹೋದರರು ಹೀಗೆ ಹೊಗಳಿದ್ದು ಯಾಕೆ ಸರಿ ಇರ್ಲಿಲ್ಲ?
ಸಹೋದರ ಸರ್ಗೆ ತೋರಿಸಿದ ದೀನತೆಯಿಂದ ನಾವು ಯಾವ ಪಾಠ ಕಲಿಬಹುದು?