ನಮ್ಮ ಕ್ರೈಸ್ತ ಜೀವನ
ಕ್ರಿಸ್ತನಂತೆ ದೀನರಾಗಿರಿ, ವಿನಯಶೀಲರಾಗಿರಿ
ಯೇಸು ಭೂಮಿಯಲ್ಲಿ ಜೀವಿಸಿದವರಲ್ಲೇ ಅತ್ಯಂತ ಮಹಾನ್ ವ್ಯಕ್ತಿಯಾಗಿದ್ದರೂ ಯೆಹೋವನಿಗೆ ಎಲ್ಲ ಮಹಿಮೆಯನ್ನು ಕೊಡುವ ಮೂಲಕ ದೀನತೆ, ವಿನಯಶೀಲತೆ ತೋರಿಸಿದನು. (ಯೋಹಾ 7:16-18) ಆದರೆ ಸೈತಾನ ಹಾಗಲ್ಲ. ಅವನು ಪಿಶಾಚನಾದನು. ಪಿಶಾಚ ಅಂದರೆ “ಚಾಡಿಕೋರ.” (ಯೋಹಾ 8:44) ಇವನ ಸ್ವಭಾವವನ್ನೇ ಫರಿಸಾಯರು ತೋರಿಸಿದರು. ಇವರಲ್ಲಿದ್ದ ಅಹಂಕಾರದಿಂದಾಗಿ ಮೆಸ್ಸೀಯನನ್ನು ನಂಬಿದ ಜನರನ್ನು ಇವರು ಕೀಳಾಗಿ ನೋಡುತ್ತಿದ್ದರು. (ಯೋಹಾ 7:45-49) ಸಭೆಯಲ್ಲಿ ನಮಗೆ ಸುಯೋಗಗಳು ಅಂದರೆ ಜವಾಬ್ದಾರಿಗಳು ಸಿಕ್ಕಿದಾಗ ಯೇಸುವಿನಂತೆ ನಾವು ಹೇಗೆ ದೀನತೆ, ವಿನಯಶೀಲತೆ ತೋರಿಸಬಹುದು?
“ನಿಮ್ಮ ಮಧ್ಯೆ ಪ್ರೀತಿಯಿರಲಿ”—ಹೊಟ್ಟೆಕಿಚ್ಚುಪಡಬೇಡಿ, ಜಂಬಕೊಚ್ಚಿಕೊಳ್ಳಬೇಡಿ, ಭಾಗ 1 ವಿಡಿಯೋ ಹಾಕಿ, ನಂತರ ಚರ್ಚಿಸಿ:
ಅಲೆಕ್ಸ್ ಹೇಗೆ ಅಹಂಕಾರ ತೋರಿಸಿದನು?
“ನಿಮ್ಮ ಮಧ್ಯೆ ಪ್ರೀತಿಯಿರಲಿ”—ಹೊಟ್ಟೆಕಿಚ್ಚುಪಡಬೇಡಿ, ಜಂಬಕೊಚ್ಚಿಕೊಳ್ಳಬೇಡಿ, ಭಾಗ 2 ವಿಡಿಯೋ ಹಾಕಿ, ನಂತರ ಚರ್ಚಿಸಿ:
ಅಲೆಕ್ಸ್ ಹೇಗೆ ದೀನತೆ ತೋರಿಸಿದನು?
ಜೆರಿ ಮತ್ತು ಜಾನ್ ಅನ್ನು ಅಲೆಕ್ಸ್ ಹೇಗೆ ಪ್ರೋತ್ಸಾಹಿಸಿದನು?
“ನಿಮ್ಮ ಮಧ್ಯೆ ಪ್ರೀತಿಯಿರಲಿ”—ಅಹಂಕಾರ, ಅಸಭ್ಯ ವರ್ತನೆ ಬೇಡ, ಭಾಗ 1 ವಿಡಿಯೋ ಹಾಕಿ, ನಂತರ ಚರ್ಚಿಸಿ:
ಸಹೋದರ ಲೂಯಿಸ್ ಯಾವಾಗ ವಿನಯಶೀಲತೆ ತೋರಿಸಲಿಲ್ಲ?
“ನಿಮ್ಮ ಮಧ್ಯೆ ಪ್ರೀತಿಯಿರಲಿ”—ಅಹಂಕಾರ, ಅಸಭ್ಯ ವರ್ತನೆ ಬೇಡ, ಭಾಗ 2 ವಿಡಿಯೋ ಹಾಕಿ, ನಂತರ ಚರ್ಚಿಸಿ:
ಸಹೋದರ ಲೂಯಿಸ್ ಹೇಗೆ ವಿನಯಶೀಲತೆ ತೋರಿಸಿದರು?
ಸಹೋದರ ಲೂಯಿಸ್ ಅವರ ಮಾದರಿಯಿಂದ ಜೆಸಿಕಾ ಏನು ಕಲಿತಳು?