ಬೈಬಲಿನಲ್ಲಿರುವ ರತ್ನಗಳು | ಯೋಹಾನ 13-14
“ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ”
ತನ್ನ ಅಪೊಸ್ತಲರ ಪಾದಗಳನ್ನು ತೊಳೆಯುವ ಮೂಲಕ, ಯೇಸು ಅವರಿಗೆ ದೀನತೆಯನ್ನು ಮತ್ತು ಸಹೋದರರಿಗೆ ಸೇವೆಮಾಡಬೇಕೆಂಬ ಪಾಠವನ್ನು ಕಲಿಸಿದನು.
ಈ ಕೆಳಗಿನ ಸನ್ನಿವೇಶಗಳಲ್ಲಿ ನಾನು ಹೇಗೆ ದೀನತೆ ತೋರಿಸಬಹುದು?
ಭಿನ್ನಾಭಿಪ್ರಾಯಗಳು ಅಥವಾ ಮನಸ್ತಾಪಗಳಾದಾಗ
ಶಿಸ್ತು ಅಥವಾ ಸಲಹೆ ಕೊಡಲ್ಪಟ್ಟಾಗ
ರಾಜ್ಯ ಸಭಾಗೃಹವನ್ನು ದುರಸ್ತಿ ಅಥವಾ ಶುಚಿ ಮಾಡಬೇಕಾದಾಗ