ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ನವೆಂಬರ್‌ ಪು. 8
  • ಬಹುಭಾಷೀಯ ಟೆರಿಟೊರಿಯಲ್ಲಿ ಸಾರುವಾಗ ಸಹಕರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಹುಭಾಷೀಯ ಟೆರಿಟೊರಿಯಲ್ಲಿ ಸಾರುವಾಗ ಸಹಕರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಮನೆಯವನು ಬೇರೊಂದು ಭಾಷೆಯವನಾಗಿದ್ದಲ್ಲಿ?
    2008 ನಮ್ಮ ರಾಜ್ಯದ ಸೇವೆ
  • ಸುವಾರ್ತೆಯನ್ನು ಸಾರುವ ವಿಧಾನಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೇರೆ ಭಾಷೆಯವರಿಗೆ ಸಾಕ್ಷಿ ನೀಡಿ
    2015 ನಮ್ಮ ರಾಜ್ಯದ ಸೇವೆ
  • ಪ್ರತಿಯೊಬ್ಬರಿಗೂ ಸುವಾರ್ತೆ ತಲುಪಿಸೋ ವ್ಯವಸ್ಥೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ನವೆಂಬರ್‌ ಪು. 8

ನಮ್ಮ ಕ್ರೈಸ್ತ ಜೀವನ

ಬಹುಭಾಷೀಯ ಟೆರಿಟೊರಿಯಲ್ಲಿ ಸಾರುವಾಗ ಸಹಕರಿಸಿ

ಒಬ್ಬ ದಂಪತಿ ಸೇವೆಯಲ್ಲಿ ತಮಗೆ ಗೊತ್ತಿಲ್ಲದ ಭಾಷೆಯನ್ನಾಡುವ ವ್ಯಕ್ತಿ ಮತ್ತವನ ಮಗನನ್ನು ಭೇಟಿ ಮಾಡಿದ್ದಾರೆ

ಕ್ರಿ.ಶ. 33​ರ ಪಂಚಾಶತ್ತಮದಂದು ಅನೇಕ ‘ದೇಶಗಳಿಂದ ಬಂದ ದೇವಭಕ್ತಿಯುಳ್ಳ ಯೆಹೂದ್ಯರಿಗೆ” ಬಹುಶಃ ಹೀಬ್ರು ಮತ್ತು ಗ್ರೀಕ್‌ ಭಾಷೆ ಗೊತ್ತಿತ್ತು. ಹಾಗಿದ್ದರೂ, ಅವರು ತಮ್ಮ “ಸ್ವಂತ ಭಾಷೆಯಲ್ಲಿ” ಸುವಾರ್ತೆಯನ್ನು ಕೇಳುವಂತೆ ಯೆಹೋವನು ಏರ್ಪಾಡು ಮಾಡಿದನು. (ಅಕಾ 2:5, 8) ಕಾರಣ, ರಾಜ್ಯ ಸಂದೇಶವನ್ನು ತಮ್ಮ ಸ್ವಂತ ಭಾಷೆಯಲ್ಲಿ ಕೇಳಿಸಿಕೊಂಡಾಗ ಹೆಚ್ಚಿನ ಜನರು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎನ್ನುವುದೇ ಆಗಿರಬೇಕು. ಈಗ ಅನೇಕ ಕಡೆಗಳಲ್ಲಿ, ಒಂದೇ ಪ್ರದೇಶದಲ್ಲಿ ಬಹು ಭಾಷೆಗಳನ್ನಾಡುವ ಜನರಿರುವುದರಿಂದ ಬೇರೆ ಬೇರೆ ಭಾಷೆಯ ಸಭೆಗಳಿವೆ ಮತ್ತು ಎಲ್ಲರೂ ಅದೇ ಟೆರಿಟೊರಿಯಲ್ಲಿ ಸೇವೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಅಂಥ ಸನ್ನಿವೇಶದಲ್ಲಿರುವ ಸಭೆಗಳವರು ಒಬ್ಬರಿಗೊಬ್ಬರು ಸಹಕರಿಸುತ್ತಾ ತಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಬ್ಬರಿಗೂ ಹೇಗೆ ಸಾಕ್ಷಿ ನೀಡಬಹುದು? ಮತ್ತು ಒಬ್ಬರು ಹೋದ ಮನೆಗೆ ಮತ್ತೊಬ್ಬರು ಹೋಗಿ ಮನೆಯವರಿಗೆ ಕಿರಿಕಿರಿಯನ್ನು ಉಂಟುಮಾಡದಂತೆ ಹೇಗೆ ನೋಡಿಕೊಳ್ಳಬಹುದು?

  • ಒಂದು ಮೊಬೈಲ್‌ ಫೋನ್‌

    ಒಟ್ಟುಗೂಡಿ ಮಾತಾಡಿ (ಜ್ಞಾನೋ 15:22): ಎಲ್ಲಾ ಸಭೆಯ ಸೇವಾ ಮೇಲ್ವಿಚಾರಕರು ಒಟ್ಟುಗೂಡಿ ಮಾತಾಡಿ, ಸುವಾರ್ತೆ ಸಾರಲು ಎಲ್ಲರೂ ಒಪ್ಪುವಂಥ ಏರ್ಪಾಡುಗಳನ್ನು ಮಾಡಬೇಕು. ಸಭೆಗಳ ಟೆರಿಟೊರಿ ಚಿಕ್ಕದಾಗಿದ್ದರೆ ಬೇರೆ ಭಾಷೆಯ ಸಭೆಯವರು ನಿಮಗೆ, ಅವರ ಭಾಷೆಯ ಜನರ ಮನೆಗಳಿಗೆ ಹೋಗಬೇಡಿ ಎಂದು ಹೇಳಬಹುದು. ಆದರೆ, ಕೆಲವೊಮ್ಮೆ, ಅವರ ಭಾಷೆಯನ್ನಾಡುವ ಜನರು ಟೆರಿಟೊರಿಯ ಬೇರೆ ಬೇರೆ ಕಡೆಯಲ್ಲಿರುವುದರಿಂದ ಅದನ್ನು ಪೂರ್ತಿಯಾಗಿ ಆವರಿಸಲು ಅವರಿಂದ ಆಗದಿರಬಹುದು. ಆಗ ಅವರು ನಿಮಗೆ ಯಾವುದೇ ಮನೆಗಳನ್ನು ಬಿಡದೆ ಸುವಾರ್ತೆ ಸಾರುವಂತೆ ತಿಳಿಸಿ ತಮ್ಮ ಭಾಷೆಯ ಆಸಕ್ತರು ಸಿಕ್ಕಿದರೆ ತಿಳಿಸುವಂತೆ ಕೇಳಿಕೊಳ್ಳಬಹುದು. (ಸಂಘಟಿತರು ಪುಟ 93 ಪ್ಯಾರ 37) ಅಥವಾ ಅವರ ಭಾಷೆ ಮಾತಾಡುವ ಜನರನ್ನು ಕಂಡುಹಿಡಿದು ಆ ವಿಳಾಸಗಳನ್ನು ಕೊಡುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು. (ರಾಜ್ಯ ಸೇವೆ 2/14 ಪುಟ 5, ಚೌಕ) ಕೆಲವೊಮ್ಮೆ ಒಂದೇ ಮನೆಯಲ್ಲಿ ಬೇರೆ ಬೇರೆ ಭಾಷೆ ಮಾತಾಡುವವರು ಸಿಗಸಾಧ್ಯವಿದೆ ಎನ್ನುವುದನ್ನು ನೆನಪಿನಲ್ಲಿಡಿ. ನಿಮ್ಮ ದೇಶದಲ್ಲಿ ಪ್ರಜೆಗಳ ಮಾಹಿತಿಯನ್ನು ಉಪಯೋಗಿಸುವ ಕುರಿತು ಯಾವುದೇ ನಿಯಮಗಳಿರುವುದಾದರೆ, ಸೇವೆಗಾಗಿ ಏರ್ಪಾಡುಗಳನ್ನು ಮಾಡುವಾಗ ಅವುಗಳನ್ನು ಮುರಿಯದಂತೆ ನೋಡಿಕೊಳ್ಳಿ.

  • ಟೆರಿಟೊರಿಯಲ್ಲಿರುವ ಮನೆಗಳು

    ಸಹಕರಿಸಿ (ಎಫೆ 4:16): ಸೇವಾ ಮೇಲ್ವಿಚಾರಕರಿಂದ ಬರುವ ಯಾವುದೇ ನಿರ್ದೇಶನವನ್ನು ತಪ್ಪದೇ ಪಾಲಿಸಿ. ನಿಮ್ಮ ಸಭೆಯ ಭಾಷೆಯಲ್ಲದೆ ಬೇರೆ ಭಾಷೆಯ ಒಬ್ಬ ಆಸಕ್ತನೊಂದಿಗೆ ನೀವು ಬೈಬಲ್‌ ಅಧ್ಯಯನ ಮಾಡುತ್ತಿದ್ದೀರಾ? ಹಾಗಿರುವುದಾದರೆ, ವಿದ್ಯಾರ್ಥಿಯು ಮಾತಾಡುವ ಭಾಷೆಯ ಸಭೆ ಅಥವಾ ಗುಂಪಿನಲ್ಲಿರುವವರಿಗೆ ಆ ಅಧ್ಯಯನವನ್ನು ಕೊಟ್ಟರೆ ಅವನು ಬೇಗ ಪ್ರಗತಿ ಮಾಡಬಹುದು.

  • ಭಾಷೆಯನ್ನು ಆಯ್ಕೆ ಮಾಡುವ ಗುಂಡಿ

    ಸಿದ್ಧರಾಗಿರಿ (ಜ್ಞಾನೋ 15:28; 16:1): ಮನೆಯವರು ನಿಮ್ಮ ಭಾಷೆಯವರಲ್ಲವಾದರೆ, ಅವರಿಗೆ ಸುವಾರ್ತೆ ಸಾರಲು ನಿಮ್ಮಿಂದ ಆಗುವುದನ್ನೆಲ್ಲ ಮಾಡಿ. ಇದಕ್ಕಾಗಿ ನಿಮ್ಮ ಟೆರಿಟೊರಿಯಲ್ಲಿ ಯಾವೆಲ್ಲಾ ಭಾಷೆಯ ಜನರಿದ್ದಾರೆ ಎಂದು ತಿಳಿದಿರಿ ಮತ್ತು ಆ ಭಾಷೆಯ ವಿಡಿಯೋಗಳು ಮತ್ತು ಬೈಬಲುಗಳನ್ನು ಮುಂಚಿತವಾಗಿಯೇ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ. ನೀವು JW ಭಾಷೆ ಆ್ಯಪನ್ನು ಉಪಯೋಗಿಸಿ ಅವರ ಭಾಷೆಯಲ್ಲಿ ವಂದಿಸುವುದನ್ನು ಕಲಿಯಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ