ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 17-18
ಅಪೊಸ್ತಲ ಪೌಲನಂತೆ ಸಾರಿರಿ ಮತ್ತು ಕಲಿಸಿರಿ
ಅಪೊಸ್ತಲ ಪೌಲನ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?
ಜನರೊಟ್ಟಿಗೆ ತರ್ಕಿಸಲಿಕ್ಕಾಗಿ ನಾವು ಬೈಬಲನ್ನು ಬಳಸಬಹುದು ಮತ್ತು ನಮ್ಮ ತರ್ಕವನ್ನು ಸಭಿಕರಿಗೆ ತಕ್ಕಂತೆ ಬದಲಾಯಿಸಬಹುದು
ಜನರು ಎಲ್ಲಿ ಸಿಕ್ಕಿದರೂ, ಯಾವಾಗ ಸಿಕ್ಕಿದರೂ ನಾವು ಸಾರಬಹುದು
ಜನರು ಒಪ್ಪುವಂಥ ವಿಷಯದ ಬಗ್ಗೆ ಚರ್ಚಿಸಲಿಕ್ಕಾಗಿ ಅವರು ಯಾವ ವಿಷಯವನ್ನು ನಂಬುತ್ತಾರೋ ಅದಕ್ಕೆ ಸೂಚಿಸುತ್ತಾ ಜಾಣ್ಮೆಯಿಂದ ಮಾತಾಡಬಹುದು