ನಮ್ಮ ಕ್ರೈಸ್ತ ಜೀವನ
ಕೆರೀಬಿಯನ್ನಲ್ಲಿರುವ ಕ್ರೈಸ್ತರಿಗೆ ಸಿಕ್ಕಿದ ಸಹಾಯ
ಒಂದನೇ ಶತಮಾನದಲ್ಲಿದ್ದಂತೆ ಇಂದು ನಮಗೂ ನೈಸರ್ಗಿಕ ವಿಪತ್ತಿಗೆ ಒಳಗಾದ ನಮ್ಮ ಕ್ರೈಸ್ತ ಸಹೋದರರಿಗೆ ಪ್ರೀತಿ ತೋರಿಸುವ ಅವಕಾಶವಿದೆ. (ಯೋಹಾ 13:34, 35) ಇದೇ ನಿಜ ಪ್ರೀತಿ—ದ್ವೀಪಗಳಲ್ಲಿ ಪರಿಹಾರಕಾರ್ಯ ಎಂಬ ವಿಡಿಯೋ ನೋಡಿ. ಅದರಲ್ಲಿ ಕೆರೀಬಿಯನ್ನಲ್ಲಿರುವ ಸಹೋದರ-ಸಹೋದರಿಯರಿಗೆ ಸಹಾಯದ ಅಗತ್ಯವಿದ್ದಾಗ ನಮ್ಮ ಸಹೋದರರು ಹೇಗೆ ಸಹಾಯ ಮಾಡಿದರೆಂದು ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ:
ಅರ್ಮಾ ಮತ್ತು ಮರಿಯಾ ಎಂಬ ಚಂಡಮಾರುತಗಳಿಂದ ಕೆರೀಬಿಯನ್ನಲ್ಲಿರುವ ನಮ್ಮ ಸಹೋದರರು ಯಾವ ಕಷ್ಟಗಳನ್ನು ಅನುಭವಿಸಿದರು?
ಯೆಹೋವನು ಜೊತೆ ಕ್ರೈಸ್ತರ ಮೂಲಕ ಕೆರೀಬಿಯನ್ನಲ್ಲಿರುವ ಸಹೋದರರಿಗೆ ಹೇಗೆ ಸಹಾಯ ಮಾಡಿದನು?
ತಮ್ಮ ಸಹೋದರರು ತೋರಿಸಿದ ಪ್ರೀತಿ ಮತ್ತು ಉದಾರತೆಯ ಬಗ್ಗೆ ಚಂಡಮಾರುತಗಳಿಂದ ಹಾನಿಗೊಳಗಾದವರಿಗೆ ಹೇಗನಿಸಿತು?
ಕೆರೀಬಿಯನ್ನಲ್ಲಿ ನಡೆದ ವಿಪತ್ತು ಪರಿಹಾರಕಾರ್ಯದಲ್ಲಿ ಎಷ್ಟು ಸಹೋದರ-ಸಹೋದರಿಯರು ಭಾಗವಹಿಸಿದರು?
ಪರಿಹಾರಕಾರ್ಯದಲ್ಲಿ ನಮ್ಮದೂ ಒಂದು ಪಾಲಿರಲು ಏನು ಮಾಡಬಹುದು?
ನೀವು ಈ ಪ್ರೀತಿಯ ಸಂಘಟನೆಯ ಭಾಗವಾಗಿರುವುದರ ಬಗ್ಗೆ ಈ ವಿಡಿಯೋ ನೋಡಿ ಏನನಿಸಿತು?