ನಮ್ಮ ಕ್ರೈಸ್ತ ಜೀವನ
ದೇವಭಕ್ತಿ ಮುಖ್ಯನಾ? ದೈಹಿಕ ತರಬೇತಿ ಮುಖ್ಯನಾ?
ದೈಹಿಕ ತರಬೇತಿಯಿಂದ ಪ್ರಯೋಜನ ಇದೆಯಾ? ಇದೆ. ಆದರೆ ದೈವಿಕ ತರಬೇತಿಗೆ ಹೋಲಿಸಿದರೆ ಇದರಿಂದ ಸಿಗುವ ಪ್ರಯೋಜನ ಸ್ವಲ್ಪನೇ. (1ತಿಮೊ 4:8) ಹಾಗಾಗಿ ಕ್ರೈಸ್ತರು ಇವೆರಡನ್ನೂ ಅದರದರ ಜಾಗದಲ್ಲಿ ಇಡುತ್ತಾರೆ.
ಆಟಗಳ ಬಗ್ಗೆ ತಿಳಿದಿರಬೇಕಾದ ಪಾಠಗಳು ಎಂಬ ಆ್ಯನಿಮೇಶನ್ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
1. ಆಟ ಆಡುವುದರಿಂದ ನಾವು ಯಾವ ಒಳ್ಳೇ ವಿಷಯಗಳನ್ನು ಕಲಿಯಬಹುದು?
2. ಕೆಲವು ಆಟಗಳು ಒಳ್ಳೇದಾ ಕೆಟ್ಟದಾ ಅಂತ ಯಾವ ಮೂರು ವಿಷಯದಿಂದ ತಿಳುಕೊಳ್ಳಬಹುದು?
3. ನಾವು ಯಾವ ಆಟಗಳನ್ನು ನೋಡಬೇಕು ಮತ್ತು ಆಡಬೇಕು ಅಂತ ಕೀರ್ತನೆ 11:5ರಿಂದ ಗೊತ್ತಾಗುತ್ತದೆ?
4. ಯಾವ ಮನೋಭಾವದಿಂದ ಆಟ ಆಡಬೇಕು ಅಂತ ಫಿಲಿಪ್ಪಿ 2:3 ಮತ್ತು ಜ್ಞಾನೋಕ್ತಿ 16:18 ಹೇಳುತ್ತದೆ?
5. ಆಟ ನೋಡುತ್ತಾ, ಆಡುತ್ತಾ ತುಂಬ ಸಮಯ ಕಳೆಯದಿರಲು ಫಿಲಿಪ್ಪಿ 1:10 ಹೇಗೆ ಸಹಾಯ ಮಾಡುತ್ತದೆ?