ನಮ್ಮ ಕ್ರೈಸ್ತ ಜೀವನ
ಯೆಹೋವನನ್ನು ಪ್ರೀತಿಸುವ ಜನರೊಂದಿಗೆ ಸಮಯ ಕಳೆಯಿರಿ
ಯೆಹೋವನನ್ನು ಪ್ರೀತಿಸುವ ಜನರೊಂದಿಗೆ ನಾವು ಯಾಕೆ ಸಮಯ ಕಳೆಯಬೇಕು? ಯಾಕೆಂದರೆ ನಾವು ಯಾರ ಜೊತೆ ಸಹವಾಸ ಮಾಡುತ್ತೇವೋ ಅವರ ಹಾಗೇ ಆಗುತ್ತೇವೆ. (ಜ್ಞಾನೋ 13:20) ಉದಾಹರಣೆಗೆ, ರಾಜ ಯೆಹೋವಾಷ ಎಷ್ಟರವರೆಗೆ ಮಹಾಯಾಜಕನಾದ ಯೆಹೋಯಾದನ ಜೊತೆ ಇದ್ದನೋ, ಅಷ್ಟರವರೆಗೆ ‘ಯೆಹೋವನ ಚಿತ್ತದಂತೆ ನಡೆದುಕೊಂಡನು.’ (2ಪೂರ್ವ 24:2) ಆದರೆ ಯೆಹೋಯಾದ ಸತ್ತ ಮೇಲೆ, ಯೆಹೋವಾಷ ಕೆಟ್ಟ ಜನರೊಂದಿಗೆ ಸಹವಾಸ ಮಾಡಿ ಯೆಹೋವನನ್ನೇ ಬಿಟ್ಟುಬಿಟ್ಟನು. —2ಪೂರ್ವ 24:17-19.
ಅಪೊಸ್ತಲ ಪೌಲ, ಕ್ರೈಸ್ತ ಸಭೆಯನ್ನು ಒಂದು “ದೊಡ್ಡ ಮನೆಗೆ” ಮತ್ತು ಸಭೆಯ ಸದಸ್ಯರನ್ನು “ಪಾತ್ರೆಗಳಿಗೆ” ಹೋಲಿಸಿದನು. ನಮ್ಮ ಕುಟುಂಬದವರು, ಸಹೋದರ ಸಹೋದರಿಯರು ಅಥವಾ ಬೇರೆಯವರು ಯೆಹೋವನಿಗೆ ಇಷ್ಟವಿಲ್ಲದ ವಿಷಯಗಳನ್ನು ಮಾಡುತ್ತಿದ್ದರೆ ಅವರೊಂದಿಗೆ ತುಂಬ ಸಮಯ ಕಳೆಯಬೇಡಿ. ಹೀಗೆ, ಅಂಥವರಿಂದ ದೂರ ಇದ್ದರೆ ಮಾತ್ರ ನಾವು ‘ಗೌರವಾರ್ಹವಾದ ಉದ್ದೇಶಕ್ಕಾಗಿರುವ ಪಾತ್ರೆಗಳಾಗುತ್ತೇವೆ’. (2ತಿಮೊ 2:20, 21) ಹಾಗಾಗಿ, ಯೆಹೋವನನ್ನು ಪ್ರೀತಿಸುವ, ಆತನ ಸೇವೆ ಮಾಡಲು ಪ್ರೋತ್ಸಾಹಿಸುವ ಜನರನ್ನು ಸ್ನೇಹಿತರಾಗಿ ಮಾಡಿಕೊಳ್ಳೋಣ.
ಕೆಟ್ಟ ಸಹವಾಸವನ್ನು ತಿರಸ್ಕರಿಸಲು ಕಲಿಯಿರಿ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ನಮಗೇ ಗೊತ್ತಿಲ್ಲದೆ, ನಾವು ಕೆಟ್ಟ ಜನರೊಂದಿಗೆ ಸಮಯ ಕಳೆದುಬಿಡಬಹುದು. ಹೇಗೆ?
ಈ ವಿಡಿಯೋದಲ್ಲಿ ಆ ಮೂವರು ಕ್ರೈಸ್ತರಿಗೆ, ತಾವು ಮಾಡುತ್ತಿದ್ದ ಕೆಟ್ಟ ಸಹವಾಸವನ್ನು ನಿಲ್ಲಿಸಲು ಯಾವುದು ಸಹಾಯಮಾಡಿತು?
ಒಳ್ಳೇ ಸ್ನೇಹಿತರನ್ನು ಆರಿಸಿಕೊಳ್ಳಲು, ನಿಮಗೆ ಯಾವ ಬೈಬಲ್ ತತ್ವಗಳು ಸಹಾಯಮಾಡುತ್ತವೆ?
“ಗೌರವಾರ್ಹವಾದ ಉದ್ದೇಶಕ್ಕಾಗಿರುವ ಪಾತ್ರೆ” ನಾನಾಗಿದ್ದೇನಾ?—2ತಿಮೊ 2:21