ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಆಗಸ್ಟ್‌ ಪು. 8
  • ನಮ್ಮ ಒಳ್ಳೆಯ ಕೆಲಸಗಳನ್ನು ದೇವರು ಮರೆಯಲ್ಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ಒಳ್ಳೆಯ ಕೆಲಸಗಳನ್ನು ದೇವರು ಮರೆಯಲ್ಲ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?
    2003 ನಮ್ಮ ರಾಜ್ಯದ ಸೇವೆ
  • ಬೆತೆಲ್‌ ಸೇವೆ—ಹೆಚ್ಚು ಸ್ವಯಂಸೇವಕರ ಅಗತ್ಯವಿದೆ
    1995 ನಮ್ಮ ರಾಜ್ಯದ ಸೇವೆ
  • “ದೇವರ ಗೃಹ” ವನ್ನು ಗಣ್ಯತೆಯಿಂದ ಕಾಣುವುದು
    ಕಾವಲಿನಬುರುಜು—1994
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಆಗಸ್ಟ್‌ ಪು. 8
ಒಬ್ಬ ಸಹೋದರಿ ಬೆತೆಲ್‌ನ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ

ನಮ್ಮ ಒಳ್ಳೆಯ ಕೆಲಸಗಳನ್ನು ದೇವರು ಮರೆಯಲ್ಲ

ಒಬ್ಬ ತಂದೆ, ಮಕ್ಕಳ ಸಾಧನೆಗಳನ್ನು ಯಾವತ್ತೂ ಮರೆಯಲ್ಲ. ಹಾಗೆಯೇ ಯೆಹೋವ ದೇವರು ಕೂಡ ನಮ್ಮ ಒಳ್ಳೇ ಕೆಲಸಗಳನ್ನು ಮತ್ತು ಆತನ ಹೆಸರಿಗಾಗಿ ನಾವು ತೋರಿಸುವ ಪ್ರೀತಿಯನ್ನು ಯಾವತ್ತೂ ಮರೆಯಲ್ಲ. ಹಾಗಾಗಿ, ಯೆಹೋವನ ನೆನಪಿನಲ್ಲಿ ಎಂದಿಗೂ ಅಳಿಯದಂಥ, ಒಳ್ಳೇ ಹೆಸರು ಗಳಿಸುವ ಸದವಕಾಶ ನಮಗೆಲ್ಲರಿಗೂ ಇದೆ. (ಮತ್ತಾ 6:20; ಇಬ್ರಿ 6:10) ನಮ್ಮೆಲ್ಲರ ಸಾಮರ್ಥ್ಯ ಮತ್ತು ಸನ್ನಿವೇಶಗಳು ಬೇರೆ ಬೇರೆ ಇರಬಹುದು, ಆದರೆ ಯೆಹೋವನ ಸೇವೆಯಲ್ಲಿ ನಮ್ಮಿಂದಾದ ಎಲ್ಲವನ್ನು ಮಾಡುವುದಾದರೆ, ನಾವು ಖುಷಿ ಖುಷಿಯಾಗಿರಬಹುದು. (ಗಲಾ 6:4; ಕೊಲೊ 3:23) ನಮ್ಮ ಸಾವಿರಾರು ಸಹೋದರ ಸಹೋದರಿಯರು ಬೆತೆಲ್‌ನಲ್ಲಿ ಸೇವೆ ಮಾಡಿದ್ದಾರೆ. ನಿಮಗೂ ಬೆತೆಲ್‌ ಸೇವೆ ಮಾಡಕ್ಕಾಗುತ್ತಾ? ಇಲ್ಲವಾದರೆ ಇದನ್ನು ಮಾಡಲು ಬೇರೆಯವರಿಗೆ ಸಹಾಯ ಮಾಡಕ್ಕಾಗುತ್ತಾ? ಅಥವಾ ನಿಮಗೆ ಗೊತ್ತಿರುವ ಒಬ್ಬರು ಬೆತೆಲ್‌ನಲ್ಲಿ ಇರುವುದಾದರೆ, ತಮ್ಮ ವಿಶೇಷ ಪೂರ್ಣಸಮಯ ಸೇವೆಯಲ್ಲಿ ಮುಂದುವರಿಯಲು ಅವರಿಗೆ ಸಹಾಯ ಮಾಡಕ್ಕಾಗುತ್ತಾ?

ಬೆತೆಲ್‌ ಸೇವೆಯ ಗುರಿ ಇಡಿ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಬೆತೆಲ್‌ ಸೇವೆ ಮಾಡಲು ನಮ್ಮ ಮುಖ್ಯ ಕಾರಣ ಏನಾಗಿರಬೇಕು?

  • ಬೆತೆಲ್‌ ಸೇವೆಯಿಂದ ಸಿಕ್ಕಿರುವ ಆಶೀರ್ವಾದಗಳ ಬಗ್ಗೆ ಕೆಲವರು ಏನು ಹೇಳ್ತಾರೆ?

  • ಬೆತೆಲ್‌ ಸೇವೆ ಮಾಡಲು ಬೇಕಾದ ಅರ್ಹತೆಗಳೇನು?

  • ಬೆತೆಲ್‌ ಸೇವೆಗೆ ಅರ್ಜಿ ಹಾಕೋದು ಹೇಗೆ?

ಬೆತೆಲಿನಲ್ಲಿ ಸೇವೆ ಮಾಡುತ್ತಿರುವ ಮೂರು ಕ್ರೈಸ್ತರು ಕಂಪ್ಯೂಟರ್‌ನಲ್ಲಿ ಒಂದು ಪ್ರಾಜೆಕ್ಟ್‌ ಮಾಡುತ್ತಿದ್ದಾರೆ; ಒಬ್ಬ ಸಹೋದರ ಸಾಹಿತ್ಯಗಳನ್ನು ಬಾಕ್ಸ್‌ಗಳಲ್ಲಿ ಪ್ಯಾಕ್‌ ಮಾಡುತ್ತಿದ್ದಾರೆ; ಒಬ್ಬ ಸಹೋದರ ಬೆತೆಲ್‌ನಲ್ಲಿ ಬಡಗಿ ಕೆಲಸ ಮಾಡುತ್ತಿದ್ದಾರೆ

ಬೆತೆಲ್‌ ಸೇವೆ ಮಾಡುವವರಿಗೆ ಯಾವ ಅರ್ಹತೆಗಳಿರಬೇಕು?

  • ಯೆಹೋವನ ಮೇಲೆ ಮತ್ತು ಆತನ ಸಂಘಟನೆಯ ಮೇಲೆ ಆಳವಾದ ಪ್ರೀತಿ

  • ಶ್ರೇಷ್ಠ ನೈತಿಕ ಮಟ್ಟಗಳು ಮತ್ತು ಯೆಹೋವನ ಮುಂದೆ ಶುದ್ಧ ಮನಸ್ಸಾಕ್ಷಿ

  • ಉಡುಗೆ ತೊಡುಗೆಯಲ್ಲಿ ಒಳ್ಳೇ ಮಾದರಿ

  • ಯೆಹೋವನು ಮೆಚ್ಚುವ ಮನೋರಂಜನೆಗಳ ಆಯ್ಕೆ

  • ವಯಸ್ಸು ಸಾಮಾನ್ಯವಾಗಿ 19 ರಿಂದ 35 ವರ್ಷ

  • ಒಳ್ಳೆಯ ಮಾನಸಿಕ, ಭಾವನಾತ್ಮಕ, ಶಾರೀರಿಕ ಆರೋಗ್ಯ

  • ಇಂಗ್ಲಿಷ್‌ ಓದುವ, ಬರೆಯುವ ಮತ್ತು ಮಾತಾಡುವ ಸಾಮರ್ಥ್ಯ

  • ಒಂದು ವರ್ಷವಾದರೂ ಬೆತೆಲ್‌ ಸೇವೆ ಮಾಡುವ ದೃಢ ಮನಸ್ಸು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ