ನಮ್ಮ ಕ್ರೈಸ್ತ ಜೀವನ
ದೇವರ ವಾಕ್ಯ ನಿಮಗೆ ಎಷ್ಟು ಅಮೂಲ್ಯವಾಗಿದೆ?
ಬೈಬಲನ್ನು ಬರೆಸಿದವರು ಯೆಹೋವ ದೇವರು. ಹಾಗಾಗಿ ಅದರಲ್ಲಿ ದೇವರ ಯೋಚನೆಗಳು ಮತ್ತು ಮಾತುಗಳು ಇವೆ. (2ಪೇತ್ರ 1:20, 21) ದೇವರು ತನ್ನ ರಾಜ್ಯವನ್ನು ಸ್ಥಾಪಿಸುವ ಮೂಲಕ ಬೇಗನೇ ಒಳ್ಳೇ ಕಾಲ ತರುತ್ತಾರೆ ಎಂಬ ನಿರೀಕ್ಷೆ ಬೈಬಲ್ ಕೊಡುತ್ತೆ. ಅಷ್ಟೇ ಅಲ್ಲ, ನಮ್ಮ ತಂದೆಯಾದ ಯೆಹೋವ ದೇವರ ಒಳ್ಳೇ ಗುಣಗಳ ಬಗ್ಗೆ ಸಹ ಬೈಬಲ್ ತಿಳಿಸುತ್ತೆ.—ಕೀರ್ತ 86:15.
ಬೈಬಲನ್ನು ಇಷ್ಟಪಡಲು ನಮ್ಮೆಲ್ಲರಿಗೂ ಬೇರೆ ಬೇರೆ ಕಾರಣಗಳಿವೆ. ಆದರೆ ಬೈಬಲನ್ನು ಸುಮ್ಮನೆ ಇಷ್ಟಪಡುವುದು ಮಾತ್ರ ಅಲ್ಲ, ಅದನ್ನು ದಿನಾ ಓದುವ ಮೂಲಕ ಮತ್ತು ಓದಿದ ಪ್ರಕಾರ ಜೀವಿಸುವ ಮೂಲಕ ಅದು ನಮಗೆ ತುಂಬಾ ಅಮೂಲ್ಯ ಅಂತ ತೋರಿಸುತ್ತೇವಾ? “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ” ಎಂದು ಕೀರ್ತನೆಗಾರನಿಗೆ ಅನಿಸಿದಂತೆ ನಮಗೂ ಅನಿಸುತ್ತೆ ಅಂತ ನಮ್ಮ ಕ್ರಿಯೆಗಳಿಂದ ತೋರಿಸೋಣ.—ಕೀರ್ತ 119:97.
ಬೈಬಲನ್ನು ನಿಧಿಯಂತೆ ಕಾಪಾಡಿದರು—ತುಣುಕು (ವಿಲ್ಯಮ್ ಟಿಂಡೆಲ್) ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ವಿಲ್ಯಮ್ ಟಿಂಡೆಲ್‌ರವರು ಬೈಬಲಿನ ಕೆಲವು ಭಾಗಗಳನ್ನು ಯಾಕೆ ಭಾಷಾಂತರಿಸಿದರು?
ಬೈಬಲನ್ನು ಭಾಷಾಂತರಿಸಲು ಅವರು ಹಾಕಿದ ಪ್ರಯತ್ನ ತುಂಬಾ ಮೆಚ್ಚಬೇಕಾದ ವಿಷಯ. ಯಾಕೆ?
ಟಿಂಡೆಲ್‌ರವರು ಭಾಷಾಂತರಿಸಿದ ಬೈಬಲಿನ ಪ್ರತಿಗಳನ್ನು ಯಾರಿಗೂ ಗೊತ್ತಾಗದ ಹಾಗೆ ಇಂಗ್ಲೆಂಡ್‌ಗೆ ಹೇಗೆ ಕಳುಹಿಸಲಾಯಿತು?
ನಮಗೆ ಬೈಬಲ್ ತುಂಬಾ ಅಮೂಲ್ಯ ಅಂತ ಹೇಗೆ ತೋರಿಸಬಹುದು?