ನಮ್ಮ ಕ್ರೈಸ್ತ ಜೀವನ
ಸಂತೋಷದಿಂದ ಕೊಡುವವರನ್ನು ಯೆಹೋವನು ಪ್ರೀತಿಸುತ್ತಾನೆ
2 ಕೊರಿಂಥ 9:7 ರಲ್ಲಿ, “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಯಾಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ” ಅಂತ ನಮ್ಮನ್ನು ಪ್ರೋತ್ಸಾಹಿಸಲಾಗಿದೆ. ಇಂದು, ಇಲ್ಲಿನ ಮತ್ತು ಲೋಕವ್ಯಾಪಕವಾಗಿ ನಡೆಯುತ್ತಿರುವ ಯೆಹೋವನ ಸಾಕ್ಷಿಗಳ ಕೆಲಸಗಳನ್ನು ಬೆಂಬಲಿಸಲು ನಾವು ಆನ್‌ಲೈನ್ ಮೂಲಕಾನೂ ಕಾಣಿಕೆಗಳನ್ನು ಕಳಿಸಬಹುದು.
ಆನ್‌ಲೈನ್‌ನಲ್ಲಿ ದಾನಗಳನ್ನು ನೀಡುವುದು ಹೇಗೆ? ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ನಾವು ನಮ್ಮ ದೇಶದಲ್ಲಿ ಯಾವೆಲ್ಲಾ ವಿಧಾನಗಳಲ್ಲಿ ಕಾಣಿಕೆಗಳನ್ನು ಕೊಡಬಹುದು ಅಂತ ತಿಳಿಯಲು ‘ಲೋಕವ್ಯಾಪಕ ಕೆಲಸಕ್ಕಾಗಿ ದಾನಗಳನ್ನು ನೀಡಿ’ ಎಂಬ ಪುಟಕ್ಕೆ ಹೋಗೋದು ಹೇಗೆ?
ಎಲೆಕ್ಟ್ರಾನಿಕ್ ರೂಪದಲ್ಲಿ ಕಾಣಿಕೆಗಳನ್ನು ಕೊಡುವುದರಿಂದ ಕೆಲವರು ಹೇಗೆಲ್ಲಾ ಪ್ರಯೋಜನ ಪಡೆದಿದ್ದಾರೆ?
ಯಾವೆಲ್ಲಾ ವಿಧಾನದಲ್ಲಿ ಕಾಣಿಕೆಗಳನ್ನು ಕೊಡಬಹುದು?
ಹೊಸ ಸಾಧನಗಳನ್ನು ಬಳಸುವುದು ಹೇಗೆ ಅಂತ ಗೊತ್ತಿಲ್ಲ ಅಂದರೆ ಏನು ಮಾಡಬಹುದು?