ನಮ್ಮ ಕ್ರೈಸ್ತ ಜೀವನ
ಭೂಮಿಯು “ನದಿಯನ್ನು ಕುಡಿದುಬಿಟ್ಟಿತು”
ಹಿಂದಿನ ಕಾಲದಿಂದಲೂ ಯೆಹೋವನ ಜನರಿಗೆ ಹಲವಾರು ಬಾರಿ ಮಾನವ ಅಧಿಕಾರಿಗಳಿಂದ ಸಹಾಯ ಆಗಿದೆ. (ಎಜ್ರ 6:1-12; ಎಸ್ತೇ 8:10-13) ಈಗಿನ ಕಾಲದಲ್ಲೂ ಇದು ನಿಜ. ‘ಘಟಸರ್ಪ’ (ಸೈತಾನ) ತರುವ ವಿರೋಧ, ಹಿಂಸೆಯನ್ನು ತಡೆಯಲು “ಭೂಮಿಯು” ಅಂದರೆ ಈ ಲೋಕದ ಮಾನವ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ. ಭೂಮಿಯು “ನದಿಯನ್ನು” ಕುಡಿದುಬಿಡುವ ಹಾಗೆ ನಮಗೆ ಆಗುತ್ತಿರುವ ಹಿಂಸೆ, ವಿರೋಧವನ್ನು ತಡೆಯಲು ಅಧಿಕಾರಿಗಳು ನೆರವಾಗಿದ್ದಾರೆ. (ಪ್ರಕ 12:16) ‘ವಿಮೋಚಕನು’ ಅಂದರೆ ರಕ್ಷಕನಾದ ಯೆಹೋವನು, ನಮಗೆ ಸಹಾಯ ಮಾಡಲು ಎಷ್ಟೋ ಬಾರಿ ಮಾನವ ಅಧಿಕಾರಿಗಳನ್ನು ಉಪಯೋಗಿಸಿದ್ದಾನೆ.—ಕೀರ್ತ 68:20; ಜ್ಞಾನೋ 21:1.
ನೀವು ದೇವರ ಸೇವೆ ಮಾಡುತ್ತಿರೋದಕ್ಕಾಗಿ ನಿಮ್ಮನ್ನು ಸೆರೆಗೆ ಹಾಕಿದರೆ, ಭಯಪಡಬೇಡಿ. ಯೆಹೋವನು ಯಾವಾಗಲೂ ನಿಮ್ಮೊಂದಿಗಿರುತ್ತಾನೆ ಅಂತ ಯಾವತ್ತೂ ಮರೆಯಬೇಡಿ. (ಆದಿ 39:21-23; ಕೀರ್ತ 105:17-20) ನೀವು ತೋರಿಸುವ ನಂಬಿಕೆಯಿಂದ ಲೋಕವ್ಯಾಪಕ ಸಹೋದರ ಬಳಗಕ್ಕೆ ಎಷ್ಟೋ ಪ್ರೋತ್ಸಾಹ ಸಿಕ್ಕಂತಾಗುತ್ತೆ. ಅಷ್ಟೇ ಅಲ್ಲ, ಇದಕ್ಕೆ ತಕ್ಕ ಬಹುಮಾನ ಸಿಕ್ಕೇ ಸಿಗುತ್ತೆ ಎಂಬ ಭರವಸೆ ನಿಮಗಿರಲಿ.—ಫಿಲಿ 1:12-14; ಪ್ರಕ 2:10.
ಸೆರೆಯಿಂದ ಬಿಡುಗಡೆಯಾದ ಕೊರಿಯಾದ ಸಹೋದರರು ಎಂಬ ವಿಡಿಯೋ ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:
ಅನೇಕ ವರ್ಷಗಳಿಂದ, ದಕ್ಷಿಣ ಕೊರಿಯಾದಲ್ಲಿ ಸಾವಿರಾರು ಸಹೋದರರನ್ನು ಯಾಕೆ ಸೆರೆಯಲ್ಲಿ ಹಾಕುತ್ತಿದ್ದರು?
ಕೋರ್ಟ್ ಕೊಟ್ಟ ಯಾವ ತೀರ್ಪುಗಳು, ನಮ್ಮ ಸಹೋದರರು ಜೈಲಿಂದ ಬೇಗ ಹೊರಗೆ ಬರಲು ಸಹಾಯಮಾಡಿದವು?
ದೇವರ ಸೇವೆ ಮಾಡಿದ್ದಕ್ಕಾಗಿ ಈಗಲೂ ಜೈಲಿನಲ್ಲಿರುವ ಸಹೋದರರಿಗೆ ನಾವು ಹೇಗೆ ಸಹಾಯ ಮಾಡಬಹುದು?
ನಮಗೆ ಈಗ ಇರುವ ಸ್ವಾತಂತ್ರ್ಯವನ್ನು ಹೇಗೆ ಬಳಸಬೇಕು?
ನಮಗೆ ಕೋರ್ಟ್ ವಿಚಾರಣೆಗಳಲ್ಲಿ ಗೆಲುವು ಸಿಗಲು ನಿಜವಾದ ಕಾರಣ ಯಾರು?
ನನಗಿರುವ ಸ್ವಾತಂತ್ರ್ಯವನ್ನು ನಾನು ಹೇಗೆ ಉಪಯೋಗಿಸುತ್ತಿದ್ದೇನೆ?