ನಮ್ಮ ಕ್ರೈಸ್ತ ಜೀವನ
ಕರಪತ್ರಗಳನ್ನು ಉಪಯೋಗಿಸಿ ಸಂಭಾಷಣೆಯನ್ನು ಆರಂಭಿಸುವುದು ಹೇಗೆ?
2018 ರ ಜನವರಿಯಿಂದ ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಹಲವಾರು ಮಾದರಿ ಸಂಭಾಷಣೆಗಳು ಬಂದಿವೆ. ಬರೀ ಪ್ರಕಾಶನಗಳನ್ನು ಕೊಟ್ಟು ಬರುವುದಕ್ಕಿಂತ ಜನರೊಂದಿಗೆ ಹೇಗೆ ಮಾತಾಡೋದು ಅಂತ ಕಲಿತುಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದನ್ನು ಮಾಡಲು, ಮಾದರಿ ಸಂಭಾಷಣೆಯ ವಿಡಿಯೋಗಳು ಸಹಾಯ ಮಾಡಿವೆ. ಇದರಿಂದ ನಾವು, ಬರೀ ಬೈಬಲ್ ಬಳಸಿ ಸಂಭಾಷಣೆ ಆರಂಭಿಸುವುದು ಹೇಗೆ ಅಂತ ಕಲಿತಿದ್ದೇವೆ. ಹಾಗಾದರೆ ಇದರ ಅರ್ಥ ಇನ್ನು ಮುಂದೆ ಮನೆ-ಮನೆ ಸೇವೆಯಲ್ಲಿ ಪ್ರಕಾಶನಗಳನ್ನೇ ಉಪಯೋಗಿಸಬಾರದು ಅಂತನಾ? ಖಂಡಿತ ಇಲ್ಲ. ಉದಾಹರಣೆಗೆ, ಕರಪತ್ರಗಳು ಸಂಭಾಷಣೆಗಳನ್ನು ಆರಂಭಿಸಲು ಒಂದು ಉತ್ತಮ ಸಾಧನ. ಕರಪತ್ರಗಳನ್ನು ಉಪಯೋಗಿಸುವಾಗ ಈ ಕೆಳಗಿನ ಸಲಹೆಗಳು ಸಹಾಯಕ:
1. ಮುಖಪುಟದಲ್ಲಿರುವ ಪ್ರಶ್ನೆ ಕೇಳಿ ಆಯ್ಕೆಗಳನ್ನು ತೋರಿಸಿ.
2. ಎರಡನೇ ಪುಟದಲ್ಲಿ ಮೇಲೆ ಕೊಟ್ಟಿರುವ ಬೈಬಲಿನ ಉತ್ತರವನ್ನು ತೋರಿಸಿ. ಸಮಯ ಇದ್ದರೆ ಕರಪತ್ರದಲ್ಲಿರುವ ಇನ್ನೂ ಕೆಲವು ಮಾಹಿತಿಗಳನ್ನು ಓದಿ ಚರ್ಚಿಸಬಹುದು.
3. ಮನೆಯವರಿಗೆ ಕರಪತ್ರ ಕೊಟ್ಟು, ಬಿಡುವಿದ್ದಾಗ ಅದನ್ನು ಓದಲು ಪ್ರೋತ್ಸಾಹಿಸಿ.
4. ಹೊರಡುವ ಮುಂಚೆ “ಯೋಚಿಸಿ” ಎಂಬ ಭಾಗದಲ್ಲಿ ಇರುವ ಪ್ರಶ್ನೆ ತೋರಿಸಿ. ಅದಕ್ಕೆ ಉತ್ತರ ಮುಂದಿನ ಸಲ ಬೈಬಲಿಂದ ಚರ್ಚಿಸೋಣ ಅಂತ ಹೇಳಿ.
ಪುನಃ ಹೋದಾಗ, ಕೇಳಿದ್ದ ಪ್ರಶ್ನೆಗೆ ಉತ್ತರ ಚರ್ಚಿಸಿ. ಮುಂದಿನ ಸಲ ಚರ್ಚಿಸಲು ಇನ್ನೊಂದು ಪ್ರಶ್ನೆ ಕೇಳಿ ಬನ್ನಿ. ಇದಕ್ಕಾಗಿ ನಮ್ಮ ವೆಬ್ಸೈಟ್ನಲ್ಲಿರುವ ಅಥವಾ ಕರಪತ್ರದ ಹಿಂದಿನ ಪುಟದಲ್ಲಿ ಕೊಟ್ಟಿರುವ ಪ್ರಕಾಶನದಿಂದ ಪ್ರಶ್ನೆಯನ್ನು ಆರಿಸಿಕೊಳ್ಳಬಹುದು. ಸರಿಯಾದ ಸಮಯದಲ್ಲಿ, ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯನ್ನು ಅಥವಾ ಸಲಕರಣಾ ಪಟ್ಟಿಯಿಂದ ಒಂದು ಪುಸ್ತಕವನ್ನು ಕೊಡಿ.