ಲಾಭದಾಯಕ ಫಲಿತಾಂಶಗಳನ್ನು ಉತ್ಪಾದಿಸಲು ಕಿರುಹೊತ್ತಗೆಗಳನ್ನು ಉಪಯೋಗಿಸುವುದು
1 ಯೆಹೋವನ ಆಧುನಿಕ ದಿನದ ಸಂಸ್ಥೆಗೆ ಕಿರುಹೊತ್ತಗೆಗಳನ್ನು ಸಫಲವಾಗಿ ಉಪಯೋಗಿಸಿದ ಇತಿಹಾಸವೊಂದಿದೆ. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಎಂಬ ನಮ್ಮ ನ್ಯಾಯಬದ್ಧ ಸಂಸ್ಥೆಯ ಹೆಸರೇ, ಸುಸಮಾಚಾರದ ಪ್ರಸಾರದಲ್ಲಿ ಕಿರುಹೊತ್ತಗೆಗಳು ಪ್ರಾಮುಖ್ಯವಾದ ಪಾತ್ರವೊಂದನ್ನು ವಹಿಸುತ್ತವೆಯೆಂದು ಸೂಚಿಸುತ್ತದೆ. ಇಸವಿ 1881 ರಿಂದ 1918 ರ ವರೆಗೆ, ಯೆಹೋವನ ಜನರಿಂದ 30 ಕೋಟಿಗಿಂತಲೂ ಹೆಚ್ಚಿನ ಕಿರುಹೊತ್ತಗೆಗಳು ಹಂಚಲ್ಪಟ್ಟವು. ಈ ಅವಧಿಯಲ್ಲಿ ಕ್ರಿಸ್ತನ ಸಹೋದರರ ಉಳಿಕೆಯವರ ಭಾಗವಾದ ಅನೇಕರು ಈ ಆರಂಭಿಕ ಕಿರುಹೊತ್ತಗೆಗಳ ಮೂಲಕ ಸತ್ಯಕ್ಕೆ ಪ್ರಥಮವಾಗಿ ಪರಿಚಯಿಸಲ್ಪಟ್ಟರು.
2 ಇಸವಿ 1987 ರ ಸಮಯದಿಂದ ಲಭ್ಯವಾಗಿರುವ ನಾಲ್ಕು ವರ್ಣರಂಜಿತ ಕಿರುಹೊತ್ತಗೆಗಳ ಬಿಡುಗಡೆಯೊಂದಿಗೆ, ಸಣ್ಣ ಕಿರುಹೊತ್ತಗೆಗಳ ಉಪಯೋಗದ ಮೇಲೆ ನವೀಕರಿಸಲ್ಪಟ್ಟ ಒತ್ತನ್ನು ಇರಿಸಲಾಯಿತು. ಇಸವಿ 1992 ರ “ಬೆಳಕು ವಾಹಕರು” ಜಿಲ್ಲಾ ಅಧಿವೇಶನದಲ್ಲಿ, ಕಿರುಹೊತ್ತಗೆಗಳ ಈ ಸರಣಿಯು, ಇನ್ನೂ ನಾಲ್ಕು ವರ್ಣರಂಜಿತ ಮತ್ತು ವಿಚಾರ ಪ್ರೇರಕ ಕಿರುಹೊತ್ತಗೆಗಳ ಸೇರಿಕೆಯಿಂದ ವಿಸ್ತಾರಗೊಳ್ಳಲಿದೆ ಎಂದು ಪ್ರಕಟಿಸಲಾಯಿತು. ಅವುಗಳು ಮನಗುಂದಿದವರಿಗೆ ಸಾಂತ್ವನ, ಕುಟುಂಬ ಜೀವನವನ್ನು ಆನಂದಿಸಿರಿ, ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? ಮತ್ತು ಈ ಲೋಕವು ಪಾರಾಗುವುದೋ? ಎಂಬುದಾಗಿವೆ. ನಿಮ್ಮ ಶುಶ್ರೂಷೆಯಲ್ಲಿ ಲಾಭದಾಯಕ ಫಲಿತಾಂಶಗಳನ್ನು ಉತ್ಪಾದಿಸಲು ನೀವು ಎಲ್ಲಾ ಎಂಟು ಕಿರುಹೊತ್ತಗೆಗಳನ್ನು ಉಪಯೋಗಿಸುತ್ತಿದ್ದೀರೊ?
3 ಕಿರುಹೊತ್ತಗೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದರಿಂದ ಉತ್ತಮ ಫಲಿತಾಂಶಗಳು ಬರುತ್ತವೆ. ಉದಾಹರಣೆಗೆ, ಪ್ರತಿಯೊಂದು ಏನನ್ನು ಚರ್ಚಿಸುತ್ತದೆ ಎಂಬುದನ್ನು ಮನಸ್ಸಿನೊಳಗೆ ತೆಗೆದುಕೊಳ್ಳಲು ನೀವು ಅವುಗಳನ್ನು ಜಾಗರೂಕವಾಗಿ ಓದಿದ್ದೀರೊ? ಪ್ರತಿಯೊಂದು ಕಿರುಹೊತ್ತಗೆಯು ಯಾವ ರೀತಿಯ ವ್ಯಕ್ತಿಗೆ ಇಷ್ಟವಾಗುತ್ತದೆ ಎಂಬುದರ ಕುರಿತು ನೀವು ಯೋಚಿಸಿದ್ದೀರೊ? ನಿಮ್ಮನ್ನು ಪ್ರತಿ ಕಿರುಹೊತ್ತಗೆಯೊಂದಿಗೆ ಸಂಪೂರ್ಣವಾಗಿ ಪರಿಚಯಪಡಿಸಿಕೊಳ್ಳುವುದು, ಮನೆಯಿಂದ ಮನೆಯ ಕೆಲಸದಲ್ಲಿ ಹಾಗೂ ನೀವು ಅನೌಪಚಾರಿಕ ಸಾಕ್ಷಿ ನೀಡಸಾಧ್ಯವಿರುವ ಅನೇಕ ಸನ್ನಿವೇಶಗಳಲ್ಲಿ ಅವುಗಳನ್ನು ಉಪಯೋಗಿಸುವುದರಲ್ಲಿ ನಿಮ್ಮ ಭರವಸೆಯನ್ನು ಕಟ್ಟುವುದು.
4 ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಉಪಯೋಗಿಸಿರಿ: ಒಬ್ಬ ಸರ್ಕಿಟ್ ಮೇಲ್ವಿಚಾರಕನು ಬರೆಯುವುದು: “ನನ್ನ ಅನೇಕ ಚರ್ಚೆಗಳನ್ನು ಕಿರುಹೊತ್ತಗೆಯೊಂದಿಗೆ ಆರಂಭಿಸುವ ಮೂಲಕ ನಾನು ಉತ್ತಮ ಸಫಲತೆಯನ್ನು ಪಡೆಯುತ್ತಿದ್ದೇನೆ.” ಈ ಪ್ರಸ್ತಾವವನ್ನು ನೀವು ಪ್ರಯತ್ನಿಸಿದ್ದೀರೊ? ನಿಮ್ಮ ಸಂಭಾಷಣೆಯನ್ನು ಪರಿಚಯ ಪಡಿಸುವ ಒಂದು ವಿಧಾನವನ್ನಾಗಿ ಕಿರುಹೊತ್ತಗೆಗಳನ್ನು ಯಾಕೆ ಉಪಯೋಗಿಸಬಾರದು? ಎಂಟು ಕಿರುಹೊತ್ತಗೆಗಳೊಂದಿಗೆ, ನಮಗೆ ಈಗ ಅವುಗಳಿಂದ ಆಯ್ಕೆಮಾಡಲು ಎಂಟು ಪ್ರಚೋದನಕಾರಿ ಪೀಠಿಕೆಗಳಿವೆ. ಪ್ರಥಮ ಭೇಟಿಯಲ್ಲಿ ಯಾ ಒಂದು ಪುನಃ ಭೇಟಿಯಲ್ಲಿ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವ ಅವಕಾಶವನ್ನು ಪ್ರತಿ ಕಿರುಹೊತ್ತಗೆಯು ನಮಗೆ ಕೊಡುತ್ತದೆ.
5 ಕಿರುಹೊತ್ತಗೆಗಳನ್ನು ಉಪಯೋಗಿಸಲು ಬೇರೆ ಅವಕಾಶಗಳು ಇವೆ. ಮನೆಬಾಗಿಲಿನಲ್ಲಿ ಸಂಭಾಷಣೆಯ ಸಮಯದಲ್ಲಿ, ವ್ಯಕ್ತಿಯು ಇತ್ತೀಚೆಗೆ ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಿದ್ದಾನೆಂದು ಅಥವಾ ಕುಟುಂಬದಲ್ಲಿ ಯಾರೊ ಅಸ್ವಸ್ಥರಾಗಿದ್ದಾರೆಂದು ನೀವು ತಿಳಿಯಬಹುದು. ಮಹಾ ದುಃಖವನ್ನು ಅನುಭವಿಸುವಂಥವರು ಯಾ ಲಂಬಿಸಿದ ಕಷ್ಟಗಳೊಂದಿಗೆ ನಿಭಾಯಿಸಲು ಪ್ರಯತ್ನಿಸುತ್ತಿರುವ ಜನರು ಅನೇಕ ವೇಳೆ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಂಡು ಮನಗುಂದುತ್ತಾರೆ. ಮನಗುಂದಿದವರಿಗೆ ಸಾಂತ್ವನ ಎಂಬ ಕಿರುಹೊತ್ತಗೆಯಲ್ಲಿ ಕಂಡುಬರುವ ಉತ್ತೇಜಕ ಸಂದೇಶವನ್ನು ಹಂಚಿಕೊಳ್ಳುವಂತಹ ಸಂಗತಿಯು ಎಷ್ಟು ಪ್ರೀತಿಪರವಾಗಿರುವುದು! ವ್ಯಕ್ತಿಯು ಇತ್ತೀಚೆಗೆ ವಿವಾಹ ವಿಚ್ಛೇದವನ್ನು ಪಡೆದಿದ್ದಾನೆ ಯಾ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದಾನೆಂದು ನಿಮಗೆ ಗೊತ್ತಾಗಬಹುದು. ಅಂಥ ಅನುಭವಗಳು ಮಾನಸಿಕ ಆಘಾತವಾಗಿರಬಲ್ಲವು ಮತ್ತು ಕುಟುಂಬದ ಮೇಲೆ ಒಂದು ಭಾರಿಯಾದ ಬೆಲೆಯನ್ನು ತೆಗೆದುಕೊಳ್ಳಬಲ್ಲವು. ಕುಟುಂಬ ಜೀವನವನ್ನು ಆನಂದಿಸಿರಿ ಎಂಬ ಕಿರುಹೊತ್ತಗೆಯ ಪುಟ 2 ರಲ್ಲಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ: “ಇಂದು ಕುಟುಂಬಗಳು ಇಂತಹ ಗಂಭೀರ ಸಮಸ್ಯೆಗಳ ಗುಂಡಿನ ಮಳೆಗೆ ಯಾಕೆ ಗುರಿಯಾಗಿವೆ? ನಾವು ಕುಟುಂಬ ಜೀವನವನ್ನು ಹೇಗೆ ಆನಂದಿಸಬಹುದು?” ಪ್ರಾಯಶಃ ಈ ಪ್ರಶ್ನೆಗಳೇ ವ್ಯಕ್ತಿಯ ಮನಸ್ಸಿನಲ್ಲಿ ಪ್ರಮುಖವಾಗಿರಬಹುದು. ಆ ಕ್ಷಣವೇ ಆಸಕ್ತಿಯು ವ್ಯಕ್ತವಾಗದಿದ್ದರೂ, ಆಮೇಲೆ ಅವನು ಅದನ್ನು ಓದುವ ಸಾಧ್ಯತೆಯು ಇದೆ.—ಪ್ರಸಂ. 11:6.
6 ಕೆಲವು ಸಭೆಗಳಲ್ಲಿ ಟೆರಿಟೊರಿಯನ್ನು ಅನೇಕ ಬಾರಿ ಆವರಿಸಲಾಗಿದೆ, ಮತ್ತು ಅನೇಕ ಜನರು ನಮ್ಮ ಸಾಹಿತ್ಯದಲ್ಲಿ ಕೆಲವನ್ನು ಈಗಾಗಲೇ ಹೊಂದಿದ್ದಾರೆ. ಕಿರುಹೊತ್ತಗೆಗಳನ್ನು ಉಪಯೋಗಿಸುವ ಮೂಲಕ, ಮನೆಯವರೊಂದಿಗೆ ಆಸಕ್ತಿಯುಳ್ಳ ವಿಷಯವನ್ನು ಚರ್ಚಿಸಲು, ಅವರನ್ನು ಸಂಭಾಷಣೆಯಲ್ಲಿ ಹೊರಗೆಳೆಯಲು, ಮತ್ತು ರಾಜ್ಯ ನಿರೀಕ್ಷೆಯ ಕುರಿತು ಅವರು ಯೋಚಿಸುವಂತೆ ಮಾಡಲು ನಮಗೆ ಅವಕಾಶವಿರುವುದು. ಇನ್ನೊಂದು ಸಮಯ ಚರ್ಚಿಸಸಾಧ್ಯವಿರುವ ಒಂದು ಪ್ರಶ್ನೆಯನ್ನು ಅವರ ಮನಸ್ಸಿನಲ್ಲಿ ಹಾಕಿರಿ. ಪುನಃ ಸಂದರ್ಶನವನ್ನು ಮಾಡಿರಿ ಮತ್ತು ಈ ಆಸಕ್ತಿಯನ್ನು ಇನ್ನೂ ಬೆಳೆಸಿರಿ. ಸಮಯಾನಂತರ, ಅವರು ಈಗಾಗಲೇ ಹೊಂದಿರುವ ಬ್ರೋಷರ್ ಯಾ ಒಂದು ಪುಸ್ತಕವನ್ನು ಉಪಯೋಗಿಸಿ ಅವರೊಂದಿಗೆ ಅಭ್ಯಾಸವನ್ನು ಪ್ರಾರಂಭಿಸಲು ನಾವು ಶಕ್ತರಾಗಬಹುದು.
7 ಕಿರುಹೊತ್ತಗೆಗಳನ್ನು ಅನೌಪಚಾರಿಕವಾಗಿ ಉಪಯೋಗಿಸಿರಿ: ಕಿರುಹೊತ್ತಗೆಗಳನ್ನು ಸರಳವಾಗಿ ಸಿಗುವಲ್ಲಿ—ನಮ್ಮ ಶರ್ಟಿನ ಜೇಬಿನಲ್ಲಿ, ಕೋಟಿನ ಜೇಬಿನಲ್ಲಿ, ಪರ್ಸ್ನಲ್ಲಿ, ಯಾ ಸಾಕ್ಷಿಕಾರ್ಯಕ್ಕೆ ಉಪಯೋಗಿಸುವ ಬ್ಯಾಗ್ನಲ್ಲಿ—ಇಡುವುದಾದರೆ ನಾವು ಅವುಗಳನ್ನು ಅನೇಕ ವಿಭಿನ್ನ ಸಂದರ್ಭಗಳಲ್ಲಿ, ಜನರು ಸಿಗುವಲ್ಲೆಲ್ಲಾ ಉಪಯೋಗಿಸಬಲ್ಲೆವು. ಖರೀದಿ ಮಾಡುವಾಗ, ಪ್ರಯಾಣಿಸುವಾಗ, ಸಂಬಂಧಿಕರೊಂದಿಗೆ ಯಾ ಭೇಟಿಯಾಗಲು ಬಂದವರೊಂದಿಗೆ ಮಾತಾಡುವಾಗ ಅವುಗಳನ್ನು ಉಪಯೋಗಿಸಿರಿ. ಒಂದು ಸಂಕ್ಷಿಪ್ತ ಸಾಕ್ಷಿಯನ್ನು ನೀಡುವ ಅವಕಾಶವನ್ನು ಕಿರುಹೊತ್ತಗೆಗಳು ನಮಗೆ ಕೊಡುತ್ತವೆ. ಕಿರುಹೊತ್ತಗೆಯೊಂದು ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಮುಳುಗಿಸದ, ಆದರೆ ನೇರವಾಗಿಯೂ ನಿಪುಣವಾಗಿಯೂ ಇರುವಂಥದ್ದಾಗಿದೆ. ಅದರಲ್ಲಿ ಬಹಳವಾಗಿ ಓದಲು ಹೆಚ್ಚು ವಿಷಯ ಇಲ್ಲದಿರುವುದರಿಂದ, ಒಂದು ಪುಸ್ತಕ ಯಾ ಪತ್ರಿಕೆಗಿಂತಲೂ ಹೆಚ್ಚು ಸಂತೋಷದಿಂದ ಸ್ವೀಕರಿಸಲ್ಪಡಲಾಗುತ್ತದೆ.
8 ಶಾಲೆಯಲ್ಲಿ ಅಥವಾ ನಿಮ್ಮ ಉದ್ಯೋಗದ ಸ್ಥಳದಲ್ಲಿ, ಹೋಟೆಲುಗಳಲ್ಲಿ, ಪೆಟ್ರೋಲ್ ಪಂಪ್, ಮತ್ತು ಮುಂತಾದ ಸ್ಥಳಗಳಲ್ಲಿ ಕಿರುಹೊತ್ತಗೆಗಳನ್ನು ಅನೌಪಚಾರಿಕವಾಗಿ ನೀಡಲು ಇರುವ ಅವಕಾಶಗಳಿಗೆ ಎಚ್ಚರವಾಗಿರ್ರಿ. ತನ್ನ ಅಜಿಯ್ಜನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುವ ಏರ್ಪಾಡುಗಳನ್ನು ಮಾಡುವಾಗ, ಸಹೋದರಿಯೊಬ್ಬಳು ಅವಳೊಂದಿಗೆ ಕೆಲವೊಂದು ಕಿರುಹೊತ್ತಗೆಗಳು ಇರುವುದನ್ನು ಖಚಿತಮಾಡಿಕೊಂಡಳು. ವೈದ್ಯರ ಆಫೀಸಿನಲ್ಲಿ, ಒಬ್ಬಾಕೆ ಗರ್ಭಿಣಿಯೊಂದಿಗೆ ಅವಳೊಂದು ಸಂಭಾಷಣೆಯನ್ನು ಆರಂಭಿಸಿದಳು. ಆ ಹೆಂಗಸಿಗೆ ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯನ್ನು ತೋರಿಸಿದ ಅನಂತರ, ಸಹೋದರಿಯು ಕೇಳಿದ್ದು: “ಇಲ್ಲಿ ಚಿತ್ರಿಸಲ್ಪಟ್ಟಂಥ ಒಂದು ಲೋಕದಲ್ಲಿ ನಿನ್ನ ಮಗುವನ್ನು ಬೆಳೆಸಲು ನೀನು ಇಷ್ಟಪಡುವಿಯೊ?” ಹೆಂಗಸಿನ ಮನೆಗೊಂದು ಭೇಟಿಯೊಂದಿಗೆ ಆ ಸಂಭಾಷಣೆಯನ್ನು ಮುಂದುವರಿಸಲು ಆಕೆಗೆ ಶಕವ್ತಾಯಿತು. ಇದು ಅನೇಕ ಕ್ರಮವಾದ ಪುನಃ ಭೇಟಿಗಳಿಗೆ ನಡೆಸಿತು.
9 ಕಿರುಹೊತ್ತಗೆಗಳೊಂದಿಗೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಸಾಧ್ಯವಿದೆ: ಮನೆಯವನನ್ನು ಪ್ರಥಮವಾಗಿ ಎದುರುಗೊಳ್ಳುವಾಗ, ಕಿರುಹೊತ್ತಗೆಗಳನ್ನು ಉಪಯೋಗಿಸುವ ಮೂಲಕ, ಅವನು ಸಂದರ್ಶಿಸುತ್ತಿದ್ದ ಸಭೆಯು ಆ ವಾರದಲ್ಲಿ 64 ಬೈಬಲ್ ಅಭ್ಯಾಸಗಳನ್ನು ಆರಂಭಿಸಿತು ಎಂದು ಒಬ್ಬ ಸರ್ಕಿಟ್ ಮೇಲ್ವಿಚಾರಕನು ವರದಿಸಿದನು.
10 ಮನೆಯಿಂದ ಮನೆಯ ಪ್ರಥಮ ಭೇಟಿಗಳಲ್ಲಿ ಬೈಬಲ್ ಅಭ್ಯಾಸವೊಂದನ್ನು ನೀಡಲು ನೀವು ಪ್ರಯತ್ನಿಸಿದ್ದೀರೊ? ಒಂದು ಕಿರುಹೊತ್ತಗೆಯನ್ನು ಉಪಯೋಗಿಸುವ ಮೂಲಕ, ಒಂದು ಅಭ್ಯಾಸವು ಹೇಗೆ ನಡೆಸಲ್ಪಡುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಲು ನೀವು ಶಕ್ತರಾಗಬಹುದು. ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯನ್ನು ಉಪಯೋಗಿಸುತ್ತಾ ಒಬ್ಬಾಕೆ ಸಹೋದರಿಯು ಇದನ್ನು ಮಾಡಿದಳು. ಚಿತ್ರವನ್ನು ಸೂಚಿಸುತ್ತಾ, ನಮ್ಮ ಭೂಮಿಯು ಎಂದಾದರೂ ಹಾಗಿರಬಹುದೆಂದು ಅವಳು ಯೋಚಿಸಿದ್ದಳೊ ಎಂದು ಅವಳು ಮನೆಯವಳನ್ನು ಕೇಳಿದಳು. ಮನೆಯವಳು ಪ್ರತಿಕ್ರಿಯಿಸಿದ ಬಳಿಕ, ಕಿರುಹೊತ್ತಗೆಯಲ್ಲಿ ಎತ್ತಿತೋರಿಸಲಾದ 2 ಪೇತ್ರ 3:13 ಮತ್ತು ಯೆಶಾಯ 65:17 ನ್ನು ಓದುವಂತೆ ಸಹೋದರಿಯು ಅವಳನ್ನು ಆಮಂತ್ರಿಸಿದಳು. ನಮ್ಮ ಸಹೋದರಿಯು ಆಮೇಲೆ ಹೇಳಿದ್ದು: “ಈ ವಾಗ್ದಾನಗಳು ಒಂದು ಕನಸು ಯಾ ಒಂದು ಕಲ್ಪನೆಯಾಗಿಲ್ಲ, ಬದಲಿಗೆ ನಿಜವಾಗಿಯೂ ದೇವರ ವಾಕ್ಯವಾದ ಬೈಬಲಿನಲ್ಲಿ ಮಾಡಲ್ಪಟ್ಟಿವೆ.” ಅವಳು ಅನಂತರ ಸಂಭಾಷಣೆಯನ್ನು ಮುಂದಿನ ವಾರ ಮುಂದುವರಿಸಲು ಏರ್ಪಾಡನ್ನು ಮಾಡಿದಳು. ಮುಂದಿನ ಭೇಟಿಯಲ್ಲಿ, ಹೆಂಗಸಿನ ಅನೇಕ ಪ್ರಶ್ನೆಗಳು ಉತ್ತರಿಸಲ್ಪಟ್ಟವು ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ನೀಡಲಾಯಿತು. ಒಂದು ಬೈಬಲ್ ಅಭ್ಯಾಸವು ಫಲಿಸಿತು.
11 ಹೊಸದಾಗಿ ದೀಕ್ಷಾಸ್ನಾನ ಪಡೆದ ಯಾ ಬಹುಶಃ ನಿಮ್ಮ ಶುಶ್ರೂಷೆಯಲ್ಲಿ ಅನುಭವವನ್ನು ಗಳಿಸುತ್ತಿರುವ ದೀಕ್ಷಾಸ್ನಾನ ಪಡೆಯದ ಒಬ್ಬ ಪ್ರಚಾರಕರು ನೀವಾಗಿದ್ದೀರೊ? ಹಾಗಿದ್ದಲ್ಲಿ, ಹೆಚ್ಚು ಅನುಭವಸ್ಥರಾದವರನ್ನು ಹುಡುಕಿ ನಿಮ್ಮ ಸಭಾ ಟೆರಿಟೊರಿಯಲ್ಲಿ ಕಿರುಹೊತ್ತಗೆಗಳನ್ನು ಉಪಯೋಗಿಸುವುದರ ಬಗೆಗೆ ಅವರ ಸೂಚನೆಗಳನ್ನು ನೀವು ಕೇಳಲು ಬಯಸಬಹುದು. ನಂಬಿಕೆಯಲ್ಲಿ ಪ್ರೌಢರಾದವರಿಂದ ಉತ್ತೇಜನ ಮತ್ತು ನಿರ್ದೇಶನವನ್ನು ಪಡೆದವರ ಅನೇಕ ಉದಾಹರಣೆಗಳು ನಮಗೆ ಬೈಬಲಿನಲ್ಲಿವೆ.—ಅ. ಕೃ. 18:24-27; 1 ಕೊರಿ. 4:17.
12 ಕಿರುಹೊತ್ತಗೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವಲ್ಲಿ ಇತರರು ನಿಮಗೆ ನೆರವಾಗಲು ಏರ್ಪಾಡುಗಳನ್ನು ಮಾಡುವುದರಲ್ಲಿ ಸಭಾ ಪುಸ್ತಕ ಅಭ್ಯಾಸ ಚಾಲಕನು ವಿಶೇಷವಾಗಿ ಸಹಾಯಕಾರಿಯಾಗಿರಬಲ್ಲನು. ಸಾರುವ ಕಾರ್ಯದಲ್ಲಿ ತಮ್ಮ ಮಕ್ಕಳು ಅಭಿವೃದ್ಧಿಯನ್ನು ಮಾಡುವಂತೆ ಸಹಾಯ ಮಾಡುವ ಜವಾಬ್ದಾರಿಯು ಹೆತ್ತವರಿಗಿದೆ. ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯನ್ನು ನೀಡಲು ಒಬ್ಬಾಕೆ ಎಳೆಯ ಸಾಕ್ಷಿಯು ಆಕೆಯ ಹೆತ್ತವರ ಮೂಲಕ ತರಬೇತಿ ಪಡೆದಿದ್ದಳು. ಒಂದು ಬೈಬಲ್ ಅಭ್ಯಾಸದಲ್ಲಿ ಅವಳ ತಾಯಿಯೊಂದಿಗೆ ಇದ್ದಾಗ, ಆಸಕ್ತಿಯುಳ್ಳ ವ್ಯಕ್ತಿಯ ಗಂಡನಿಗೆ ಅವಳೊಂದು ಕಿರುಹೊತ್ತಗೆಯನ್ನು ನೀಡಿದಳು. ಒಬ್ಬ ಎಳೆಯ ವ್ಯಕ್ತಿಗೆ ಇಂಥ ಬಲವಾದ ಧಾರ್ಮಿಕ ನಂಬಿಕೆಗಳು ಇರುವುದನ್ನು ಕಂಡು ಗಂಡನು ಪ್ರಭಾವಿತನಾದನು. ಕಿರುಹೊತ್ತಗೆಯನ್ನು ಓದುವುದರಲ್ಲಿ ಅವನು ಸಂಪೂರ್ಣವಾಗಿ ಆನಂದಿಸಿದನು. ಎಳೆಯ ಹುಡುಗಿಯು ತನ್ನ ತಾಯಿಯೊಂದಿಗೆ ಹಿಂದಿರುಗಿದ ಪ್ರತಿ ಸಲವು, ಅವನಿಗಾಗಿಯೆ ವಿಶೇಷವಾಗಿ ಅವಳು ತಯಾರಿಸಿದ್ದ ಬೈಬಲ್ ಕಥೆಯನ್ನು ಯಾ ಒಂದು ವಚನವನ್ನು ಅವಳು ಹಂಚಿಕೊಂಡಳು. ಆ ಮನುಷ್ಯನು ಈಗ ಪತ್ರಿಕೆಗಳನ್ನು ಕ್ರಮವಾಗಿ ಓದುತ್ತಾನೆ, ರೆವಲೇಶನ್ ಕ್ಲೈಮ್ಯಾಕ್ಸ್ ಪುಸ್ತಕದಲ್ಲಿ ಆಸಕ್ತಿಯನ್ನು ತೋರಿಸಿದ್ದಾನೆ, ಮತ್ತು ಕೆಲವೊಂದು ಕೂಟಗಳಿಗೆ ಹಾಜರಾಗಿದ್ದಾನೆ. ಕಿರುಹೊತ್ತಗೆಗಳ ಉತ್ತಮ ಉಪಯೋಗವನ್ನು ಮಾಡಲು ಅವರ ಮಗಳಿಗೆ ಕಲಿಸುವಲ್ಲಿ ತಮ್ಮ ಜವಾಬ್ದಾರಿಕೆಗಳನ್ನು ನೆರವೇರಿಸಲು ಹೆತ್ತವರು ಸಮಯವನ್ನು ತೆಗೆದುಕೊಂಡದರ್ದಿಂದ ಇದೆಲ್ಲವು ಫಲಿಸಿತು.
13 ನಮ್ಮ ಹೊಸ ಕಿರುಹೊತ್ತಗೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ: ಈ ಲೋಕವು ಪಾರಾಗುವುದೋ? ಎಂಬ ಕಿರುಹೊತ್ತಗೆಯನ್ನು ಉಪಯೋಗಿಸುವಲ್ಲಿ, ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳಬಹುದು ಮತ್ತು ನಿಮ್ಮ ಸಂಭಾಷಣೆಯನ್ನು ಹೀಗೆ ಹೇಳುವ ಮೂಲಕ ಆರಂಭಿಸಬಹುದು: “ನಮಸ್ಕಾರ. ಇಂದು ಜೀವನದ ಗುಣಮಟ್ಟದ ಕುರಿತು ನಾವು ಜನರೊಂದಿಗೆ ಮಾತಾಡುತ್ತಿದ್ದೇವೆ. ಜೀವನದ ಗುಣಮಟ್ಟವು ಅಭಿವೃದ್ಧಿ ಹೊಂದುವುದೆಂದು ನೀವು ನೆನಸುತ್ತೀರೊ, ಅಥವಾ ಅದು ಕ್ಷಯಿಸುತ್ತಾ ಮುಂದುವರಿಯುವುದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಲೋಕದಲ್ಲಿ ಇಂದು ಏನು ಸಂಭವಿಸುತ್ತಿದೆಯೊ ಅದು ಬೈಬಲ್ ಪ್ರವಾದನೆಯ ನೆರವೇರಿಕೆಯಾಗಿದೆ ಮತ್ತು ಲೋಕದ ಅಂತ್ಯವು ಹತ್ತಿರವಾಗಿದೆ ಎಂದು ಕೆಲವರು ನೆನಸುತ್ತಾರೆ. ನೀವೇನು ನೆನಸುತ್ತೀರಿ?” ಮನೆಯವನು ಪ್ರತಿಕ್ರಿಯಿಸಿದ ತರುವಾಯ, ಕಿರುಹೊತ್ತಗೆಯನ್ನು ನೀಡಿರಿ ಮತ್ತು ಎರಡನೆಯ ಪ್ಯಾರಗ್ರಾಫ್ನಲ್ಲಿರುವ ಮೂರು ಪ್ರಶ್ನೆಗಳ ಕಡೆಗೆ ಗಮನವನ್ನು ಸೆಳೆಯಿರಿ. ಮುಂಚೆ ಒಂದು ಲೋಕವು ಅಂತ್ಯಗೊಂಡಿದೆ ಮತ್ತು ಈ ಲೋಕವು ಕೂಡ ಅಂತ್ಯಗೊಳ್ಳುವುದೆಂದು ತೋರಿಸಲು ಕಿರುಹೊತ್ತಗೆಯ ವಿಕಾಸವನ್ನು ತದನಂತರ ಅನುಸರಿಸಿರಿ. ಸಂದರ್ಶನವು ಮುಕ್ತಾಯಗೊಂಡಂತೆ, ಲೋಕದ ಅಂತ್ಯವು ಹತ್ತಿರವಾಗಿದೆ ಎಂಬುದಕ್ಕೆ ಬೈಬಲ್ ಪ್ರಮಾಣವನ್ನು ಪರಿಗಣಿಸಲು ಇನ್ನೊಂದು ಭೇಟಿಗಾಗಿ ಏರ್ಪಾಡನ್ನು ಮಾಡಿರಿ.
14 ಅನೇಕ ಸಮಯಗಳಲ್ಲಿ ಕೆಲಸ ಯಾ ಶಾಲೆಯಂಥ ಸ್ಥಳಗಳಲ್ಲಿ, ಇತರರೊಂದಿಗೆ ರಾಜ್ಯ ಸಂದೇಶವನ್ನು ಸಂಕ್ಷಿಪ್ತವಾಗಿ ಮಾತ್ರ ಹಂಚಿಕೊಳ್ಳುವ ಸ್ಥಾನದಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತೇವೆ. ನಿಮ್ಮ ಉದ್ಯೋಗದ ಸ್ಥಳದಲ್ಲಿ, ಸರಕಾರವನ್ನು ಒಳಗೊಂಡ ಇತ್ತೀಚೆಗಿನ ಸಮಾಚಾರ ವರದಿಗಳ ಕುರಿತು ಒಂದು ಚರ್ಚೆಯು ಏಳಬಹುದು. ಸದುದ್ದೇಶವಿರುವ ನಾಯಕರುಗಳ ಮೂಲಕ ಮಾಡಲಾದ ಪ್ರಯತ್ನಗಳ ಎದುರಿನಲ್ಲಿಯೂ, ಲೋಕವು ಇತಿಹಾಸದ ಉದ್ದಕ್ಕೂ ಭಯಂಕರವಾಗಿ ಕಷ್ಟಾನುಭವಿಸಿದೆಯೆಂದು ನೀವು ಒಪ್ಪಿಕೊಳ್ಳಬಹುದು. ಆಗ, ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? ಎಂಬ ಕಿರುಹೊತ್ತಗೆಯ ಪುಟ 2 ರಲ್ಲಿರುವ ಕೊನೆಯ ಪ್ಯಾರಗ್ರಾಫ್ಗೆ ಸೂಚಿಸಿರಿ. ವಿಚಾರ ಪ್ರೇರಕವಾದ ಮೂರು ಪ್ರಶ್ನೆಗಳನ್ನು ಓದಿರಿ. ಒಂದು ಸಂಕ್ಷಿಪ್ತವಾದ ಸಂಭಾಷಣೆಗೆ ಸಮಯವಿಲ್ಲದಿದ್ದರೆ, ವ್ಯಕ್ತಿಗೆ ಯಾ ವ್ಯಕ್ತಿಗಳಿಗೆ ಕಿರುಹೊತ್ತಗೆಯನ್ನು ಕೊಡಿರಿ ಮತ್ತು ಈ ಪ್ರಶ್ನೆಗಳನ್ನು ಇನ್ನೊಂದು ಸಮಯ ಯಾ ಸ್ಥಳದಲ್ಲಿ ಚರ್ಚಿಸಲು ಏರ್ಪಾಡುಗಳನ್ನು ಮಾಡಿರಿ.
15 ವೈಯಕ್ತಿಕವಾಗಿ ಮತ್ತು ಕೌಟುಂಬಿಕವಾಗಿ, ಈ ವಿಭಿನ್ನ ಕಿರುಹೊತ್ತಗೆಗಳಲ್ಲಿ ಪ್ರತಿಯೊಂದನ್ನು ಹೇಗೆ ಸಾದರಪಡಿಸುವುದೆಂದು ಪರಿಗಣಿಸಲು ಸಮಯವನ್ನು ತೆಗೆದುಕೊಳ್ಳಿರಿ. ರೂಢಿಮಾಡಿಕೊಳ್ಳುವ ಅಧಿವೇಶನಗಳನ್ನು (ಪ್ರಾಕ್ಟ್ಯಿಸ್ ಸೆಶ್ಶನ್ಸ್) ನಡೆಸಿರಿ. ತಿಂಗಳಿಗಾಗಿ ಕ್ಷೇತ್ರ ಶುಶ್ರೂಷೆಯಲ್ಲಿ ಪ್ರದರ್ಶಿಸಲಾಗುವ ಬೇರೆ ಸಾಹಿತ್ಯಗಳೊಂದಿಗೆ ನೀವು ಕಿರುಹೊತ್ತಗೆಗಳನ್ನು ಹೇಗೆ ಉಪಯೋಗಿಸಬಲ್ಲಿರಿ? ನಿಮ್ಮೊಂದಿಗೆ ಕೆಲವು ಕಿರುಹೊತ್ತಗೆಗಳನ್ನು ಕೊಂಡೊಯ್ಯಬಹುದಾದ ಯಾವ ಭೇಟಿಗಳು ನಿಮಗೆ ಮುಂದಿನ ದಿನಗಳಲ್ಲಿ ಇವೆ? ಈ ಕಿರುಹೊತ್ತಗೆಗಳು ನೀಡುವ ಸಮಯೋಚಿತ ಸಂದೇಶದಿಂದ ಪ್ರಯೋಜನ ಪಡೆಯಬಹುದಾದ ಯಾವ ವ್ಯಕ್ತಿಯ ಸಂಪರ್ಕದಲ್ಲಿಯಾದರೂ ನೀವು ಈ ವಾರ ಬರುವಿರೊ?
16 ಯೆಹೋವನಿಗಾಗಿ ಆಳವಾದ ಪ್ರೀತಿಯು ಮತ್ತು ಜನರಿಗಾಗಿ ಚಿಂತೆಯು ಸುಸಮಾಚಾರವನ್ನು ತಿಳಿಯಪಡಿಸುವಲ್ಲಿ ನಮ್ಮಿಂದ ಸಾಧ್ಯವಾದದ್ದನ್ನೆಲ್ಲಾ ಮಾಡಲು ನಮ್ಮನ್ನು ಪ್ರಚೋದಿಸುವುದು. ಅದನ್ನು ಮಾಡಲು ಕಿರುಹೊತ್ತಗೆಗಳ ಕ್ರಮವಾದ ಉಪಯೋಗವು ನಮಗೆ ಸಹಾಯ ಮಾಡುವುದು. ಏಳು ವರ್ಷ ಪ್ರಾಯದ ಒಬ್ಬ ಎಳೆಯ ಹುಡುಗನು, ತನ್ನ ಪಕ್ಕದ ಮನೆಯ ನೆರೆಯವಳನ್ನು ಹೊಸ ವ್ಯವಸ್ಥೆಯೊಳಗೆ ಪ್ರವೇಶಪಡೆಯುವಂತೆ ಸಹಾಯಮಾಡಲು ಬಯಸಿದನು, ಆದುದರಿಂದ ಅವಳಿಗೆ ಒಂದು ಕಿರುಹೊತ್ತಗೆಯನ್ನು ಕೊಟ್ಟನು, ಮತ್ತು ಬೈಬಲ್ ಅಭ್ಯಾಸವೊಂದು ಆರಂಭವಾಯಿತು. ಅದು ಅಷ್ಟು ಸರಳವಾಗಿ ಧ್ವನಿಸುತ್ತದೆ! ಆದರೆ ನಮ್ಮ ಶುಶ್ರೂಷೆಯಲ್ಲಿ ಈ ಸರಳವಾದ ಪ್ರಸ್ತಾವವನ್ನು ನಾವು ಗಣ್ಯಮಾಡುತ್ತೇವೊ? ಮುಂದಿನ ಸಲ ನಾವು ಯಾರೊಂದಿಗಾದರೂ ಒಂದು ಕಿರುಹೊತ್ತಗೆಯನ್ನು ಬಿಡುವುದಾದರೆ, ಅದು ಒಂದು ಬೈಬಲ್ ಅಭ್ಯಾಸಕ್ಕೂ ನಡೆಸಬಹುದು. ರಾಜ್ಯದ ಸುಸಮಾಚಾರವನ್ನು ಸಾರುವುದರಲ್ಲಿ ಕಿರುಹೊತ್ತಗೆಗಳ ಒಳ್ಳೆಯ ಉಪಯೋಗವನ್ನು ನಾವು ಮಾಡುವುದಾದರೆ, ಲಾಭದಾಯಕ ಫಲಿತಾಂಶಗಳನ್ನು ನಾವು ಅನುಭವಿಸುವುದು ಖಂಡಿತ.