ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 12-14
ನಿಮಗೆ ಪ್ರಯೋಜನ ತರುವ ಒಂದು ಒಡಂಬಡಿಕೆ
ಯೆಹೋವನು ಅಬ್ರಹಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡನು. ಇದು ಯೇಸು ಮತ್ತು ಅವನ ಸಹ-ರಾಜರಿಗೆ ಸ್ವರ್ಗದಿಂದ ಆಳಲು ಕಾನೂನುಬದ್ಧ ಆಧಾರವಾಗಿತ್ತು
ಕ್ರಿ.ಪೂ 1943 ರಲ್ಲಿ ಅಬ್ರಹಾಮ ಕಾನಾನಿಗೆ ಹೋಗಲು ಯೂಫ್ರೇಟೀಸ್ ನದಿಯನ್ನು ದಾಟಿದಾಗ ಈ ಒಡಂಬಡಿಕೆ ಜಾರಿಗೆ ಬಂತು
ಮೆಸ್ಸೀಯ ರಾಜ್ಯ ದೇವರ ವೈರಿಗಳನ್ನು ನಾಶ ಮಾಡಿ, ಭೂಮಿಯಲ್ಲಿರುವ ಎಲ್ಲಾ ಕುಟುಂಬಗಳ ಮೇಲೆ ಆಶೀರ್ವಾದ ತರುವವರೆಗೆ ಈ ಒಡಂಬಡಿಕೆ ಚಾಲ್ತಿಯಲ್ಲಿ ಇರುತ್ತೆ
ಅಬ್ರಹಾಮ ತೋರಿಸಿದ ಬಲವಾದ ನಂಬಿಕೆಗಾಗಿ ಯೆಹೋವನು ಅವನನ್ನು ಆಶೀರ್ವದಿಸಿದನು. ಯೆಹೋವನ ಮಾತುಗಳನ್ನು ನಾವೂ ನಂಬಿದರೆ, ಅಬ್ರಹಾಮನ ಒಡಂಬಡಿಕೆಯಿಂದ ಯಾವೆಲ್ಲ ಆಶೀರ್ವಾದ ಮುಂದೆ ಸಿಗುತ್ತೆ?