ನಮ್ಮ ಕ್ರೈಸ್ತ ಜೀವನ
ದಿನದ ವಚನ ಓದಿ ಚರ್ಚಿಸೋದ್ರಿಂದ ಪ್ರಯೋಜನ ಪಡೀತಾ ಇದ್ದೀರಾ?
ನೀವು ಪ್ರತಿದಿನ ದಿನದ ವಚನ ಓದೋದನ್ನು ರೂಢಿ ಮಾಡಿಕೊಂಡಿದ್ದೀರಾ? ಒಂದು ವೇಳೆ ಇಲ್ಲವಾದರೆ, ಒಂದು ರೂಢಿ ಮಾಡಿಕೊಳ್ಳೋಕೆ ಆಗುತ್ತಾ? ತುಂಬಾ ಜನ ಬೆಳಗ್ಗೇನೇ ದಿನದ ವಚನನಾ ಓದಿ ಬಿಡ್ತಾರೆ. ಇದರಿಂದ ಅವರಿಗೆ, ಇಡೀ ದಿನ ಓದಿದ ವಿಷಯದ ಬಗ್ಗೆ ಮನನ ಮಾಡಕ್ಕಾಗುತ್ತೆ. ಅಷ್ಟೇ ಅಲ್ಲ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲೂ ಅದನ್ನ ಅನ್ವಯಿಸಿಕೊಳ್ಳುತ್ತಾರೆ. (ಯೆಹೋ 1:8; ಕೀರ್ತ 119:97) ದಿನದ ವಚನದಿಂದ ಇನ್ನೂ ಹೆಚ್ಚಿನ ಪ್ರಯೋಜನ ಹೇಗೆ ಪಡೆಯಬಹುದು? ಕೊಟ್ಟಿರುವ ದಿನದ ವಚನದ ಪೂರ್ವಾಪರವನ್ನು ಬೈಬಲಿನಿಂದ ಓದಿ. ಆಗ ಆ ವಚನದ ಹಿನ್ನಲೆ ಏನು ಅಂತ ಗೊತ್ತಾಗುತ್ತೆ. ನಂತರ ಆ ವಚನದಲ್ಲಿ ಯಾವ ಮೂಲತತ್ವ ಇದೆ ಅಂತ ಕಂಡುಹಿಡೀರಿ. ಆ ಮೂಲತತ್ವಕ್ಕೆ ಸರಿಹೊಂದುವ ಯಾವುದಾದರೂ ಬೈಬಲ್ ವೃತ್ತಾಂತಗಳ ಬಗ್ಗೆ ಯೋಚಿಸಿ. ಆಮೇಲೆ ಆ ಮೂಲತತ್ವವನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿ. ಹೀಗೆ ಮಾಡಿದರೆ, ನೀವು ಯಾವುದೇ ತೀರ್ಮಾನ ಮಾಡಬೇಕಾದ್ರೂ ದೇವರ ವಾಕ್ಯಕ್ಕೆ ತಕ್ಕಂತೆ ಮಾಡುತ್ತೀರ. ಅಷ್ಟೇ ಅಲ್ಲ ಇದರಿಂದ ನಿಮ್ಮ ಜೀವನಕ್ಕೆ ಬೇಕಾದ ಮಾರ್ಗದರ್ಶನ ಸಿಗುತ್ತೆ ಮತ್ತು ಅನೇಕ ಪ್ರಯೋಜನಗಳನ್ನೂ ಪಡೀತೀರ.—ಕೀರ್ತ 119:105.
ಭೂಮಿಯ ಎಲ್ಲಾ ಕಡೆ ಇರುವ ಬೆತೆಲ್ ಕುಟುಂಬದವರು ದಿನದ ವಚನವನ್ನು ಬೆಳಗ್ಗೆ ತಿಂಡಿಯ ಸಮಯದಲ್ಲಿ ಓದುತ್ತಾರೆ. ಇತ್ತೀಚಿನ ವರ್ಷಗಳಲ್ಲಿ JW ಬ್ರಾಡ್‌ಕಾಸ್ಟಿಂಗ್‌ನಲ್ಲಿ ಕೆಲವು ದಿನದ ವಚನದ ಪ್ರೋಗ್ರಾಮ್ ಹಾಕಲಾಗಿದೆ. ಇದು ಕಾರ್ಯಕ್ರಮಗಳು ಅನ್ನೋ ವಿಭಾಗದಲ್ಲಿ ಸಿಗುತ್ತೆ. ನೀವು ಕೊನೆಯ ಸಾರಿ ಯಾವಾಗ ದಿನದ ವಚನದ ಪ್ರೋಗ್ರಾಮ್ ನೋಡಿದ್ರಿ? ಕೆಲವೊಂದು ಸಲ ನಮಗೆ ಬೇಕಾಗಿರೋ ವಿಷಯನೇ ಅದರಲ್ಲಿ ಬಂದಿರುತ್ತೆ. ಉದಾಹರಣೆಗೆ ಲೋಟನ ವೃತ್ತಾಂತ ನೀವು ತಗೊಳ್ಳುವ ತೀರ್ಮಾನಗಳ ಮೇಲೆ ಹೇಗೆ ಪ್ರಭಾವ ಬೀರುತ್ತೆ?
ಲೋಕವನ್ನು ಪ್ರೀತಿಸಬೇಡಿ (1ಯೋಹಾ 2:15) ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಯಾವ ಮೂಲ ತತ್ವದ ಆಧಾರದ ಮೇಲೆ ಆ ದಿನದ ವಚನದ ಚರ್ಚೆ ಇತ್ತು?
ಲೋಕದ ವಸ್ತುಗಳನ್ನು ಪ್ರೀತಿಸೋದು ತುಂಬ ಅಪಾಯಕಾರಿ ಅಂತ ಲೋಟನ ಉದಾಹರಣೆಯಿಂದ ಹೇಗೆ ಹೇಳಬಹುದು?—ಆದಿ 13:12; 14:12; 19:3, 12, 13, 24-26
ನಾವು ಲೋಕ ಅಥವಾ ಅದರ ವಸ್ತುಗಳನ್ನಲ್ಲ ಬದಲಿಗೆ ಯೆಹೋವನನ್ನು ಪ್ರೀತಿಸುತ್ತೇವೆ ಅಂತ ಹೇಗೆ ತೋರಿಸಬಹುದು?
ಯೆಹೋವನ ಮಾತುಗಳನ್ನು ಮಾನ್ಯ ಮಾಡ್ತೀನಿ ಅಂತ ದಿನ ಪೂರ್ತಿ ಹೇಗೆ ತೋರಿಸಬಹುದು?