ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 8-9
ಗರ್ವಿಷ್ಟ ಫರೋಹ ತನಗೇ ಗೊತ್ತಿಲ್ಲದೆ ದೇವರ ಉದ್ದೇಶ ಪೂರೈಸಿದ
ಈಜಿಪ್ಟಿನ ರಾಜರು ತಾವೇ ದೇವರು ಅಂತ ಅಂದುಕೊಂ ಡಿದ್ದರು. ಹಾಗಾಗಿ ಫರೋಹ ಸಹ ಮೋಶೆ, ಆರೋನ ಮತ್ತು ತನ್ನ ಆಸ್ಥಾನದ ಪಂಡಿತರ ಮಾತನ್ನ ಕೇಳಲಿಲ್ಲ.
ಬೇರೆಯವ್ರು ಒಂದು ಮಾತನ್ನ ಹೇಳುವಾಗ ಅದನ್ನ ನೀವು ಕೇಳ್ತೀರಾ? ಯಾರಾದ್ರು ಸಲಹೆ ಕೊಟ್ಟಾಗ ಅದಕ್ಕೆ ಕೃತಜ್ಞರಾಗಿರ್ತೀರಾ? ಅಥವಾ ನೀವು ಮಾಡೋದೇ ಸರಿ ಅಂತ ನಿಮಗೆ ಅನ್ಸುತ್ತಾ? ಹಾಗನಿಸೋದಾದ್ರೆ “ಗರ್ವದಿಂದ ಭಂಗ” ಆಗೋದಂತೂ ಖಂಡಿತ. (ಜ್ಞಾನೋ 16:18) ಹಾಗಾಗಿ ಹೆಮ್ಮೆಯಿಂದ ಉಬ್ಬಿಕೊಳ್ಳದೇ ಇರೋದು ಎಷ್ಟು ಮುಖ್ಯ ಅಲ್ವಾ?