ನಮ್ಮ ಕ್ರೈಸ್ತ ಜೀವನ
ಯೆಹೋವನು ತನ್ನ ಜನ್ರನ್ನು ಕಾಪಾಡುತ್ತಾನೆ
ಮೊದಲನೇ ಪಸ್ಕ ಎಂದಿಗೂ ಮರೆಯಲಾಗದ ಹಬ್ಬ ಆಗಿತ್ತು. ಆದಿನ ರಾತ್ರಿ ತನ್ನ ಚೊಚ್ಚಲ ಮಗ ಸತ್ತಿದ್ದಾನೆ ಅಂತ ಗೊತ್ತಾದಾಗ ಫರೋಹ “ನೀವೂ ಇಸ್ರಾಯೇಲ್ಯರೆಲ್ಲರೂ ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ; ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸಿರಿ” ಅಂತ ಮೋಶೆಗೆ ಹೇಳಿದ. (ವಿಮೋ 12:31) ತನ್ನ ಜನ್ರನ್ನ ಕಾಪಾಡುತ್ತಾನೆ ಅನ್ನೋದನ್ನ ಯೆಹೋವನು ಆ ದಿನ ತೋರಿಸಿಕೊಟ್ಟಿದ್ದ.
ಅಂದಿನಿಂದ ಇಂದಿನವರೆಗೂ ಯೆಹೋವನು ತನ್ನ ಜನ್ರನ್ನ ಕಾಪಾಡ್ತಾ ಮಾರ್ಗದರ್ಶಿಸ್ತಾ ಬಂದಿದ್ದಾನೆ ಅಂತ ಇತಿಹಾಸ ತೋರಿಸುತ್ತೆ. ಇದೇ ವಿಷಯದ ಬಗ್ಗೆ ಮುಖ್ಯ ಕಾರ್ಯಾಲಯದಲ್ಲಿ ಒಂದು ಮ್ಯೂಸಿಯಂ ಸಹ ಇದೆ. ಈ ಮ್ಯೂಸಿಯಂನ ಹೆಸ್ರು “ಎ ಪೀಪಲ್ ಫಾರ್ ಜೆಹೋವಾಸ್ ನೇಮ್.”
“ಮುಖ್ಯ ಕಾರ್ಯಾಲಯದ ಎ ಪೀಪಲ್ ಫಾರ್ ಜೆಹೋವಾಸ್ ನೇಮ್ ಮ್ಯೂಸಿಯಂ ನೋಡೋಣ ಬನ್ನಿ” ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಬೈಬಲ್ ಮೇಲೆ ಜನ್ರ ನಂಬಿಕೆ ಹೆಚ್ಚಿಸಲು 1914 ರಲ್ಲಿ ಬೈಬಲ್ ವಿದ್ಯಾರ್ಥಿಗಳು ಯಾವ ಹೊಸ ಸಾಧನ ಬಳಸಿದ್ರು? ಈ ವಿಧಾನ ಎಷ್ಟು ಪರಿಣಾಮಕಾರಿ ಆಗಿತ್ತು?
1916 ಮತ್ತು 1918 ರಲ್ಲಿ ಬೈಬಲ್ ವಿದ್ಯಾರ್ಥಿಗಳಿಗೆ ಯಾವ ಪರೀಕ್ಷೆಗಳು ಬಂತು? ಸಂಘಟನೆನಾ ಯೆಹೋವನೇ ನಡೆಸ್ತಾ ಇದ್ದಾನೆ ಅಂತ ಆಗ ಹೇಗೆ ಗೊತ್ತಾಯ್ತು?
ವಿರೋಧದ ಮಧ್ಯದಲ್ಲೂ ಯೆಹೋವನ ಜನ್ರು ತಮ್ಮ ನಂಬಿಕೆನಾ ಹೇಗೆ ತೋರಿಸಿದ್ರು?
1935 ರಲ್ಲಿ ಯೆಹೋವನ ಜನ್ರಿಗೆ ಯಾವ ಹೊಸ ತಿಳುವಳಿಕೆ ಸಿಕ್ತು? ಇದ್ರ ಬಗ್ಗೆ ತಿಳುಕೊಂಡ ಮೇಲೆ ಅವ್ರು ಏನು ಮಾಡಿದ್ರು?
ಈ ವಿಡಿಯೋ ನೋಡಿದ ಮೇಲೆ ಯೆಹೋವನು ತನ್ನ ಜನ್ರನ್ನ ಯಾವಾಗ್ಲೂ ಕಾಪಾಡ್ತಾನೆ ಮತ್ತು ಮಾರ್ಗದರ್ಶಿಸ್ತಾನೆ ಅನ್ನೋ ನಿಮ್ಮ ನಂಬಿಕೆ ಹೇಗೆ ಹೆಚ್ಚಾಯ್ತು?