ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 15-16
ಹಾಡು ಹಾಡುತ್ತಾ ಯೆಹೋವನನ್ನು ಕೊಂಡಾಡಿ
ಸಂಗೀತ ನಮ್ಮ ಯೋಚ್ನೆಗಳು ಮತ್ತು ಭಾವನೆಗಳ ಮೇಲೆ ತುಂಬಾನೆ ಪ್ರಭಾವ ಬೀರುತ್ತೆ. ಯೆಹೋವನ ಆರಾಧನೆಯಲ್ಲಿ ಹಾಡು ಹಾಡುವುದು ಸಹ ಒಂದು ಮುಖ್ಯ ಭಾಗ ಆಗಿದೆ.
ಕೆಂಪು ಸಮುದ್ರದಲ್ಲಿ ಅದ್ಭುತವಾಗಿ ಕಾಪಾಡಿದ್ದಕ್ಕಾಗಿ ಮೋಶೆ ಮತ್ತು ಇಸ್ರಾಯೇಲ್ಯರು ಯೆಹೋವನಿಗೆ ಸ್ತುತಿ ಗೀತೆ ಹಾಡಿದ್ರು
ದಾವೀದ ದೇವಾಲಯದಲ್ಲಿ ಸುಮಾರು 4,000 ಸಂಗೀತಗಾರರನ್ನ ಮತ್ತು ಹಾಡುಗಾರರನ್ನ ನೇಮಿಸಿದ್ದನು
ಸಾಯೋ ಹಿಂದಿನ ರಾತ್ರಿ ಯೇಸು ಮತ್ತು ಅಪೊಸ್ತಲರು ಹಾಡುತ್ತಾ ಯೆಹೋವನನ್ನು ಕೊಂಡಾಡಿದ್ರು
ಯೆಹೋವನಿಗೆ ಸ್ತುತಿ ಗೀತೆ ಹಾಡಲು ಯಾವೆಲ್ಲಾ ಅವಕಾಶಗಳಿವೆ?