ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 29-30
ಯೆಹೋವನಿಗೆ ಕಾಣಿಕೆ
ದೇವದರ್ಶನ ಗುಡಾರ ನಿರ್ಮಿಸಿದಾಗ ಕಾಣಿಕೆಗಳನ್ನು ಕೊಟ್ಟು ಯೆಹೋವನ ಆರಾಧನೆ ಬೆಂಬಲಿಸೋ ಅವಕಾಶ ಬಡವರು ಶ್ರೀಮಂತರು ಹೀಗೆ ಪ್ರತಿಯೊಬ್ಬರಿಗೂ ಇತ್ತು. ಇಂದು ನಾವು ಹೇಗೆ ಯೆಹೋವನಿಗೆ ಕಾಣಿಕೆಗಳನ್ನ ಕೊಡಬಹುದು? ಒಂದು ವಿಧಾನ ಹಣಕಾಸಿನ ಬೆಂಬಲ ನೀಡಬಹುದು. ಯೆಹೋವನ ಆರಾಧನೆಗೆ ಸಮರ್ಪಿಸಲಾಗಿರೋ ರಾಜ್ಯ ಸಭಾಗೃಹ, ಅಧಿವೇಶನ ಹಾಲ್, ಭಾಷಾಂತರ ಕಛೇರಿ, ಬೆತೆಲ್ ಮುಂತಾದ ಕಟ್ಟಡಗಳ ನಿರ್ಮಾಣಕ್ಕಾಗಿ ಹಣವನ್ನು ಕಾಣಿಕೆಯಾಗಿ ಕೊಡಬಹುದು.
ಯೆಹೋವನ ಆರಾಧನೆಗೆ ಹಣಕಾಸು ಸಹಾಯ ಮಾಡೋದ್ರ ಬಗ್ಗೆ ಈ ಕೆಳಗಿನ ವಚನಗಳು ಏನು ಹೇಳುತ್ತವೆ?