ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 31-32
ವಿಗ್ರಹಾರಾಧನೆಯಿಂದ ದೂರ ಓಡಿಹೋಗಿ
ಈಜಿಪ್ಟಿನವರ ಆರಾಧನೆ ನೋಡಿ ಇಸ್ರಾಯೇಲ್ಯರೂ ಮೂರ್ತಿಗಳನ್ನ ಆರಾಧಿಸಲು ಶುರುಮಾಡಿದ್ರು. ಇಂದು ಅನೇಕ ವಿಧಗಳಲ್ಲಿ ವಿಗ್ರಹಾರಾಧನೆ ಮಾಡೋ ಸಾಧ್ಯತೆ ಇದೆ. ನಾವು ಮೂರ್ತಿ ಪೂಜೆ ಮಾಡದಿದ್ರೂ ಕೆಲವೊಂದು ಕೆಲಸಗಳಲ್ಲಿ ಎಷ್ಟು ಮುಳುಗೋಗಿರ್ತೀವಿ ಅಂದ್ರೆ ಯೆಹೋವನ ಸೇವೆ ಮಾಡೋಕು ನಮ್ಮ ಹತ್ರ ಟೈಂ ಇರಲ್ಲ. ಇದು ವಿಗ್ರಹಾರಾಧನೆಗೆ ಸಮ. ಯಾಕಂದ್ರೆ ಪೂರ್ಣ ಮನಸ್ಸಿನಿಂದ ಯೆಹೋವನ ಸೇವೆ ಮಾಡೋಕೆ ನಮ್ಮಿಂದ ಆಗಲ್ಲ.
ಯೆಹೋವನನ್ನು ಆರಾಧಿಸಲು ಯಾವೆಲ್ಲಾ ಅಡೆ-ತಡೆಗಳು ನಂಗೆ ಬರಬಹುದು? ಅವು ನನ್ನನ್ನು ನಿಯಂತ್ರಿಸದಂತೆ ನಾನು ಏನು ಮಾಡಬಹುದು?