ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಅಕ್ಟೋಬರ್‌ ಪು. 5
  • ಯುವಜನರೇ, ಯೆಹೋವನು ನಿಮ್ಮ ಅಚ್ಚುಮೆಚ್ಚಿನ ಫ್ರೆಂಡಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯುವಜನರೇ, ಯೆಹೋವನು ನಿಮ್ಮ ಅಚ್ಚುಮೆಚ್ಚಿನ ಫ್ರೆಂಡಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ನೀವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ನನ್ನ ಫ್ರೆಂಡ್‌ನ ತಪ್ಪನ್ನು ತಿಳಿಸಬೇಕೋ?
    ಎಚ್ಚರ!—2009
  • ನನ್ನ ಅತ್ಯಾಪ್ತ ಮಿತ್ರನು ಸ್ಥಳಬಿಟ್ಟು ಹೋದದ್ದೇಕೆ?
    ಎಚ್ಚರ!—1997
  • ನಾನು ಮಿತ್ರರೊಂದಿಗೆ ಏಕೆ ಸ್ನೇಹದಿಂದಿರಲಾರೆ?
    ಎಚ್ಚರ!—1996
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಅಕ್ಟೋಬರ್‌ ಪು. 5
ಒಬ್ಬ ಯುವ ಸಹೋದರ ತನ್ನ ಟೇಬಲ್‌ ಹತ್ರ ಕೂತು ವೈಯಕ್ತಿಕ ಅಧ್ಯಯನ ಮಾಡ್ತಾ ಇದ್ದಾನೆ.

ನಮ್ಮ ಕ್ರೈಸ್ತ ಜೀವನ

ಯುವಜನರೇ, ಯೆಹೋವನು ನಿಮ್ಮ ಅಚ್ಚುಮೆಚ್ಚಿನ ಫ್ರೆಂಡಾ?

ನೀವು ಫ್ರೆಂಡ್‌ ಮಾಡಿಕೊಳ್ಳೋ ವ್ಯಕ್ತಿಗೆ ಯಾವೆಲ್ಲಾ ಗುಣಗಳಿರಬೇಕು ಅಂತ ಬಯಸ್ತೀರಾ? ನಿಷ್ಠೆ, ಕರುಣೆ ಮತ್ತು ಉದಾರತೆಯಂಥ ಗುಣಗಳು ಆ ವ್ಯಕ್ತಿಯಲ್ಲಿ ಇರಬೇಕಾ? ಈ ಎಲ್ಲಾ ಗುಣಗಳು ಯೆಹೋವನಲ್ಲಿದೆ. (ವಿಮೋ 34:6; ಅಕಾ 14:17) ಯೆಹೋವನು ನೀವು ಪ್ರಾರ್ಥನೆ ಮಾಡಿದಾಗ ಕೇಳ್ತಾನೆ. ಸಹಾಯ ಬೇಕಿದ್ದಾಗೆಲ್ಲಾ ನಿಮ್ಮ ಕೈ ಹಿಡಿತಾನೆ. (ಕೀರ್ತ 18:19, 35) ನಿಮ್ಮ ತಪ್ಪುಗಳನ್ನ ಕ್ಷಮಿಸುತ್ತಾನೆ. (1ಯೋಹಾ 1:9) ಯೆಹೋವನು ಎಷ್ಟು ಒಳ್ಳೇ ಫ್ರೆಂಡ್‌ ಅಲ್ವಾ!

ಯೆಹೋವನ ಫ್ರೆಂಡ್‌ ಆಗೋಕೆ ನೀವೇನು ಮಾಡಬೇಕು? ಬೈಬಲ್‌ ಓದಿ ಯೆಹೋವನ ಬಗ್ಗೆ ತಿಳುಕೊಳ್ಳಿ. ನಿಮ್ಮ ಅನಿಸಿಕೆ ಭಾವನೆಗಳನ್ನು ಆತನೊಟ್ಟಿಗೆ ಹಂಚಿಕೊಳ್ಳಿ. (ಕೀರ್ತ 62:8; 142:2) ಯೆಹೋವನಿಗೆ ತನ್ನ ಮಗ, ತನ್ನ ರಾಜ್ಯ ಮತ್ತು ಭವಿಷ್ಯದ ಬಗ್ಗೆ ಕೊಟ್ಟಿರೋ ಮಾತುಗಳು ಅಂದ್ರೆ ತುಂಬ ಅಮೂಲ್ಯ. ನೀವೂ ಈ ವಿಷಯಗಳನ್ನ ಅಮೂಲ್ಯವಾಗಿ ನೋಡಿ. ಬೇರೆಯವರಿಗೆ ಯೆಹೋವನ ಬಗ್ಗೆ ತಿಳಿಸಿ. (ಧರ್ಮೋ 32:3) ಯೆಹೋವನೊಂದಿಗೆ ಆಪ್ತ ಸ್ನೇಹ ಬೆಳೆಸಿಕೊಂಡ್ರೆ ಆತನು ಎಂದೆಂದಿಗೂ ನಿಮ್ಮ ಫ್ರೆಂಡಾಗಿ ಇರುತ್ತಾನೆ.—ಕೀರ್ತ 73:25, 26, 28.

ಯುವಜನರೇ—“ಯೆಹೋವನು ಎಷ್ಟು ಒಳ್ಳೆಯವನೆಂದು ಸವಿದು ನೋಡಿ” ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಯುವಜನರೇ—‘ಯೆಹೋವನು ಎಷ್ಟು ಒಳ್ಳೆಯವನೆಂದು ಸವಿದು ನೋಡಿ’ ಅನ್ನೋ ವಿಡಿಯೋದ ಒಂದು ಸೀನ್‌. ಒಬ್ಬ ಯುವ ಸಹೋದರಿ ತನ್ನ ವೈಯಕ್ತಿಕ ಅಧ್ಯಯನ ಶುರು ಮಾಡೋ ಮುಂಚೆ ಪ್ರಾರ್ಥಿಸುತ್ತಿದ್ದಾಳೆ.

    ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಳ್ಳಲು ಏನೆಲ್ಲಾ ಮಾಡಬೇಕು?

  • ಯುವಜನರೇ—‘ಯೆಹೋವನು ಎಷ್ಟು ಒಳ್ಳೆಯವನೆಂದು ಸವಿದು ನೋಡಿ’ ಅನ್ನೋ ವಿಡಿಯೋದ ಒಂದು ಸೀನ್‌. ಪಯನೀಯರ್‌ ಸಹೋದರ ಒಬ್ಬ ವ್ಯಕ್ತಿಯ ಹತ್ರ ಕೇರನ್‌ (ಎಸ್‌ಗಾವ್‌) ಭಾಷೆಯಲ್ಲಿ ಒಂದು ಬೈಬಲ್‌ ವಚನನ ಹಂಚಿಕೊಳ್ಳುತ್ತಿದ್ದಾರೆ.

    ಯೆಹೋವನ ಸೇವೆ ಮಾಡೋಕೆ ಸಭೆಯಲ್ಲಿರೋ ಸಹೋದರ ಸಹೋದರಿಯರು ಹೇಗೆ ಸಹಾಯ ಮಾಡ್ತಾರೆ?

  • ಯುವಜನರೇ—‘ಯೆಹೋವನು ಎಷ್ಟು ಒಳ್ಳೆಯವನೆಂದು ಸವಿದು ನೋಡಿ’ ಅನ್ನೋ ವಿಡಿಯೋದ ಒಂದು ಸೀನ್‌. ವೃದ್ಧ ಸಹೋದರ ಸಹೋದರಿಯರಿಂದ ಸಿಗೋ ಸಹಾಯ ಅಮೂಲ್ಯ ಅಂತ ನೆನಸುವ ಯುವ ಸಹೋದರ ಒಬ್ಬ ವೃದ್ಧ ಸಹೋದರನ ಜೊತೆ ಸೇವೆಗೆ ಹೋಗುತ್ತಿದ್ದಾನೆ.

    ಸೇವೆ ಮಾಡೋದ್ರಿಂದ ಯೆಹೋವನೊಂದಿಗೆ ನಿಮ್ಮ ಸಂಬಂಧ ಹೇಗೆ ಬಲಗೊಳ್ಳುತ್ತೆ?

  • ಯುವಜನರೇ—‘ಯೆಹೋವನು ಎಷ್ಟು ಒಳ್ಳೆಯವನೆಂದು ಸವಿದು ನೋಡಿ’ ಅನ್ನೋ ವಿಡಿಯೋದ ಒಂದು ಸೀನ್‌. ತನ್ನ ಮನೆಯಿಂದ ಎರಡು ಗಂಟೆ ನಡೆದು ಬಂದು ಒಬ್ಬ ಸಹೋದರಿ ಕೇಳಿಸಿಕೊಳ್ಳುವ ಸಾಮರ್ಥ್ಯ ಕಳಕೊಂಡ ಹುಡುಗಿಗೆ ಬೈಬಲ್‌ ಕಲಿಸುತ್ತಿದ್ದಾಳೆ.

    ಯೆಹೋವನೊಂದಿಗೆ ನಿಮ್ಮ ಸ್ನೇಹ ಎಂದಿಗೂ ಮುರಿದುಹೋಗಲ್ಲ!

    ಯಾವೆಲ್ಲಾ ರೀತಿಯ ಸೇವೆಗಳನ್ನ ನೀವು ಮಾಡಬಹುದು?

  • ಯೆಹೋವನಲ್ಲಿರೋ ಯಾವ ಗುಣ ನಿಮಗೆ ಇಷ್ಟ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ