ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಫೋನ್ ಮೂಲಕ ಸಾಕ್ಷಿ
ಯಾಕೆ ಪ್ರಾಮುಖ್ಯ: “ಕೂಲಂಕಷ ಸಾಕ್ಷಿ” ನೀಡಲು ಒಂದು ಪ್ರಾಮುಖ್ಯ ವಿಧಾನ ಟೆಲಿಫೋನ್ ಸಾಕ್ಷಿಕಾರ್ಯ. (ಅಕಾ 20:24)a ಈ ವಿಧಾನ ಬಳಸೋದ್ರಿಂದ ನಾವೇ ಖುದ್ದಾಗಿ ಭೇಟಿ ಮಾಡಲು ಆಗದ ಜನರಿಗೆ ಸುವಾರ್ತೆ ಸಾರಬಹುದು.
ಹೇಗೆ ಮಾಡಬಹುದು:
ತಯಾರಿ ಮಾಡಿ. ಒಂದು ಸೂಕ್ತವಾದ ವಿಷ್ಯನ ಆರಿಸಿಕೊಳ್ಳಿ. ನಂತ್ರ ನೀವು ಏನು ಹೇಳಲು ಬಯಸ್ತೀರಾ ಅನ್ನೋದರ ಬಗ್ಗೆ ಒಂದು ಚಿಕ್ಕ ಟಿಪ್ಪಣಿ ಬರೆದಿಡಿ. ಮನೆಯವರ ಹತ್ರ ಮಾತಾಡುವಾಗ ಅದನ್ನ ಟೇಬಲ್ ಮೇಲೆ ಇಟ್ಟುಕೊಂಡ್ರೆ ಸಹಾಯ ಆಗುತ್ತೆ. ಇದ್ರ ಜೊತೆ ಟ್ಯಾಬ್ ಅಥವಾ ಲ್ಯಾಪ್‌ಟಾಪ್ ಸಹ ಇಟ್ಟುಕೊಳ್ಳಿ. ಯಾಕಂದ್ರೆ ಮಾತಾಡುವಾಗ JW ಲೈಬ್ರರಿ ಅಥವಾ jw.org® ವೆಬ್‌ಸೈಟ್ ಕೂಡ ಬೇಕಾಗಬಹುದು
ಆರಾಮಾಗಿ ಮಾತಾಡಿ. ಸ್ವಾಭಾವಿಕವಾಗಿ, ಯಾವಾಗಲೂ ಮಾತಾಡೋ ತರ ಮಾತಾಡಿ. ಆ ವ್ಯಕ್ತಿ ನಿಮ್ಮ ಎದುರುಗಡೆ ಇದ್ರೆ ಹೇಗೆ ಮಾತಾಡುತ್ತೀರೋ ಹಾಗೇ ಮಾತಾಡಿ. ಮುಗುಳ್ನಗೆ ಬೀರಿ, ಭಾವನೆಗಳು ನಿಮ್ಮ ಮುಖದಲ್ಲಿ ಕಾಣಲಿ, ಕೈ ಸನ್ನೆಗಳನ್ನೂ ಉಪಯೋಗಿಸಿ. ಮಾತನ್ನ ಮಧ್ಯದಲ್ಲಿ ಸುಮ್ಮಸುಮ್ಮನೆ ನಿಲ್ಲಿಸಬೇಡಿ. ನಿಮ್ಮ ಜೊತೆ ಬೇರೆಯವರನ್ನೂ ಸೇರಿಸಿಕೊಂಡ್ರೆ ಚೆನ್ನಾಗಿರುತ್ತೆ. ಮನೆಯವರು ಪ್ರಶ್ನೆ ಕೇಳಿದ್ರೆ ಅದನ್ನ ಮತ್ತೆ ಗಟ್ಟಿಯಾಗಿ ಹೇಳಿ. ಆಗ ನಿಮ್ಮ ಜೊತೆ ಇದ್ದವರು ಉತ್ತರ ಹುಡುಕಲು ಸಹಾಯ ಮಾಡಬಹುದು
ಪುನರ್ಭೇಟಿಗೆ ತಳಪಾಯ ಹಾಕಿ. ಮನೆಯವರು ಆಸಕ್ತಿ ತೋರಿಸಿದ್ರೆ, ಒಂದು ಪ್ರಶ್ನೆ ಕೇಳಿ, ಉತ್ರನ ಮುಂದಿನ ಸಲ ಫೋನ್ ಮಾಡಿದಾಗ ಹೇಳ್ತೀನಿ ಅಂತ ಹೇಳಿ. ಅವರಿಗೆ ಇಷ್ಟ ಆಗೋ ಪ್ರಕಾಶನವನ್ನ ಇ-ಮೇಲ್ ಮೂಲಕ ಕಳಿಸ್ತೀನಿ ಅಥವಾ ಅವರು ಇಷ್ಟಪಡೋದಾದ್ರೆ ನಾನೇ ಅದನ್ನ ಮನೆಗೆ ತಂದು ಕೊಡ್ತೀನಿ ಅಂತ ಸಹ ತಿಳಿಸಬಹುದು. ಅಷ್ಟೇ ಅಲ್ಲ, ಅವರಿಗೆ ಪ್ರಯೋಜ್ನ ಆಗೋ ವಿಡಿಯೋ ಅಥವಾ ಲೇಖನನ ಫೋನ್ ಇಲ್ಲಾಂದ್ರೆ ಇ-ಮೇಲ್ ಮೂಲಕ ಕಳಿಸಬಹುದಾ ಅಂತನೂ ಕೇಳಬಹುದು. ಕೆಲವು ದಿನಗಳಾದ ಮೇಲೆ ಸನ್ನಿವೇಶ ನೋಡಿ ನಮ್ಮ ವೆಬ್‌ಸೈಟಲ್ಲಿರೋ ಬೇರೆ ವಿಷ್ಯಗಳ ಬಗ್ಗೆನೂ ತಿಳಿಸಿ
a ನೀವಿರೋ ಸ್ಥಳದಲ್ಲಿ ಫೋನ್ ಮೂಲಕ ಸಾಕ್ಷಿ ನೀಡೋ ಅವಕಾಶ ಇದ್ರೆ ಅದನ್ನ ಮಾಡುವಾಗ ಪರ್ಸನಲ್ ಡೇಟಾಗೆ ಸಂಬಂಧಿಸಿದ ನಿಯಮಗಳನ್ನ ಪಾಲಿಸಿ.