ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 12-13
ಕುಷ್ಠರೋಗದ ಬಗ್ಗೆ ಕೊಟ್ಟ ನಿಯಮಗಳಿಂದ ಕಲಿಯುವ ಪಾಠ
ಕುಷ್ಠರೋಗದ ಬಗ್ಗೆ ಕೊಟ್ಟ ನಿಯಮಗಳಿಂದ ಯೆಹೋವನೊಟ್ಟಿಗೆ ನಮ್ಮ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳೋದ್ರ ಬಗ್ಗೆ ನಾವೇನು ಕಲಿಬಹುದು?
ಒಬ್ಬನಿಗೆ ಕುಷ್ಠರೋಗ ಇದ್ಯಾ ಇಲ್ವಾ ಅಂತ ಆದಷ್ಟು ಬೇಗ ಹೇಗೆ ಕಂಡುಹಿಡಿಯೋದು ಅನ್ನೋದನ್ನ ಯೆಹೋವನು ಯಾಜಕರಿಗೆ ಕಲಿಸಿದನು. ಅದೇ ತರ ಇಂದು ಹಿರಿಯರು ಯೆಹೋವನೊಟ್ಟಿಗೆ ಸಂಬಂಧ ಬಲಪಡಿಸಿಕೊಳ್ಳೋ ಅಗತ್ಯ ಯಾರಿಗಿದೆ ಅಂತ ಆದಷ್ಟು ಬೇಗ ಕಂಡುಹಿಡಿದು ಅವರಿಗೆ ಸಹಾಯ ಮಾಡ್ತಾರೆ.—ಯಾಕೋ 5:14, 15
ರೋಗ ಬೇರೆಯವರಿಗೆ ಹರಡದಂತೆ ತಡೆಯಲು ಕುಷ್ಠರೋಗಿಗಳು ಮುಟ್ಟಿರೋ ವಸ್ತುಗಳನ್ನ ಇಸ್ರಾಯೇಲ್ಯರು ಬೆಂಕಿಯಲ್ಲಿ ಹಾಕಿ ಸುಡಬೇಕಿತ್ತು. ಅದೇ ತರ ಪಾಪಕ್ಕೆ ನಡೆಸುವಂಥ ವಿಷಯಗಳು ಎಷ್ಟೇ ಅಮೂಲ್ಯವಾಗಿರಲಿ ಅದನ್ನ ಬಿಟ್ಟುಬಿಡಲು ಕ್ರೈಸ್ತರು ತಯಾರಿರಬೇಕು. (ಮತ್ತಾ 18:8, 9) ಅದರಲ್ಲಿ ಕೆಲವರ ಫ್ರೆಂಡ್‌ಶಿಪ್, ಕೆಲವು ಅಭ್ಯಾಸಗಳು ಅಥವಾ ಕೆಲವು ಮನೋರಂಜನೆಗಳನ್ನ ಬಿಟ್ಟುಬಿಡೋದು ಸಹ ಸೇರಿರಬಹುದು
ಯೆಹೋವನ ಸಹಾಯ ಪಡಕೊಳ್ಳೋ ಅಗತ್ಯ ತನಗಿದೆ ಅಂತ ಒಬ್ಬ ಕ್ರೈಸ್ತನು ಹೇಗೆ ತೋರಿಸಬಹುದು?