ಬಿಡುಗಡೆ ವರ್ಷದಲ್ಲಿ ಜಮೀನನ್ನು ವಾಪಸ್ ಪಡೆದು ತಮ್ಮತಮ್ಮ ಕುಟುಂಬದ ಬಳಿಗೆ ಮರಳಿ ಬರುತ್ತಿರೋ ಇಸ್ರಾಯೇಲಿನ ಗುಲಾಮರು
ಬೈಬಲಿನಲ್ಲಿರುವ ರತ್ನಗಳು
ಬಿಡುಗಡೆ ವರ್ಷ ಮತ್ತು ಭವಿಷ್ಯದಲ್ಲಿ ಸಿಗೋ ಬಿಡುಗಡೆ
ಬಿಡುಗಡೆ ವರ್ಷದ ಏರ್ಪಾಡಿನಿಂದ ಇಸ್ರಾಯೇಲಿನಲ್ಲಿ ಯಾರೂ ಸಾಲದಲ್ಲಿ ಶಾಶ್ವತವಾಗಿ ಮುಳುಗಿ ಹೋಗ್ತಿರಲಿಲ್ಲ ಮತ್ತು ಬಡತನ ಇರಲಿಲ್ಲ (ಯಾಜ 25:10; it-1-E ಪುಟ 871; ಮುಖಪುಟ ಚಿತ್ರ ನೋಡಿ)
ಇಸ್ರಾಯೇಲ್ಯರ ಕಾಲದಲ್ಲಿ ಜಮೀನನ್ನು ಮಾರೋದು ಅಂದ್ರೆ ಅದನ್ನ ಭೋಗ್ಯ ಅಥವಾ ಲೀಸ್‌ಗೆ ಕೊಡೋದು. ಸಾಲ ಪಡೆದ ಒಬ್ಬ ಇಸ್ರಾಯೇಲನು ತನ್ನ ಜಮೀನನ್ನು ಸಾಲ ಕೊಟ್ಟವನಿಗೆ ಲೀಸ್‌ಗೆ ಕೊಡ್ತಿದ್ದ. ಒಂದು ವರ್ಷದಲ್ಲಿ ಬೆಳೆದ ಬೆಳೆಗೆ ಎಷ್ಟು ದುಡ್ಡು ಸಿಗಬಹುದಿತ್ತೋ ಅಷ್ಟು ದುಡ್ಡಿನ ಆಧಾರದ ಮೇಲೆ ಅವನ ಸಾಲವನ್ನ ಮನ್ನ ಮಾಡಲಾಗುತ್ತಿತ್ತು. (ಯಾಜ 25:15; it-1-E ಪುಟ 1200 ಪ್ಯಾರ 2)
ಬಿಡುಗಡೆ ವರ್ಷದ ನಿಯಮಗಳನ್ನ ಪಾಲಿಸಿದ ತನ್ನ ಜನರನ್ನ ಯೆಹೋವನು ಆಶೀರ್ವದಿಸಿದನು (ಯಾಜ 25:18-22; it-2-E ಪುಟ 122-123)
ಭವಿಷ್ಯದಲ್ಲಿ ಯೆಹೋವನ ನಂಬಿಗಸ್ತ ಜನರು ಇನ್ನೊಂದು ರೀತಿಯ ಬಿಡುಗಡೆಯನ್ನ ಪಡೆಯಲಿದ್ದಾರೆ. ಅದು ಪಾಪ ಮತ್ತು ಮರಣದಿಂದ ಸಿಗೋ ಶಾಶ್ವತ ಬಿಡುಗಡೆ.—ರೋಮ 8:21.
ಯೆಹೋವನು ಮಾತು ಕೊಟ್ಟಿರೋ ಬಿಡುಗಡೆ ಸಿಗಬೇಕಂದ್ರೆ ನಮ್ಮಲ್ಲಿ ಪ್ರತಿಯೊಬ್ಬರೂ ಏನು ಮಾಡಬೇಕು?