ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ
ದೇವರ ವಾಕ್ಯನ ಚೆನ್ನಾಗಿ ಬಳಸಿ
ದೇವರ ವಾಕ್ಯಕ್ಕೆ ತುಂಬಾ ಶಕ್ತಿ ಇದೆ! (ಇಬ್ರಿ 4:12) ಅದರಲ್ಲಿರೋ ಮಾತುಗಳು ದೇವರ ಬಗ್ಗೆ ಗೊತ್ತಿಲ್ಲದವರ ಹೃದಯಗಳನ್ನೂ ಸ್ಪರ್ಶಿಸುತ್ತೆ. (1ಥೆಸ 1:9; 2:13) ಬೈಬಲಲ್ಲಿರೋ ಒಂದು ಸತ್ಯನ ಬೇರೆಯವರಿಗೆ ತೋರಿಸಿದಾಗ ಅವರ ಮುಖ ಅರಳೋದನ್ನ ನೋಡಿ ನಮಗೂ ತುಂಬಾ ಖುಷಿ ಆಗುತ್ತೆ.
ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ದೇವರ ವಾಕ್ಯದ ಶಕ್ತಿಯನ್ನು ಮನಗಾಣಿಸಿ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ನೀತಾ ಹೇಗೆ ಜಾಸ್ಮಿನಿನ ಗಮನವನ್ನ ದೇವರ ವಾಕ್ಯದ ಕಡೆಗೆ ತಿರುಗಿಸಿದ್ರು?
ಬೈಬಲ್ ವಚನನ ಗಟ್ಟಿಯಾಗಿ ಓದುವಂತೆ ನೀತಾ ಜಾಸ್ಮಿನ್ಗೆ ಯಾಕೆ ಹೇಳಿದ್ರು? ವಚನದ ಮುಖ್ಯ ಪದಗಳ ಕಡೆಗೆ ಗಮನ ಸೆಳೆಯಲು ನೀತಾ ಏನು ಮಾಡಿದ್ರು?
ವಚನ ಜಾಸ್ಮಿನಿನ ಹೃದಯ ಸ್ಪರ್ಶಿಸಿತು ಅಂತ ಹೇಗೆ ಹೇಳಬಹುದು? ಅದನ್ನ ನೋಡಿ ನೀತಾಗೆ ಹೇಗನಿಸ್ತು?