ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಸೆಪ್ಟೆಂಬರ್‌ ಪು. 11
  • ಸಹೋದರ ಸಹೋದರಿಯರಿಂದ ಸಹಾಯ ಪಡಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಹೋದರ ಸಹೋದರಿಯರಿಂದ ಸಹಾಯ ಪಡಕೊಳ್ಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮನಸ್ಸಿಗೆ ನಾಟಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ದುಶ್ಚಟ ಬಿಡಲು ವಿದ್ಯಾರ್ಥಿಗಳಿಗೆ ಸಹಾಯಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಸೆಪ್ಟೆಂಬರ್‌ ಪು. 11

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಸಹೋದರ ಸಹೋದರಿಯರಿಂದ ಸಹಾಯ ಪಡಕೊಳ್ಳಿ

ಯೆಹೋವ ದೇವರು “ಎಲ್ಲ ಕಡೆ ಇರೋ” ನಮ್ಮ ಸಹೋದರರನ್ನ ನಮ್ಮ ಸಹಾಯಕ್ಕಾಗಿ ಕೊಟ್ಟಿದ್ದಾರೆ. (1ಪೇತ್ರ 5:9) ಸೇವೆಯಲ್ಲಿ ಏನೇ ಸಮಸ್ಯೆ ಬಂದ್ರೂ ಅದನ್ನ ಚೆನ್ನಾಗಿ ಮಾಡಿಕೊಂಡು ಹೋಗೋಕೆ ಈ ಸಹೋದರರು ಸಹಾಯ ಮಾಡ್ತಾರೆ. ಉದಾಹರಣೆಗೆ ಅಕ್ವಿಲ-ಪ್ರಿಸ್ಕಿಲ್ಲ, ಸೀಲ, ತಿಮೊತಿ ಮತ್ತು ಬೇರೆಯವರು ಅಪೊಸ್ತಲ ಪೌಲನಿಗೆ ಸಹಾಯ ಮಾಡಿದ್ರು.—ಅಕಾ 18:1-5.

ಸಹೋದರ ಸಹೋದರಿಯರು ಸೇವೇಲಿ ನಮಗೆ ಹೇಗೆ ಸಹಾಯ ಮಾಡ್ತಾರೆ? ಅವರು ನಮಗೆ ತುಂಬ ವಿಷ್ಯಗಳನ್ನ ಹೇಳಿಕೊಡ್ತಾರೆ. ಮನೆಯವರು ನಮ್ಮ ಸಂದೇಶ ಕೇಳದಿದ್ರೆ ಏನ್‌ ಮಾಡಬೇಕು, ಪುನರ್ಭೇಟಿ ಹೇಗೆ ಮಾಡೋದು, ಬೈಬಲ್‌ ಸ್ಟಡಿ ಮಾಡೋಕೆ ಮನೆಯವರನ್ನ ಹೇಗೆ ಕೇಳೋದು, ಹೇಗೆ ಸ್ಟಡಿ ಮಾಡೋದು ಅಂತೆಲ್ಲಾ ಹೇಳಿಕೊಡ್ತಾರೆ. ಅಂಥ ಸಹೋದರ ಸಹೋದರಿಯರ ಹತ್ರ ಹೋಗಿ ಸಹಾಯ ಕೇಳಿ. ಇದ್ರಿಂದ ನಿಮ್ಮಿಬ್ಬರಿಗೂ ಪ್ರಯೋಜನ ಆಗುತ್ತೆ. ಸಂತೋಷವಾಗಿ ಸೇವೆ ಮಾಡೋಕೆ ಆಗುತ್ತೆ.—ಫಿಲಿ 1:25.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ನಮ್ಮ ಸಹೋದರರು ವಿಡಿಯೋ ನೋಡಿ, ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • “ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ನಮ್ಮ ಸಹೋದರರು” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ನೀತಾ ಇನ್ನೊಬ್ಬ ಸಹೋದರಿಯನ್ನ ಕರಕೊಂಡು ಹೋಗಿ ಜಾಸ್ಮಿನ್‌ಗೆ ಸ್ಟಡಿ ಮಾಡ್ತಿದ್ದಾಳೆ.

    ಜಾಸ್ಮಿನನ್ನ ಕೂಟಗಳಿಗೆ ಕರ್ಕೊಂಡು ಬರೋಕೆ ನೀತಾ ಏನೆಲ್ಲಾ ಮಾಡಿದಳು?

  • “ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ನಮ್ಮ ಸಹೋದರರು” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ನೀತಾ ಸ್ಟಡಿಗೆ ಅಬಿಗೇ ಅನ್ನೋ ಸಹೋದರಿಯನ್ನ ಕರಕೊಂಡು ಹೋಗಿದ್ದಾಳೆ. ಆ ಸಹೋದರಿ ತಾನು ಮುಂಚೆ ಮ್ಯೂಸಿಕ್‌ ಬ್ಯಾಂಡಲ್ಲಿ ಇದ್ದೆ ಅಂತ ಜಾಸ್ಮಿನ್‌ಗೆ ಹೇಳ್ತಿದ್ದಾಳೆ.

    ನಮ್ಮ ಬೈಬಲ್‌ ಸ್ಟಡಿಗೆ ಬೇರೆ ಸಹೋದರ ಸಹೋದರಿಯರನ್ನ ಯಾಕೆ ಕರ್ಕೊಂಡು ಹೋಗಬೇಕು?

  • “ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ನಮ್ಮ ಸಹೋದರರು” ವಿಡಿಯೋದಲ್ಲಿ ಬರೋ ಒಂದು ದೃಶ್ಯ. ನೀತಾಗೆ ಒಂದು ಸಲ ಜಾಸ್ಮಿನ್‌ ಸ್ಟಡಿಗೆ ಹೋಗೋಕೆ ಆಗದೇ ಇದ್ದಾಗ ಅಬಿಗೇ ಸ್ಟಡಿ ಮಾಡ್ತಿದ್ದಾರೆ.

    ಒಬ್ಬ ವ್ಯಕ್ತಿನ ಶಿಷ್ಯನಾಗಿ ಮಾಡೋಕೆ ಇಡೀ ಸಭೆಯ ಸಹಾಯ ಬೇಕು

    ಸಹೋದರಿ ಅಬಿಗೇ ಮತ್ತು ಜಾಸ್ಮಿನ್‌ ಇಬ್ಬರಿಗೂ ಏನಂದ್ರೆ ತುಂಬ ಇಷ್ಟ?

  • ಸಹೋದರ ಸಹೋದರಿಯರು ನಿಮಗೆ ಸೇವೆನ ಚೆನ್ನಾಗಿ ಮಾಡೋಕೆ ಯಾವ್ಯಾವ ಕೌಶಲಗಳನ್ನ ಕಲಿಸಿ ಕೊಡ್ತಾರೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ