ಬೈಬಲಿನಲ್ಲಿರುವ ರತ್ನಗಳು
ನಿಮ್ಮ ಆಸ್ತಿ ಕಾಪಾಡಿಕೊಳ್ಳಿ
ತನ್ನ ಆಸ್ತಿ ಕಾಪಾಡಿಕೊಳ್ಳೋಕೆ ಕಾಲೇಬ ಶಕ್ತಿಶಾಲಿ ಶತ್ರುಗಳನ್ನ ಓಡಿಸಿಬಿಟ್ಟ (ಯೆಹೋ 15:14; it-1-E ಪುಟ 1083 ಪ್ಯಾರ 3)
ಇಸ್ರಾಯೇಲ್ಯರಲ್ಲಿ ಕೆಲವರು ತಮ್ಮ ಆಸ್ತಿಯನ್ನ ಸುಳ್ಳಾರಾಧಕರ ಕೈಯಿಂದ ಕಾಪಾಡಿಕೊಳ್ಳಲಿಲ್ಲ (ಯೆಹೋ 16:10; it-1-E ಪುಟ 848)
ತಮ್ಮ ಆಸ್ತಿ ಕಾಪಾಡಿಕೊಳ್ಳೋಕೆ ಪ್ರಾಮಾಣಿಕ ಪ್ರಯತ್ನ ಹಾಕಿದವರಿಗೆ ಯೆಹೋವ ಸಹಾಯ ಮಾಡಿದನು (ಧರ್ಮೋ 20:1-4; ಯೆಹೋ 17:17, 18; it-1-E ಪುಟ 402 ಪ್ಯಾರ 3)
ನಮ್ಮೆಲ್ಲರಿಗೆ ಶಾಶ್ವತ ಜೀವ ಅನ್ನೋ ಆಸ್ತಿಯನ್ನ ಯೆಹೋವ ಕೊಟ್ಟಿದ್ದಾರೆ. ಅದನ್ನ ಕಾಪಾಡಿಕೊಳ್ಳೋಕೆ ಅಡ್ಡಿಯಾಗೋ ಪ್ರಲೋಭನೆಗಳನ್ನು ಎದುರಿಸೋಕೆ ಬೈಬಲ್ ಅಧ್ಯಯನ, ಕೂಟಗಳು, ಸೇವೆ, ಪ್ರಾರ್ಥನೆ ಸಹಾಯ ಮಾಡುತ್ತೆ.
ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ನನ್ನ ಆಸ್ತಿಯನ್ನ ಕಾಪಾಡಿಕೊಳ್ತಾ ಇದ್ದೀನಾ?’