ಕ್ರೈಸ್ತ ಜೀವನ
ಸೆಪ್ಟೆಂಬರ್ನಲ್ಲಿ ಬೈಬಲ್ ಅಧ್ಯಯನಗಳನ್ನು ಶುರುಮಾಡಲು ವಿಶೇಷ ಅಭಿಯಾನ
ಸೆಪ್ಟೆಂಬರ್ ತಿಂಗಳಲ್ಲಿ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನು ಬಳಸಿ ಬೈಬಲ್ ಅಧ್ಯಯನಗಳನ್ನು ಶುರು ಮಾಡಬೇಕು ಅನ್ನೋದೇ ನಮ್ಮ ಗುರಿ. ಈ ತಿಂಗಳಲ್ಲಿ ಸಹಾಯಕ ಪಯನೀಯರಿಂಗ್ ಮಾಡುವವರು 30 ತಾಸು ಹಾಕಿದ್ರೂ ಸಾಕು. ಈ ವಿಶೇಷ ಅಭಿಯಾನ ಹೇಗೆ ಮಾಡೋದು?
ಆರಂಭದ ಭೇಟಿಯಲ್ಲಿ: ಸ್ನೇಹಿತರ ಹತ್ರ ಮಾತಾಡೋ ತರ ಸಂಭಾಷಣೆ ಆರಂಭಿಸಿ. ಪ್ರೀತಿ-ಕಾಳಜಿಯಿಂದ ಮಾತಾಡಿ. ಬೈಬಲ್ ಬಗ್ಗೆ ಮಾತಾಡೋಕೆ ಅವಸರ ಪಡಬೇಡಿ. ತುಂಬ ಸಲ ಮಾತಾಡಿದ ಮೇಲೆ ಸರಿಯಾದ ಸಮಯ ನೋಡಿ ಒಂದು ಬೈಬಲ್ ವಿಷಯದ ಬಗ್ಗೆ ಮಾತಾಡಿ. ಅದರ ಬಗ್ಗೆ ಅವರಿಗೆ ನಿಜವಾಗಲೂ ತಿಳಿದುಕೊಳ್ಳುವ ಆಸೆ ಇದ್ದರೆ, ಅದರ ಬಗ್ಗೆ ಚರ್ಚೆ ಮಾಡೋಕೆ ಇಷ್ಟ ಇದ್ದರೆ ಬೈಬಲ್ ಅಧ್ಯಯನದ ಬಗ್ಗೆ ಹೇಳಿ. ನಿಮ್ಮ ಹಳೇ ಪುನರ್ಭೇಟಿಗಳನ್ನ ಮತ್ತು ಹಿಂದೆ ಆಸಕ್ತಿ ತೋರಿಸಿದವರ ಹತ್ತಿರನೂ ಮಾತಾಡಿ. ಯಾಕಂದ್ರೆ ಮುಂಚೆ ಅವರು ಅಧ್ಯಯನ ಬೇಡ ಅಂದಿದ್ದರೂ ಈಗ ಈ ಹೊಸ ಕಿರುಹೊತ್ತಗೆ ನೋಡಿ, ಕಲಿಸುವ ವಿಧಾನ ನೋಡಿ ಇಷ್ಟ ಆಗಬಹುದು. ಯಾರೂ ಇಲ್ಲದೆ ಇರೋ ಮನೆಯಲ್ಲಿ ಕಿರುಹೊತ್ತಗೆಯನ್ನು ಇಟ್ಟು ಬರಬೇಡಿ. ಆಮೇಲೆ ಆಸಕ್ತಿ ಇಲ್ಲದವರಿಗೆ ಈ ಕಿರುಹೊತ್ತಗೆಯನ್ನ ಪೋಸ್ಟ್ ಕೂಡ ಮಾಡಬೇಡಿ. ಈ ತಿಂಗಳಲ್ಲಿ ಸಭೆಯ ಸೇವಾ ಕಮಿಟಿಯು ಹೆಚ್ಚು ಸೇವಾ ಕೂಟಗಳನ್ನು ನಡೆಸೋಕೆ ಏರ್ಪಾಡು ಮಾಡಬಹುದು.
ಬೇರೆ ಅವಕಾಶಗಳು: ನಿಮ್ಮ ಸಭೆ ತಳ್ಳುಬಂಡಿ ಸಾಕ್ಷಿಕಾರ್ಯವನ್ನು ಏರ್ಪಾಡು ಮಾಡಿದರೆ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯ ಪೋಸ್ಟರನ್ನು ಹಾಕಿ. ಆ ಸಮಯದಲ್ಲಿ ಯಾರಾದರೂ ಆಸಕ್ತಿ ತೋರಿಸಿದ್ರೆ, ಕಿರುಹೊತ್ತಗೆಯನ್ನು ತಗೊಂಡ್ರೆ ನಾವು ಫ್ರೀಯಾಗಿ ಬೈಬಲ್ ಕಲಿಸ್ತೀವಿ ಅಂತನೂ ಹೇಳಿ. ಬಿಸಿನೆಸ್ ಟೆರಿಟೊರಿಯಲ್ಲಿ ಸೇವೆ ಮಾಡೋಕೆ ಕೆಲವು ಪ್ರಚಾರಕರನ್ನು ಆರಿಸಿ ಸೇವಾ ಮೇಲ್ವಿಚಾರಕ ಅವರನ್ನು ಕಳಿಸಬಹುದು. ಅಷ್ಟೇ ಅಲ್ಲ, ನಿಮ್ಮ ಜೊತೆ ಕೆಲಸ ಮಾಡುವವರ ಹತ್ತಿರ, ಅನೌಪಚಾರಿಕ ಸೇವೆ ಮಾಡುವಾಗ ಸಿಗುವವರ ಹತ್ತಿರ ಅವರಿಗೆ ನಿಜವಾಗಲೂ ಆಸಕ್ತಿ ಇದ್ದರೆ ಬೈಬಲ್ ಅಧ್ಯಯನದ ಬಗ್ಗೆ ಹೇಳಬಹುದು.
ಜನರಿಗೆ ‘ಕಲಿಸಿ’ ಅವರನ್ನು ‘ಶಿಷ್ಯರನ್ನಾಗಿ ಮಾಡೋಕೆ’ ಯೇಸು ನಮಗೆ ಆಜ್ಞೆ ಕೊಟ್ಟಿದ್ದಾನೆ. (ಮತ್ತಾ 28:19, 20) ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನು ಬಳಸಿ ಈ ವಿಶೇಷ ಅಭಿಯಾನದಲ್ಲಿ ನಮ್ಮ ಗುರಿ ಮುಟ್ಟೋಣ.