ಬೈಬಲಿನಲ್ಲಿರುವ ನಿಧಿ
ಜನರ ಮುಂದೆ ಸೊಲೊಮೋನ ಮಾಡಿದ ಪ್ರಾರ್ಥನೆ
ದೇವಾಲಯದ ಸಮರ್ಪಣೆಯ ಸಮಯದಲ್ಲಿ ಸೊಲೊಮೋನ ಜನರ ಮುಂದೆ ಮನಸ್ಸುಬಿಚ್ಚಿ ಪ್ರಾರ್ಥನೆ ಮಾಡಿದ (1ಅರ 8:22; ಕಾವಲಿನಬುರುಜು09 11/15 ಪುಟ 9 ಪ್ಯಾರ 9-10)
ಸೊಲೊಮೋನ ತನ್ನ ಬಗ್ಗೆ ಕೊಚ್ಚಿಕೊಳ್ಳಲಿಲ್ಲ, ಯೆಹೋವನನ್ನು ಹೊಗಳಿದ (1ಅರ 8:23, 24)
ಅವನ ಪ್ರಾರ್ಥನೆಯಲ್ಲಿ ದೀನತೆ ಎದ್ದುಕಾಣುತ್ತಿತ್ತು (1ಅರ 8:27; ಕಾವಲಿನಬುರುಜು99 1/15 ಪುಟ 17 ಪ್ಯಾರ 7-8)
ಬೇರೆಯವರ ಮುಂದೆ ಪ್ರಾರ್ಥನೆ ಮಾಡುವಾಗ ಹೇಗೆ ಮಾಡಬೇಕು ಅನ್ನೋದಕ್ಕೆ ಸೊಲೊಮೋನ ಒಳ್ಳೇ ಮಾದರಿ. ನಾವು ಮಾಡುವ ಪ್ರಾರ್ಥನೆ ಜನರನ್ನು ಮೆಚ್ಚಿಸುವುದಕ್ಕಿಂತ ಯೆಹೋವನನ್ನು ಮೆಚ್ಚಿಸಬೇಕು.