ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 9
  • ಕಷ್ಟ ಸಹಿಸಿಕೊಳ್ಳೋಕೆ ಯೆಹೋವ ಶಕ್ತಿ ಕೊಡ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಷ್ಟ ಸಹಿಸಿಕೊಳ್ಳೋಕೆ ಯೆಹೋವ ಶಕ್ತಿ ಕೊಡ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • “ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನಾವು ಯಾವತ್ತೂ ಒಂಟಿಯಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ನಾವು ತಾಳ್ಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 9
ಅಪ್ಪ ಅಮ್ಮ, ತಮ್ಮ ಮಕ್ಕಳ ಜೊತೆ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಸಹೋದರ ಸಹೋದರಿಯರ ಹತ್ರ ಮಾತಾಡ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ಕಷ್ಟ ಸಹಿಸಿಕೊಳ್ಳೋಕೆ ಯೆಹೋವ ಶಕ್ತಿ ಕೊಡ್ತಾನೆ

ನಾವು ಕೊನೇ ದಿನಗಳಲ್ಲಿ ಇರೋದರಿಂದ ನಮಗೆ ತುಂಬ ಕಷ್ಟಗಳು ಬರುತ್ತೆ. ಕೆಲವೊಂದು ಸಲ ‘ಇನ್ನು ನನ್ನಿಂದ ಸಹಿಸಕ್ಕಾಗಲ್ಲ’ ಅಂತಾನೂ ಅನಿಸಿಬಿಡುತ್ತೆ. ಆಗ ನಾವು ಯೆಹೋವನ ಜೊತೆ ಇರೋ ಸ್ನೇಹವನ್ನ ಇನ್ನೂ ಗಟ್ಟಿಮಾಡಿಕೊಂಡ್ರೆ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಆತನು ಸಹಾಯ ಮಾಡ್ತಾನೆ. (ಯೆಶಾ 43:2, 4) ಯೆಹೋವನ ಜೊತೆ ನಮ್ಮ ಸ್ನೇಹವನ್ನ ಗಟ್ಟಿಮಾಡಿಕೊಳ್ಳೋಕೆ ಏನು ಮಾಡಬೇಕು?

ಪ್ರಾರ್ಥನೆ. ನಾವು ಯೆಹೋವನ ಹತ್ರ ಮನಸ್ಸುಬಿಚ್ಚಿ ಮಾತಾಡಿದ್ರೆ ಮನಸ್ಸಿಗೆ ನೆಮ್ಮದಿಯನ್ನ, ಕಷ್ಟ ಸಹಿಸಿಕೊಳ್ಳೋಕೆ ಬೇಕಾದ ಬಲವನ್ನ ಆತನು ನಮಗೆ ಕೊಟ್ಟೇ ಕೊಡ್ತಾನೆ.—ಫಿಲಿ 4:6, 7; 1ಥೆಸ 5:17.

ಕೂಟಗಳು. ಕಷ್ಟದಲ್ಲಿದ್ದಾಗ ನಮಗೆ ಬೈಬಲಲ್ಲಿರೋ ಸಾಂತ್ವನದ ಮಾತುಗಳು ಮತ್ತು ಸಭೆಯವರ ಬೆಂಬಲ ಜಾಸ್ತಿ ಬೇಕು. ಅದು ನಮಗೆ ಕೂಟಗಳಿಂದ ಸಿಗುತ್ತೆ. (ಇಬ್ರಿ 10:24, 25) ಹಾಗಾಗಿ ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡಿ, ತಪ್ಪದೆ ಕೂಟಗಳಿಗೆ ಹೋಗಿ ಮತ್ತು ಉತ್ತರ ಕೊಡಿ. ಹೀಗೆ ಪವಿತ್ರಶಕ್ತಿಯಿಂದ ಸಿಗೋ ಬಲವನ್ನ ಪಡಕೊಳ್ಳಿ.—ಪ್ರಕ 2:29.

ಸೇವೆ. ಸೇವೆಯಲ್ಲಿ ಜಾಸ್ತಿ ಸಮಯ ಕಳೆದ್ರೆ ಯೆಹೋವ ಕೊಡೋ ಆಶೀರ್ವಾದಗಳ ಬಗ್ಗೆನೇ ಯೋಚನೆ ಮಾಡ್ತೀವಿ. ಸಭೆಯವರ ಜೊತೆ ಮತ್ತು ಯೆಹೋವನ ಜೊತೆ ನಮಗಿರೋ ಸಂಬಂಧ ಇನ್ನೂ ಗಟ್ಟಿಯಾಗುತ್ತೆ.—1ಕೊರಿಂ 3:5-10.

ನನಗೆ ಶಕ್ತಿ ಯೆಹೋವನಿಂದಲೇ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಕಷ್ಟ ಬಂದಾಗ ಯೆಹೋವನ ಜೊತೆ ಸ್ನೇಹವನ್ನ ಗಟ್ಟಿಮಾಡಿಕೊಳ್ಳೋಕೆ ಮಾಲುಗೆ ಯಾವುದು ಸಹಾಯ ಮಾಡ್ತು?

  • ಕೀರ್ತನೆ 34:18ರಲ್ಲಿರೋ ಮಾತುಗಳು ಮಾಲುಗೆ ಸಹಾಯ ಮಾಡಿದ ತರ ನಮಗೂ ಹೇಗೆ ಸಹಾಯ ಮಾಡುತ್ತೆ?

  • ನಮಗೆ ಕಷ್ಟಗಳು ಬಂದಾಗ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಯೆಹೋವ ಕೊಡ್ತಾನೆ ಅಂತ ಮಾಲು ಅವರಿಂದ ಹೇಗೆ ಗೊತ್ತಾಗುತ್ತೆ?—2ಕೊರಿಂ 4:7

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ