ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಸೆಪ್ಟೆಂಬರ್‌ ಪು. 7
  • ಯೆಹೋವನ ಜನ್ರಿಗೆ ಒಳ್ಳೇದಾಗಬೇಕು ಅಂತ ಕಷ್ಟಪಟ್ಟು ಕೆಲಸ ಮಾಡ್ತಿರೋ ಕುರುಬರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಜನ್ರಿಗೆ ಒಳ್ಳೇದಾಗಬೇಕು ಅಂತ ಕಷ್ಟಪಟ್ಟು ಕೆಲಸ ಮಾಡ್ತಿರೋ ಕುರುಬರು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ‘ಹಿರಿಯರ ಹತ್ರ ಮಾತಾಡಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಪಾಪ ಮಾಡಿದವ್ರಿಗೆ ಹಿರಿಯರು ತೋರಿಸೋ ಪ್ರೀತಿ, ಕರುಣೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಸಹೋದರರೇ, ಹಿರಿಯರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಸೆಪ್ಟೆಂಬರ್‌ ಪು. 7

ನಮ್ಮ ಕ್ರೈಸ್ತ ಜೀವನ

ಯೆಹೋವನ ಜನ್ರಿಗೆ ಒಳ್ಳೇದಾಗಬೇಕು ಅಂತ ಕಷ್ಟಪಟ್ಟು ಕೆಲಸ ಮಾಡ್ತಿರೋ ಕುರುಬರು

ಅಧಿಕಾರದ ಸ್ಥಾನದಲ್ಲಿ ಇರೋರ ಮೇಲೆ ಜನ್ರಿಗೆ ನಂಬಿಕೆ ಇಲ್ಲ. ಯಾಕಂದ್ರೆ ಇಲ್ಲಿ ತನಕ ಆ ಸ್ಥಾನದಲ್ಲಿ ಇರೋರು ತಮ್ಮ ಲಾಭಕ್ಕೋಸ್ಕರ ಅಧಿಕಾರನ ದುರುಪಯೋಗಿಸಿದ್ದಾರೆ. (ಮೀಕ 7:3) ಆದ್ರೆ ನಮ್ಮ ಸಭೆಯಲ್ಲಿರೋ ಹಿರಿಯರು ಹಾಗಲ್ಲ. ಅವರು ತಮಗೆ ಸಿಕ್ಕಿರೋ ಅಧಿಕಾರನ ತಮ್ಮ ಲಾಭಕ್ಕೋಸ್ಕರ ಉಪಯೋಗಿಸ್ಕೊಳ್ಳಲ್ಲ. ನಮಗೆ ಸಹಾಯ ಮಾಡೋಕೆ ಉಪಯೋಗಿಸ್ತಾರೆ. ಇಂಥ ಹಿರಿಯರಿಗೆ ನಾವು ತುಂಬ ಥ್ಯಾಂಕ್ಸ್‌ ಹೇಳ್ತೀವಿ.—ಎಸ್ತೇ 10:3; ಮತ್ತಾ 20:25, 26.

ಲೋಕದ ನಾಯಕರು ತಮ್ಮ ಸ್ವಾರ್ಥಕ್ಕೋಸ್ಕರ ಅಧಿಕಾರ ಗಿಟ್ಟಿಸ್ಕೊಳ್ಳೋಕೆ ನೋಡ್ತಾರೆ. ಆದ್ರೆ ನಮ್ಮ ಹಿರಿಯರು ಸ್ವಾರ್ಥಕ್ಕೋಸ್ಕರ ಅಲ್ಲ, ಯೆಹೋವನ ಮೇಲೆ ಮತ್ತು ಆತನ ಜನ್ರ ಮೇಲೆ ಪ್ರೀತಿ ಇರೋದ್ರಿಂದ ಆ ಅಧಿಕಾರನ ಪಡ್ಕೊಂಡಿದ್ದಾರೆ. (ಯೋಹಾ 21:16; 1ಪೇತ್ರ 5:1-3) ಅವರು ಯಾವಾಗ್ಲೂ ಯೇಸು ಹೇಳಿದ ಹಾಗೆ ಮಾಡ್ತಾರೆ. ಯೆಹೋವನ ಜೊತೆ ನಮ್ಮ ಫ್ರೆಂಡ್‌ಶಿಪ್‌ ಯಾವಾಗ್ಲೂ ಚೆನ್ನಾಗಿರೋ ತರ ನೋಡ್ಕೊಳ್ತಾರೆ. ನಾವು ಯೆಹೋವನ ಕುಟುಂಬದವರು ಅಂತ ನಮಗೆ ಅನಿಸೋ ಹಾಗೆ ನಡ್ಕೊಳ್ತಾರೆ. ನಮ್ಮ ಆರೋಗ್ಯ ಹಾಳಾಗಿ ತುರ್ತುಪರಿಸ್ಥಿತಿ ಬಂದ್ರೆ ಅಥವಾ ಏನಾದ್ರೂ ವಿಪತ್ತುಗಳಾದ್ರೆ ತಕ್ಷಣ ನಮಗೆ ಸಹಾಯ ಮಾಡೋಕೆ ಸಮಾಧಾನ ಮಾಡೋಕೆ ರೆಡಿ ಇರ್ತಾರೆ. ನಿಮಗೂ ಏನಾದ್ರೂ ಸಹಾಯ ಬೇಕಿದ್ರೆ ಯಾವಾಗ ಬೇಕಾದ್ರೂ ನಿಮ್ಮ ಸಭೆಯ ಹಿರಿಯರನ್ನ ಕೇಳಿ.—ಯಾಕೋ 5:14.

“ಕುರುಬರಂತೆ ಕಷ್ಟಗಳಿಗೆ ಸ್ಪಂದಿಸೋ ಹಿರಿಯರು” ಅನ್ನೋ ವಿಡಿಯೋದಲ್ಲಿ ಬರೋ ಒಂದು ದೃಶ್ಯ. ಒಬ್ಬ ಹಿರಿಯ ಸಹೋದರ ಎಲಿಯಾಸ್‌ ಅವ್ರನ್ನ ಖುಷಿಯಿಂದ ಅಪ್ಕೊಂಡಿದ್ದಾರೆ.

ಕುರುಬರಂತೆ ಕಷ್ಟಗಳಿಗೆ ಸ್ಪಂದಿಸೋ ಹಿರಿಯರು ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಹಿರಿಯರು ಸಹಾಯ ಮಾಡಿದ್ರಿಂದ ಮಾರಿಯಾನಗೆ ಹೇಗೆ ಸಹಾಯ ಆಯ್ತು?

  • ಹಿರಿಯರು ಸಹಾಯ ಮಾಡಿದ್ರಿಂದ ಎಲಿಯಾಸ್‌ಗೆ ಹೇಗೆ ಪ್ರಯೋಜನ ಆಯ್ತು?

  • ಈ ವಿಡಿಯೋ ನೋಡಿದ ಮೇಲೆ ಹಿರಿಯರು ಮಾಡ್ತಿರೋ ಕೆಲಸದ ಬಗ್ಗೆ ನಿಮಗೆ ಏನನಿಸ್ತಿದೆ?

ಹಿರಿಯನ ಸಹಾಯ ಪಡ್ಕೊಳಿ . . .

  • ನಿಮ್ಮ ವಿಳಾಸ ಮತ್ತು ಫೋನ್‌ ನಂಬರ್‌ ಬದಲಾದಾಗ

  • ನೀವು ತುಂಬ ಕಷ್ಟದಲ್ಲಿರುವಾಗ

  • ತುಂಬ ಸಮಯದ ತನಕ ಸಭೆಯಿಂದ ದೂರ ಇರುವಾಗ

  • ನಿಮ್ಮ ಆರೋಗ್ಯ ಹದಗೆಟ್ಟಾಗ ಅಥವಾ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆದಾಗ

  • ದೇವರ ವಿರುದ್ಧ ದೊಡ್ಡ ತಪ್ಪು ಮಾಡಿದಾಗ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ