ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w20 ಫೆಬ್ರವರಿ ಪು. 31
  • ನಿಮಗೆ ಗೊತ್ತಿತ್ತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ಗೊತ್ತಿತ್ತಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಅನುರೂಪ ಮಾಹಿತಿ
  • ದುರಭಿಮಾನಿ ಪ್ರಭುವಿನ ಸಾಮ್ರಾಜ್ಯ ನಷ್ಟ
    ಕಾವಲಿನಬುರುಜು—1998
  • ಜಗತ್ತನ್ನೇ ಬದಲಾಯಿಸಿದ ನಾಲ್ಕು ಪದಗಳು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ದಾನಿಯೇಲ—ಪರೀಕ್ಷೆಗೊಳಗಾಗಿರುವ ಒಂದು ಪುಸ್ತಕ
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
w20 ಫೆಬ್ರವರಿ ಪು. 31
ಬೇಲ್ಶಚ್ಚರನ ಹೆಸರಿರೋ ಮಣ್ಣಿನ ಸಿಲಿಂಡರ್‌.

ಬೇಲ್ಶಚ್ಚರನ ಹೆಸರಿರೋ ಮಣ್ಣಿನ ಸಿಲಿಂಡರ್‌

ನಿಮಗೆ ಗೊತ್ತಿತ್ತಾ?

ಬ್ಯಾಬಿಲೋನಿನ ರಾಜ ಬೇಲ್ಶಚ್ಚರ ನಿಜವಾಗಿಯೂ ಇದ್ನು ಅನ್ನೋದಕ್ಕೆ ಪ್ರಾಕ್ತನಶಾಸ್ತ್ರ ಯಾವ ಆಧಾರ ಕೊಡುತ್ತೆ?

ಬೈಬಲಿನ ವಿಮರ್ಶಕರು ದಾನಿಯೇಲ ಪುಸ್ತಕದಲ್ಲಿ ತಿಳಿಸಲಾಗಿರೋ ರಾಜ ಬೇಲ್ಶಚ್ಚರ ಅಸ್ತಿತ್ವದಲ್ಲೇ ಇರ್ಲಿಲ್ಲ ಎಂದು ಅನೇಕ ವರ್ಷಗಳಿಂದ ಹೇಳ್ತಿದ್ರು. (ದಾನಿ. 5:1) ಅವ್ರು ಯಾಕೆ ಈ ರೀತಿ ಹೇಳ್ತಿದ್ರಂದ್ರೆ ಅವ್ನು ನಿಜವಾಗ್ಲೂ ಇದ್ನು ಅನ್ನೋದಕ್ಕೆ ಪ್ರಾಕ್ತನಾಶಾಸ್ತ್ರಜ್ಞರಿಗೆ ಯಾವ್ದೇ ಆಧಾರ ಸಿಕ್ಕಿರ್ಲಿಲ್ಲ. ಆದ್ರೆ 1854 ರಲ್ಲಿ ಆ ವಿಮರ್ಶಕರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಬೇಕಾಯ್ತು. ಯಾಕೆ?

ಬ್ರಿಟಿಷ್‌ ರಾಯಭಾರಿಯಾಗಿದ್ದ ಜೆ.ಜಿ.ಟೇಲರ್‌ ಆ ವರ್ಷದಲ್ಲಿ ಇರಾಕಿನ ದಕ್ಷಿಣ ಭಾಗದಲ್ಲಿರೋ ಪ್ರಾಚೀನ ಪಟ್ಟಣವಾದ ಊರ್‌ನ ಅವಶೇಷಗಳನ್ನು ಪರಿಶೋಧಿಸಿದ್ನು. ಅಲ್ಲಿದ್ದ ಒಂದು ಗೋಪುರದಲ್ಲಿ ಅನೇಕ ಮಣ್ಣಿನ ಸಿಲಿಂಡರ್‌ಗಳು ಸಿಕ್ಕಿದವು. ಪ್ರತಿಯೊಂದು ಸಿಲಿಂಡರ್‌ಗಳು ಸುಮಾರು ನಾಲ್ಕು ಇಂಚಿನಷ್ಟು (10 ಸೆಂ.ಮೀ.) ಉದ್ದವಿದ್ದವು. ಅವುಗಳ ಮೇಲೆ ಕ್ಯೂನಿಫಾರಮ್‌ ಲಿಪಿ ಅಥವಾ ಬೆಣೆ ಲಿಪಿಯ ಬರಹಗಳಿದ್ದವು. ಒಂದು ಸಿಲಿಂಡರ್‌ ಮೇಲಿದ್ದ ಬರಹದಲ್ಲಿ, ಬ್ಯಾಬಿಲೋನಿನ ರಾಜನಾದ ನೆಬೊನೈಡಸ್‌ ಮತ್ತು ಅವ್ನ ಮೊದಲ ಮಗನಾಗಿದ್ದ ಬೇಲ್ಶಚ್ಚರನು ದೀರ್ಘಕಾಲ ಬಾಳ್ಬೇಕಂತ ಮಾಡಿದ ಪ್ರಾರ್ಥನೆ ಇತ್ತು. ಈ ಆಧಾರ ಸಿಕ್ಕಿದ್ರಿಂದ ಬೇಲ್ಶಚ್ಚರನು ನಿಜವಾಗಿಯೂ ಇದ್ನು ಅನ್ನೋದು ರುಜುವಾಯ್ತು. ಕೊನೆಗೆ ವಿಮರ್ಶಕರು ಅದನ್ನ ಒಪ್ಕೋಬೇಕಾಯ್ತು.

ಆದ್ರೆ ಬೇಲ್ಶಚ್ಚರ ಇದ್ನು ಅಂತಷ್ಟೇ ಅಲ್ಲ ಅವನೊಬ್ಬ ರಾಜನಾಗಿದ್ನು ಅಂತ ಬೈಬಲ್‌ ಹೇಳುತ್ತೆ. ಈ ವಿಷ್ಯದಿಂದ ವಿಮರ್ಶಕರಿಗೆ ಪುನಃ ಸಂಶಯ ಬಂತು. ಉದಾಹರಣೆಗೆ 19ನೆ ಶತಮಾನದಲ್ಲಿದ್ದ ಇಂಗ್ಲಿಷ್‌ ವಿಜ್ಞಾನಿ ವಿಲಿಯಮ್‌ ಟಾಲ್ಬಟ್‌ ಹೀಗೆ ಬರೆದ್ನು: “ಕೆಲವ್ರು ಬೇಲ್ಶಚ್ಚರ ತನ್ನ ತಂದೆಯಾದ ನೆಬೊನೈಡಸ್‌ನ ಜೊತೆ-ಜೊತೆಯಲ್ಲೇ ರಾಜನಾಗಿ ಆಳ್ತಿದ್ನು ಅಂತ ಹೇಳ್ತಾರೆ. ಆದ್ರೆ ಇದಕ್ಕೆ ಒಂಚೂರೂ ಆಧಾರ ಇಲ್ಲ.”

ಆದ್ರೆ ಇನ್ನೂ ಕೆಲವು ಮಣ್ಣಿನ ಸಿಲಿಂಡರ್‌ಗಳು ಸಿಕ್ಕಿದ್ಮೇಲೆ ಅವ್ರಿಗಿದ್ದ ಈ ಸಂಶಯಕ್ಕೂ ಉತ್ತರ ಸಿಕ್ತು. ಆ ಸಿಲಿಂಡರ್‌ ಮೇಲಿದ್ದ ಬರಹಗಳಿಂದ ಬೇಲ್ಶಚ್ಚರನ ತಂದೆಯಾಗಿದ್ದ ರಾಜ ನೆಬೊನೈಡಸ್‌ ಕೆಲವು ವರ್ಷ ಬ್ಯಾಬಿಲೋನಿನ ಸಾಮ್ರಾಜ್ಯದಲ್ಲಿ ಇರ್ಲಿಲ್ಲ ಅಂತ ಗೊತ್ತಾಯ್ತು. ಅವ್ನು ಇಲ್ದಿದ್ದಾಗ ಏನಾಯಿತು? ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಹೇಳುವಂತೆ, “ರಾಜ ನೆಬೊನೈಡಸ್‌ ಬೇರೆ ಪ್ರದೇಶಕ್ಕೆ ಹೋಗ್ವಾಗ ರಾಜ್ಯಭಾರವನ್ನ ಮತ್ತು ಮಿಲಿಟರಿಯ ಬಹುಪಾಲನ್ನ ಬೇಲ್ಶಚ್ಚರನಿಗೆ ಒಪ್ಪಿಸಿದ್ನು.” ಅಂದ್ರೆ ಆ ಸಮ್ಯದಲ್ಲಿ ಬೇಲ್ಶಚ್ಚರನು ಬ್ಯಾಬಿಲೋನಿನ ಸಹರಾಜನಾಗಿ ಆಳಿದ್ನು. ಹಾಗಾಗಿ “ಬೇಲ್ಶಚ್ಚರನನ್ನು ‘ರಾಜ’ ಅಂತ ದಾನಿಯೇಲ ಪುಸ್ತಕದಲ್ಲಿ ತಿಳ್ಸಿರೋದು” ಸೂಕ್ತವಾಗಿದೆ ಅಂತ ಪ್ರಾಕ್ತನಶಾಸ್ತ್ರಜ್ಞ ಮತ್ತು ಭಾಷಾ ಪಂಡಿತರಾದ ಆ್ಯಲನ್‌ ಮಿಲ್ಲರ್ಡ್‌ರವ್ರು ಹೇಳಿದ್ರು.

ದೇವ್ರ ಸೇವಕರಿಗೆ ದಾನಿಯೇಲ ಪುಸ್ತಕ ಭರವಸಾರ್ಹವಾದದ್ದು ದೇವ್ರಿಂದ ಪ್ರೇರಿತವಾಗಿರೋದು ಅನ್ನೋದಕ್ಕೆ ಮುಖ್ಯ ಆಧಾರ ಬೈಬಲಿನಿಂದಲೇ ಸಿಕ್ಕಿದೆ.—2 ತಿಮೊ. 3:16.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ