ಪೀಠಿಕೆ
ಪ್ರಾರ್ಥನೆ ಮಾಡ್ದಾಗ ದೇವರು ಅದನ್ನ ಕೇಳಿಸಿಕೊಂಡಿಲ್ಲ ಅಂತ ಯಾವಾಗಲಾದ್ರು ನಿಮಗೆ ಅನಿಸಿದ್ಯಾ? ನಿಮ್ಮೊಬ್ರಿಗೆ ಅಲ್ಲ ತುಂಬ ಜನರಿಗೆ ಹೀಗೆ ಅನಿಸಿದೆ. ಯಾಕಂದ್ರೆ ಸಹಾಯ ಬೇಕಂತ ದೇವರಿಗೆ ಪ್ರಾರ್ಥಿಸಿದ್ರೂ ಅವರ ಸಮಸ್ಯೆಗಳಿಗೆ ಪರಿಹಾರನೇ ಸಿಕ್ಕಿಲ್ಲ. ದೇವರು ನಮ್ಮ ಪ್ರಾರ್ಥನೆನ ಖಂಡಿತ ಕೇಳ್ತಾನೆ ಅಂತ ಹೇಗೆ ಭರವಸೆ ಇಡಬಹುದು, ಕೆಲವು ಪ್ರಾರ್ಥನೆಗಳಿಗೆ ದೇವರು ಯಾಕೆ ಉತ್ರ ಕೊಡಲ್ಲ ಮತ್ತು ಕೊಡಬೇಕಂದ್ರೆ ಹೇಗೆ ಪ್ರಾರ್ಥಿಸಬೇಕು ಅನ್ನೋ ಪ್ರಶ್ನೆಗಳಿಗೆ ಈ ಪತ್ರಿಕೆಯಲ್ಲಿ ಉತ್ರ ತಿಳುಕೊಳ್ಳೋಣ.